For Quick Alerts
  ALLOW NOTIFICATIONS  
  For Daily Alerts

  ಪೂಜಾ ಹೆಗ್ಡೆ ಬಳಿಕ ದಳಪತಿ ವಿಜಯ್ ಸಿನಿಮಾಗೆ ಮತ್ತೋರ್ವ ಸ್ಟಾರ್ ನಟಿಯ ಎಂಟ್ರಿ

  |

  ತಮಿಳು ಸ್ಟಾರ್ ನಟ ವಿಜಯ್ ನಟನೆಯ 65ನೇ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಚೆನ್ನೈನಲ್ಲಿ ನಡೆದ ದಳಪತಿ 65 ಚಿತ್ರದ ಪೂಜಾ ಸಮಾರಂಭಕ್ಕೆ ಇಡೀ ಚಿತ್ರತಂಡ ಹಾಜರಿತ್ತು. ಆದರೆ ಸಿನಿಮಾ ನಾಯಕಿಯರ ಗೈರು ಎದ್ದು ಕಾಣುತ್ತಿತ್ತು.

  ಅಂದಹಾಗೆ ದಳಪತಿ ವಿಜಯ್ 65ನೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪೂಜಾ ಹೆಗ್ಡೆ ಪಾಲಾಗಿದೆ. ಮೊದಲ ಬಾರಿಗೆ ವಿಜಯ್ ಜೊತೆ ರೊಮ್ಯಾನ್ಸ್ ಮಾಡುತ್ತಿರುವ ಪೂಜಾ ಮುಹೂರ್ತ ಸಮಾರಂಭಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೇಸರ ವ್ಯಕ್ತ ಪಡಿಸಿದ್ದರು.

  ವಿಜಯ್ 'ದಳಪತಿ 65' ಚಿತ್ರದ ಅದ್ದೂರಿ ಮುಹೂರ್ತ: ಪೂಜಾ ಹೆಗ್ಡೆ ಗೈರಾಗಿದ್ದೇಕೆ?

  ವಿಜಯ್ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಪೂಜಾ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಮತ್ತೋರ್ವ ನಟಿಯ ಎಂಟ್ರಿಯಾಗಿದೆ. ವಿಜಯ್ ಹೊಸ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಮಲಯಾಳಂ ಸುಂದರಿ ಅಪರ್ಣಾ ದಾಸ್ ಕಾಣಿಸಿಕೊಳ್ಳುತ್ತಿದ್ದಾರೆ.

  ಈ ಬಗ್ಗೆ ಸ್ವತಃ ಅಪರ್ಣಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮುಹೂರ್ತ ಸಮಾರಂಭಕ್ಕೆ ನಟಿ ಅಪರ್ಣಾ ಕೂಡ ಗೈರಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಅಪರ್ಣಾ, 'ದಳಪತಿ 65 ಚಿತ್ರದ ಭಾಗವಾಗಿರುವುದು ತುಂಬಾ ಖುಷಿಯಾಗುತ್ತಿದೆ. ನಟ ವಿಜಯ್ ಜೊತೆ ತೆರೆಹಂಚಿಕೊಳ್ಳುವ ಕನಸು ನನಸಾಗಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಅವರಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.

  ಅಪರ್ಣಾ ದಾಸ್ ಟಿಕ್ ಟಾಕ್ ಮೂಲಕ ಸ್ಟಾರ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಮಲಯಾಳಂ ಚಿತ್ರರಂಗದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ ಅಪರ್ಣಾ ಇದೀಗ ವಿಜಯ್ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮಲಯಾಳಂನ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅಪರ್ಣಾ ಮೊದಲ ಬಾರಿಗೆ ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.

  Thalaiva Rajnikanth ಗೆ ಒಲಿಯಿತು ಶ್ರೇಷ್ಠ Dada Saheb Phalke ಪ್ರಶಸ್ತಿ | Filmibeat Kannada

  ದಳಪತಿ 65 ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮುಹೂರ್ತ ಸಮಾರಂಭ ಮುಗಿಸಿರುವ ಸಿನಿಮಾತಂಡ ತಮಿಳುನಾಡು ಚುನಾವಣೆಯ ಬಳಿಕ ಚಿತ್ರೀಕರಣ ಪ್ರಾರಂಭಮಾಡಲಿದೆ. ಅಂದರೆ ಮೇ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಸನ್ ಪಿಚ್ಚರ್ಸ್ ಬಂಡವಾಳ ಹೂಡುತ್ತಿದೆ.

  English summary
  Malayalam Actress Aparna Das on board Vijay starrer Thalapathy 65 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X