For Quick Alerts
  ALLOW NOTIFICATIONS  
  For Daily Alerts

  ಪತ್ನಿ ಆತ್ಮಹತ್ಯೆ ಪ್ರಕರಣ: ನಟನನ್ನು ಬಂಧಿಸಿದ ಪೊಲೀಸರು

  |

  ಮಲಯಾಳಂ ಚಿತ್ರರಂಗದ ಖ್ಯಾತ ನಟ ದಿವಂಗತ ರಾಜ ಪಿ ದೇವ್ ಅವರ ಪುತ್ರ ಉನ್ನಿ ದೇವ್ ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಪ್ರಿಯಾಂಕಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಸಿದಂತೆ ಪೊಲೀಸರು ಇಂದು (ಮೇ 25) ಉನ್ನಿ ದೇವ್ ನನ್ನು ಅರೆಸ್ಟ್ ಮಾಡಿದ್ದಾರೆ.

  ಉನ್ನಿ ದೇವ್ ಪತ್ನಿ ಪ್ರಿಯಾಂಕಾ ಕಳೆದ ವಾರ ತಿರುವನಂತಪುರಂ ಜಿಲ್ಲೆಯ ವೆಂಬಾಯಂ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಿಯಾಂಕಾ ಸಾಯುವ ಮೊದಲ ದಿನ ಪತಿ ಉನ್ನಿ ದೇವ್ ವಿರುದ್ಧ ದೂರು ದಾಖಲಿಸಿದ್ದರು ಎಂದು ತಿಳಿದುಬಂದಿದೆ.

  ಕಂಗನಾ ಬಾಡಿಗಾರ್ಡ್ ವಿರುದ್ಧ ಅತ್ಯಾಚಾರ ಆರೋಪ: ಕರ್ನಾಟಕಕ್ಕೆ ಇರುವ ಲಿಂಕ್ ಏನು?ಕಂಗನಾ ಬಾಡಿಗಾರ್ಡ್ ವಿರುದ್ಧ ಅತ್ಯಾಚಾರ ಆರೋಪ: ಕರ್ನಾಟಕಕ್ಕೆ ಇರುವ ಲಿಂಕ್ ಏನು?

  ಪ್ರಿಯಾಂಕಾ ಸಾವಿನ ಬಳಿಕ ಆಕೆಯ ಕುಟುಂಬ ಉನ್ನಿ ದೇವ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದರು. ಪ್ರಿಯಾಂಕಾ ದೇಹದಲ್ಲಿ ಹಲ್ಲೆಯ ಗುರುತುಗಳಿದ್ದು, ಫ್ಲಾಟ್ ನಿಂದ ಹೊರಹೋಗುವಂತೆ ಬಲವಂತ ಮಾಡಲಾಗಿದೆ ಎಂದು ಪ್ರಿಯಾಂಕಾ ಕುಟುಂಬ ಆರೋಪಿಸಿದೆ. ಪ್ರಿಯಾಂಕಾ ಸಹೋದರನ ದೂರಿನ ಮೇರೆಗೆ ಪೋಲೀಸರು ಉನ್ನಿ ದೇವ್ ನನ್ನು ಬಂಧಿಸಿದ್ದಾರೆ.

  ಕೊರೊನಾ ವರದಿ ನೆಗೆಟಿವ್ ಬಂದ ಬಳಿಕ ಆತನನ್ನು ಬಂಧಿಸಿ ವಿಚಾರಣೆ ನಡೆಯುತ್ತಿದ್ದಾರೆ. ಪ್ರಿಯಾಂಕಾ ಮತ್ತು ಉನ್ನಿ ದೇವ್ 2019ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ ಒಂದು ವರ್ಷದೊಳಗೆ ಇಬ್ಬರ ನಡುವೆ ವೈಮನಸ್ಸು ಪ್ರಾರಂಭವಾಗಿತ್ತು, ಕಳೆದ ವರ್ಷ ವರ್ಷ ಲಾಕ್ ಡೌನ್ ಸಮಯದಲ್ಲಿ ಸಿಕ್ಕಾಪಟ್ಟೆ ಜಗಳವಾಡುತ್ತಿದ್ದರು ಎಂದು ಪ್ರಿಯಾಂಕಾ ಸಂಬಂಧಿಕರು ಹೇಳಿದ್ದಾರೆ.

  Sonu Sood ತಮ್ಮ ಅಭಿಮಾನಿಗಳಿಗೆ ಹೀಗೆ ಮಾಡಬೇಡಿ ಅಂದಿದ್ದಾರೆ | Filmibeat Kannada

  ನೆಗೆಟಿವ್ ಪಾತ್ರಗಳ ಮೂಲಕ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದ ನಟ ಪಿ ರಾಜ ದೇವ್ ಪುತ್ರ ಉನ್ನಿ ದೇವ್ ಕಿರುತೆರೆ ಮೂಲಕ ವೃತ್ತಿ ಜೀವನ ಪ್ರಾರಂಭ ಮಾಡಿದ್ದರು. ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Malayalam Actor Unni Dev Arrested in wife's suicide case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X