ನಿಧನಕ್ಕೂ ಕೆಲ ಗಂಟೆಗಳ ಮೊದಲು ಪುಟ್ಟ ಮಗಳ ವಿಡಿಯೋ ಹಂಚಿಕೊಂಡಿದ್ದ ನಟಿ ಅಪರ್ಣಾ ನಾಯರ್

ಮಲಯಾಳಂ ಕಿರುತೆರೆ ಮತ್ತು ಹಿರಿತೆರೆ ನಟಿ ಅಪರ್ಣಾ ನಾಯರ್ ಅವರು ತಮ್ಮ 31ನೇ ವಯಸ್ಸಿನಲ್ಲಿ ಅಸಹಜವಾಗಿ ಮೃತಪಟ್ಟಿದ್ದಾರೆ. ಪೊಲೀಸರ ಪ್ರಕಾರ, ಅಪರ್ಣಾ ಅವರು ತಿರುವನಂತಪುರಂನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅವರು ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಕೇವಲ 31 ವರ್ಷದ ಉದಯೋನ್ಮಕ ನಟಿಯ ಸಾವು ಸಿನಿರಂಗವನ್ನು ಬೆಚ್ಚಿ ಬೀಳಿಸಿದೆ. ಅವರ ನಿಧನದ ಕೆಲವೇ ಗಂಟೆಗಳ ಮೊದಲು, ಅವರು ತಮ್ಮ ಕೊನೆಯ Instagram ಪೋಸ್ಟ್‌ನಲ್ಲಿ ತಮ್ಮ ಮಗಳ ಮೇಲಿನ ಪ್ರೀತಿಯನ್ನು ತಿಳಿಸಿದ್ದಾರೆ. ಅದರಲ್ಲಿ ಅವರ ಮಗಳ ಫೋಟೋಗಳನ್ನು ಕೋಲಾಜ್ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

Malayalam actress Aparna Nair last Instagram post before demise

ತಮ್ಮ ಸಾವಿಗೂ 22 ಗಂಟೆಗಳ ಹಿಂದೆ , ಅಪರ್ಣಾ ನಾಯರ್ ಹಂಚಿಕೊಂಡಿರುವ ವಿಡಿಯೋದಲ್ಲಿ ತಮ್ಮ ಕಿರಿಯ ಮಗಳ ಫೋಟೋಗಳಿವೆ. ಇದರ ಜೊತೆಗೆ ಹಿತವಾದ ಲಾಲಿ ಹಾಡಿದ್ದು, 'ನನ್ನ ಉನ್ನಿ, ಕೀಟಲೆಯ ಪುಟ್ಟ ಮಗು' ಎಂಬ ಶೀರ್ಷಿಕೆಯನ್ನು ಅವರು ಸೇರಿಸಿದ್ದಾರೆ. ಈ ಕೊನೆಯ ಪೋಸ್ಟ್ ತನ್ನ ಮಗುವಿನ ಮೇಲೆ ಆಕೆಗಿದ್ದ ಪ್ರೀತಿಗೆ ಸಾಕ್ಷಿಯಾಗಿದೆ ಉಳಿದುಕೊಂಡಿದೆ.

ಇನ್ನು, , ಅಪರ್ಣಾ ನಾಯರ್ ಅವರ ಇನ್‌ಸ್ಟಾಗ್ರಾಮ್ ಪೂರ್ತಿ ಅವರ ಪತಿ ಮತ್ತು ಮಕ್ಕಳ ಸಂತೋಷದ ಫೋಟೋಗಳು ಮತ್ತು ವಿಡಿಯೋಗಳಿಂದ ತುಂಬಿದೆ. ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ, ಅಪರ್ಣಾ ತನ್ನ ಪತಿ ಸಂಜಿತ್‌ನನ್ನು 'ನನ್ನ ಶಕ್ತಿ' ಎಂದು ಕರೆದಿದ್ದರು.


31 ನೇ ವಯಸ್ಸಿನಲ್ಲಿ ನಿಧನರಾದ ಅಪರ್ಣಾ ನಾಯರ್

31 ವರ್ಷದ ಅಪರ್ಣಾ ನಾಯರ್ ಕೇರಳದ ತಿರುವನಂತಪುರಂನಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಗಸ್ಟ್ 31 ರಂದು ಸಂಜೆ 7 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆಕೆಯ ಮೃತದೇಹವನ್ನು ಪಿಆರ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿ, ಪೊಲೀಸರು ಸಂಬಂಧಿಕರು ಹಾಗೂ ಕುಟುಂಬದವರಿಂದ ಹೇಳಿಕೆ ಪಡೆದುಕೊಂಡಿದ್ದಾರೆ.

ಅಪರ್ಣಾ ನಾಯರ್ ವೃತ್ತಿಜೀವನ

ಅಪರ್ಣಾ ನಾಯರ್ ಅವರು ದೂರದರ್ಶನ ಮತ್ತು ಬೆಳ್ಳಿ ಪರದೆಯಲ್ಲಿ ಕೆಲಸ ಮಾಡಿದ್ದಾರೆ. ಚಂದನಮಜ, ಆತ್ಮಸಖಿ, ಮೈಥಿಲಿ ವೀಂದುಂ ವರುಮ್ ಮತ್ತು ದೇವಸ್ಪರ್ಶಂನಂತಹ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘತೀರ್ಥಂ, ಮುತ್ತುಗೌ, ಅಚಾಯನ್ಸ್, ಕೊಡತಿ ಸಮಕ್ಷಂ ಬಾಲನ್ ವಕೀಲ್, ಮತ್ತು ಕಲ್ಕಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಪರ್ಣಾ ನಟಿಸಿದ್ದಾರೆ.

More from Filmibeat

English summary
Malayalam actress Aparna Nair last Instagram post.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X