ಶಾಪಿಂಗ್ ಮಾಲ್ ನಲ್ಲಿ ಲೈಂಗಿಕ ಕಿರುಕುಳ; ಕಹಿ ಘಟನೆ ಬಿಚ್ಚಿಟ್ಟ 'ಕಪ್ಪೆಲಾ' ನಟಿ
ಮಲಯಾಳಂನ ಹೆಲೆನ್ ಮತ್ತು ಕಪ್ಪೆಲಾ ಸಿನಿಮಾ ಖ್ಯಾತಿಯ ನಟಿ ಅನ್ನಾ ಬೆನ್ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. ಕೊಚ್ಚಿಯ ಶಾಪಿಂಗ್ ಮಾಲ್ ನಲ್ಲಿ ನಡೆದ ಕಹಿ ಘಟನೆಯನ್ನು ಅನ್ನಾ ಬೆನ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಕುಟುಂಬದ ಜೊತೆ ಶಾಪಿಂಗ್ ಗೆ ತೆರಳಿದ್ದ ನಟಿ ಅನ್ನಾ ಬೆನ್ ಗೆ ಅನಾಮಿಕ ವ್ಯಕ್ತಿಯೊಬ್ಬ ಆಕೆ ದೇಹವನ್ನು ಕೆಟ್ಟದಾಗಿ ಸ್ಪರ್ಶಿಸಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ವಿವರವಾಗಿ ಬರೆದುಕೊಂಡಿರುವ ಅನ್ನಾ ಬೆಲ್ ಇಂಥ ಘಟನೆ ಬಗ್ಗೆ ಮಹಿಳೆಯರು ಬಲವಾಗಿ ಪ್ರತಿಕ್ರಿಯೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಮುಂದೆ ಓದಿ...

ಹೈಪರ್ ಮಾರ್ಕೆಟ್ ನಲ್ಲಿ ನಡೆದಿದ್ದೇನು?
'ಲುಲು ಹೈಪರ್ ಮಾರ್ಕೆಟ್ ಬಳಿ, ತುಂಬಾ ವಿಸ್ತಾರವಾದ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಹಿಂದೆ ನಡೆದುಕೊಂಡು ಬರುತ್ತಿದ್ದರು. ಹೆಚ್ಚು ಜನರಿದ್ದ ಸ್ಥಳವಾಗಿತ್ತು. ಒಬ್ಬ ನನ್ನ ಹಿಂದೆ ನಡೆದುಕೊಂಡು ಬರುವಾಗ ಉದ್ದೇಶಪೂರ್ವಕವಾಗಿ ನನ್ನ ಬೆನ್ನಮೇಲೆ ಕೈ ಹಾಕಿದ್ದಾನೆ. ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ಆತ ಅಲ್ಲಿಂದ ಹೊರಟು ಹೋಗಿದ್ದ.' ಎಂದಿದ್ದಾರೆ.

ಘಟನೆ ಬಗ್ಗೆ ನನಗೆ ಇನ್ನೂ ಕೋಪವಿದೆ
'ಅಲ್ಲಿ ಏನಾಯಿತು ಎಂದು ನನಗೆ ಅರ್ಥವಾಗಿದೆ ಎಂದು ಅವನಿಗೆ ತಿಳಿದಿದೆ. ಈ ಘಟನೆ ಬಗ್ಗೆ ನನಗೆ ಇನ್ನೂ ಕೋಪವಿದೆ. ನಾನು ಏನು ಹೇಳಬೇಕೆಂದು ತಿಳಿಯಲಿಲ್ಲ. ಮತ್ತೆ ಇಬ್ಬರು ಫಾಲೋಮಾಡಿಕೊಂಡು ಬಂದರು, ನನ್ನ ಜೊತೆ ಮಾತನಾಡಲು ಬಯಸಿದರು, ನನ್ನ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದರು. ನನ್ನ ತಾಯಿಯನ್ನು ನೋಡಿದ ನಂತರ ಅವರು ಅಲ್ಲಿಂದ ಹೊರಟು ಹೋದರು' ಎಂದಿದ್ದಾರೆ.

ಮನೆಯಿಂದ ಹೊರಹೋದಾಗ ಜಾಗರೂಕರಾಗಿರಬೇಕು
ಪ್ರತಿಕ್ಷಣ ಮನೆಯಿಂದ ಹೊರನಡೆದಾಗ ಪ್ರತಿ ಕ್ಷಣವೂ ನಮ್ಮನ್ನು ನಾವು ಜಾಗರೂಕರಾಗಿರಬೇಕು. ಬಟ್ಟೆ ಬಗ್ಗೆ ಆಗಾಗ ನೋಡಿಕೊಳ್ಳುತ್ತಿರಬೇಕು, ಜನಸಂದಣಿ ಇದ್ದ ಜಾಗದಲ್ಲಿ ನನ್ನ ಕೈಗಳಿಂದ ನನ್ನ ಎದೆಯ ಭಾಗವನ್ನು ಕಾಪಾಡಿಕೊಳ್ಳಬೇಕು. ಇದನ್ನೆಲ್ಲ ನೋಡಿದಾಗ ನನ್ನ ತಾಯಿ, ಸಹೋದರಿ, ಸ್ನೇಹಿತೆಯರಿಗೂ ಇದೇ ರೀತಿ ಆಗಿರಬಹುದೇನೋ ಅಂದುಕೊಳ್ಳುತ್ತೇನೆ. ಇದೆಲ್ಲಾ ಇಂಥ ಕೆಟ್ಟ ಪುರುಷರಿಂದ. ನೀವು ನಮ್ಮ ಸುರಕ್ಷತೆಯನ್ನು ಕಿತ್ತುಕೊಳ್ಳುತ್ತೀರಿ. ನೀವು ನಮ್ಮ ಆರಾಮ ಮತ್ತು ನಮ್ಮ್ ಸ್ತ್ರೀತ್ವದ ಸಂತೋಷವನ್ನು ಕಿತ್ತುಕೊಳ್ಳುತ್ತೀರಿ, ನಾನು ನಿಮ್ಮಂತವರನ್ನು ತಿರಸ್ಕರಿಸುತ್ತೇನೆ' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.
Recommended Video

ನರಕವನ್ನು ಹೊರತುಪಡಿಸಿ ಯಾವುದಕ್ಕೂ ಅರ್ಹರಲ್ಲ
'ಮಹಿಳೆಯರಿಗೆ ಮುಜುಗರ ಉಂಟಾಗುವಂತ ಯಾವುದೇ ಕೆಲಸವನ್ನು ಮಾಡಿದರೆ, ನೀವು ಜೀವನದ ಅತ್ಯಂತ ಕೆಳಮಟ್ಟದ ವ್ಯಕ್ತಿಯಾಗಿರುತ್ತೀರಿ. ನಿವು ನರಕವನ್ನು ಹೊರತುಪಡಿಸಿ ಯಾವುದಕ್ಕೂ ಅರ್ಹರಲ್ಲ. ಈ ಪೋಸ್ಟ್ ಓದಿದ ಎಲ್ಲಾ ಮಹಿಳೆಯರಿಗೆ, ಇಂತಹ ಘಟನೆಗಳು ನಿಮ್ಮ ಜೀವನದಲ್ಲಿ ನಡೆದಾಗ ಬಲವಾದ ಪ್ರತಿಕ್ರಿಯೆ ನೀಡುತ್ತೀರಿ ಎಂದು ನಾನು ಭಾವಿಸಿದ್ದೇನೆ' ಎಂದು ಬರೆದುಕೊಂಡಿದ್ದಾರೆ.'


Click it and Unblock the Notifications











