ಶೇನ್ ನಿಗಮ್ ನಿಗಮ್, ಶ್ರೀನಾಥ್ ಇಬ್ಬರು ನಟರು ಮಲಯಾಳಂನಿಂದ ಬ್ಯಾನ್: ಯಾಕೆ?
ಮಲಯಾಳಂ ಚಿತ್ರರಂಗದಲ್ಲಿ ಶಾಕಿಂಗ್ ಬೆಳವಣಿಗೆ ನಡೆದಿದೆ. ಮಲಯಾಳಂ ಚಿತ್ರರಂಗದ ಸಂಘಗಳಾದ AMMA, FEFKA ಹಾಗೂ ನಿರ್ಮಾಪಕರ ಸಂಘಗಳು ಇಬ್ಬರು ನಟರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲು ನಿರ್ಧರಿಸಿದೆ.
ಏಪ್ರಿಲ್ 25ರಂದು ಕೇರಳದ ಫಿಲ್ಮ್ ವರ್ಕರ್ಸ್ ಅಸೋಸಿಯೇಷನ್ ಜಂಟಿಯಾಗಿ ನಟರಾದ ಶೇನ್ ನಿಗಮ್ ಹಾಗೂ ಶ್ರೀನಾಥ್ ಇಬ್ಬರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ನಿರ್ಧಾರ ಕೈಗೊಂಡಿದೆ. ಕೆಟ್ಟ ವರ್ತನೆಯನ್ನು ಆಧರಿಸಿದ ಇಬ್ಬರನ್ನು ಬ್ಯಾನ್ ಮಾಡಲಾಗಿದೆ.
ಶೇನ್ ನಿಗಮ್ ಹಾಗೂ ಶ್ರೀನಾಥ್ ಇಬ್ಬರ ಮೇಲೆ ನಿರ್ಮಾಪಕರು ಹಲವು ಆರೋಪಗಳನ್ನು ಮಾಡಲಾಗಿತ್ತು. ನಿರ್ಮಾಪಕ ರಂಜಿತ್ ಪತ್ರಿಕಾ ಗೋಷ್ಠಿಯಲ್ಲಿ ಇಬ್ಬರು ನಟರಿಗೆ ಸಹಕಾರ ನೀಡದಂತೆ ತೀರ್ಮಾನ ಕೈಗೊಂಡಿದ್ದಾರೆ. ಮಾದಕ ಸೇವನೆ ಮಾಡುವ ನಟರೊಂದಿಗೆ ಸಿನಿಮಾ ಮಾಡದೆ ಇರಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಶೇನ್ ನಿಗಮ್ ಮತ್ತು ಶ್ರೀನಾಥ್ ಕೆಟ್ಟದಾಗಿ ವರ್ತನೆ ಮಾಡಿದ್ದಾರೆಂಬ ಆರೋಪ ಮಾಡಿದ್ದಾರೆ.
ಬ್ಯಾನ್ ಮಾಡಿದ್ದು ಏಕೆ?
ಶೇನ್ ನಿಗಮ್ ಹಾಗೂ ಶ್ರೀನಾಥ್ ಇಬ್ಬರೂ ಮಾದಕ ವ್ಯಸನಿಗಳಾಗಿದ್ದಾರೆ. ಡ್ರಗ್ಸ್ ತೆಗೆದುಕೊಂಡು ಸಿನಿಮಾ ಸೆಟ್ಟಿಗೆ ಬರುತ್ತಿದ್ದರು. ಇದು ನಿರ್ಮಾಣ ಸಂಸ್ಥೆಗೆ, ಸಿನಿಮಾದ ನಟ ನಟಿಯರಿಗೆ ಸಿಕ್ಕಾಪಟ್ಟೆ ತೊಂದರೆಯಾಗಿತ್ತು. ಡ್ರಗ್ಸ್ ತೆಗೆದುಕೊಂಡು ಸೆಟ್ಟಿಗೆ ಬರುವುದರಿಂದ ನಿರ್ಮಾಪಕರಿಗೆ ತೊಂದರೆಯಾಗಿದೆ ಎಂದು ನಿರ್ಮಾಪಕ ರಂಜಿತ್ ಆರೋಪ ಮಾಡಿದ್ದಾರೆ.

ಈ ಇಬ್ಬರೂ ನಟರೂ ಒಂದೇ ಡೇಟ್ ಅನ್ನು ಎರಡು ನಿರ್ಮಾಣ ಸಂಸ್ಥೆಗಳಿಗೆ ನೀಡುತ್ತಿದ್ದರು. ಇದು ಎರಡೂ ಸಿನಿಮಾಗಳ ನಿರ್ಮಾಪಕರಿಗೂ ತೊಂದರೆಯನ್ನುಂಟು ಮಾಡಿತ್ತು. ಅಲ್ಲದೆ ಅಗತ್ಯ ಬಿದ್ದಾಗ ಫೋನ್‌ಗಳನ್ನೇ ರಿಸೀವ್ ಮಾಡುವುದಿಲ್ಲ ಎಂದು ಕೇರಳದ ನಿರ್ಮಾಪಕರು ಆರೋಪ ಮಾಡಿದ್ದಾರೆ.


Click it and Unblock the Notifications











