ಹೆಣ್ಣು ಮಗುವಿಗೆ ಜನ್ಮ ನೀಡಿದ 'ಶೈಲೂ' ಖ್ಯಾತಿಯ ನಟಿ ಭಾಮಾ
ಮಲಯಾಳಂ ಖ್ಯಾತ ನಟಿ ಭಾಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ಭಾಮಾ ಗರ್ಭಿಣಿ ಎಂಬ ಸುದ್ದಿ ಲಾಕ್‌ಡೌನ್ ಸಮಯದಲ್ಲಿ ಹರಿದಾಡಿತ್ತು. ಆದರೆ, ಈ ಬಗ್ಗೆ ನಟಿಯಾಗಲಿ ಅಥವಾ ಕುಟುಂಬದವರಾಗಲಿ ಖಚಿತಪಡಿಸಿರಲಿಲ್ಲ.
ಮಾರ್ಚ್ 11 ರಂದು ಶುಕ್ರವಾರ ಭಾಮಾ ಹೆಣ್ಣು ಮಗುವಿಗೆ ಜನ್ಮ ನೀಡಿರುವ ತಿಳಿದು ಬಂದಿದೆ. ಭಾಮಾ ಅವರು ಪ್ರಗ್ನೆಂಟ್ ಆಗಿರುವಾಗಲೇ ಯಾವುದೇ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರಲಿಲ್ಲ.
ಈಗಲೂ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಅಧಿಕೃತ ಮಾಡಿಲ್ಲ. ಆದರೆ, ಹಲವು ಮಾಧ್ಯಮಗಳು ಭಾಮಾ ಮತ್ತು ಅರುಣ್ ದಂಪತಿ ಹೆಣ್ಣು ಮಗು ಸ್ವಾಗತಿಸಿರುವುದನ್ನು ಖಚಿತ ಪಡಿಸಿವೆ. ಪಿಂಕ್‌ವಿಲ್ಲಾ, ಮಲಯಾಳಂ ಫಿಲ್ಮಿಬೀಟ್ ಈ ಬಗ್ಗೆ ವರದಿ ಮಾಡಿದೆ.

ಭಾಮಾ ಮತ್ತು ಅರುಣ್ ಕಳೆದ ವರ್ಷ ವೈವಾಹಿಕ ಬದುಕು ಆರಂಭಿಸಿದ್ದರು. 30 ಜನವರಿ 2020ರಂದು ವಿವಾಹವಾಗಿದ್ದರು. ಕೇರಳದಲ್ಲಿ ಇವರಿಬ್ಬರು ಮದುವೆ ಜರುಗಿತ್ತು.
ಭಾಮಾ ಪತಿ ಅರುಣ್ ಕೆನಡಾದಲ್ಲಿ ವಿಧ್ಯಾಭ್ಯಾಸ ಮುಗಿಸಿ ದುಬೈನಲ್ಲಿ ಬ್ಯುಸಿನೆಸ್ ಮಾಡುತ್ತಿದ್ದಾರೆ. ಭಾಮಾ ಅವರ ಸಹೋದರ ಮತ್ತು ಅರುಣ್ ಸ್ನೇಹಿತರು. ಈ ಎರಡು ಕುಟುಂಬದ ನಡುವೆ ಅನೇಕ ವರ್ಷಗಳಿಂದ ಒಡನಾಟ ಇತ್ತು. ಆ ಮೂಲಕ ಅರುಣ್ ಮತ್ತು ಭಾಮಾಗೆ ಪರಿಚಯ ಆಗಿ ಹೊಸ ಬದುಕು ಶುರು ಮಾಡಿದ್ದರು.
ಸಿನಿಮಾ ವಿಚಾರಕ್ಕೆ ಬಂದ್ರೆ ಭಾಮಾ ಮಲೆಯಾಳಂ ಇಂಡಸ್ಟ್ರಿಯಲ್ಲಿ ಹೆಚ್ಚು ಜನಪ್ರಿಯರು. ಕನ್ನಡದಲ್ಲಿಯೂ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಮಾಡಿದ್ದಾರೆ. ಯಶ್ ಜೊತೆ 'ಮೊದಲಾಸಲ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಭಾಮಾ ನಂತರ 'ಶೈಲೂ', 'ಅರ್ಜುನ' 'ಆಟೋ ರಾಜ', 'ರಾಗ' ಚಿತ್ರಗಳಲ್ಲಿ ನಟಿಸಿದರು.
2018ರಲ್ಲಿ ತೆರೆಕಂಡ ಮಲಯಾಳಂ ಚಿತ್ರ 'ಖಿಲಾಫತ್' ಭಾಮಾ ಕಾಣಿಸಿಕೊಂಡ ಕೊನೆಯ ಸಿನಿಮಾ ಆಗಿದೆ. ಮದುವೆ ನಂತರ ಯಾವುದೇ ಪ್ರಾಜೆಕ್ಟ್ ಮಾಡಿಲ್ಲ.


Click it and Unblock the Notifications











