ನಾಲ್ಕೇ ವರ್ಷಕ್ಕೆ ಮುರಿದು ಬಿತ್ತು ಶೈಲೂ ದಾಂಪತ್ಯ ಜೀವನ ; ಮೊದಲ ಸಲ ಹೇಳಿದ್ದೇನು ಭಾಮಾ..?

ಸಹಜವಾದ ಅಭಿನಯದಿಂದ ಹೆಸರಾದವರು ಭಾಮಾ. 2007ರಲ್ಲಿ ನಿವೇದ್ಯಂತ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗವನ್ನ ಪ್ರವೇಶಿಸಿದ್ದ ಭಾಮಾ, ಆ ನಂತರ ಮೊದಲ ಸಲ ಕನ್ನಡಕ್ಕೆ ಬಂದರು. ಇಂದಿನ ನ್ಯಾಷನಲ್ ಸ್ಟಾರ್ ಯಶ್ ಅವರ ಜೊತೆ ಆ ಕಾಲದಲ್ಲಿಯೇ ತೆರೆ ಹಂಚಿಕೊಂಡರು.

ಆ ನಂತರ ಕನ್ನಡ ಚಿತ್ರರಂಗ ಭಾಮಾ ಪಾಲಿಗೆ ಎರಡನೇ ಮನೆಯಾಯಿತು. ಶೈಲೂ.. ಆಟೋ ರಾಜಾ.. ಒಂದು ಕ್ಷಣದಲ್ಲಿ.. ಬರ್ಫಿ.. ಅಂಬರ.. ಅರ್ಜುನ.. ರಾಗಾ.. ಹೀಗೆ ಒಂದಾದ ಮೇಲೊಂದು ಸಿನಿಮಾ ಮಾಡುವ ಮೂಲಕ ಕನ್ನಡಿಗರ ಹೃದಯವನ್ನ ಗೆದ್ದರು. ಮಲಯಾಳಂನಲ್ಲಿ ಕೂಡ ಜನ ಮನ ಗೆದ್ದರು.

Malayalam Actress Bhama Confirms Separation From Husband Shares Post

ಇಂಥ ಭಾಮಾ ವ್ಯೆಯಕ್ತಿಕ ಜೀವನದಲ್ಲಿ ನೊಂದು ಬೆಂದು ಸದ್ಯಕ್ಕೆ ಸಂಸಾರ ಬಂಧನದಿಂದ ಹೊರ ಬಂದಿದ್ದಾರೆ. ತಮ್ಮ ಪತಿ ಅರುಣ್ ಜಗದೀಶ್ ಅವರಿಂದ ದೂರವಾಗಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸಂದೇಶವನ್ನ ರವಾನೆ ಮಾಡಿರುವ ಭಾಮಾ, ನಾನು ಒಂಟಿ ತಾಯಿಯಾಗುವವರೆಗೆ ನಾನು ಎಷ್ಟು ಬಲಶಾಲಿ ಎಂದು ನನಗೆ ತಿಳಿದಿರಲಿಲ್ಲ ಎಂದಿದ್ದಾರೆ. ಬಲಶಾಲಿಯಾಗಿರುವುದೇ ನನ್ನ ಜೀವನದ ಏಕೈಕ ಆಯ್ಕೆ ಎಂದು ಪುತ್ರಿಯ ಜೊತೆ ಫೋಟೋವನ್ನ ಹಂಚಿಕೊಂಡಿದ್ದಾರೆ. ಪತಿಯ ಜೊತೆ ಇರುವ ಫೋಟೋಗಳನ್ನೆಲ್ಲ ಡಿಲೀಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಅವರ ಹೆಸರನ್ನೂ ಕೂಡ ಕೈ ಬಿಟ್ಟಿದ್ದಾರೆ

ಹಾಗೇ ನೋಡಿದರೆ ಭಾಮಾ ಅವರ ಸಾಂಸಾರಿಕ ಜೀವನ ಅಷ್ಟಕಷ್ಟೇ ಅನ್ನುವ ಅನುಮಾನ, ಅನೇಕ ದಿನಗಳಿಂದ ಬಹುತೇಕರಲ್ಲಿತ್ತು. ಇದಕ್ಕೆ ಪೂರಕವಾಗಿ 2022ರಲ್ಲಿ ಭಾಮಾ ಆತ್ಮಹತ್ಯೆಗೆ ಯತ್ನಿಸಿದ್ದಾರಂತೆ ಎಂಬ ಗುಸುಗುಸು ಕೇಳಿಬಂದಿತ್ತು. ಇನ್ನೂ ತಮ್ಮ ಪತಿಯ ಜೊತೆ ಭಾಮಾ ಫೋಟೋ ಹಂಚಿಕೊಂಡು ಒಂದು ವರ್ಷವೇ ಆಗಿದೆ. ಈ ಕಾರಣಕ್ಕೆ ಕಳೆದ ವರ್ಷ ಕೂಡ ಭಾಮಾ ಮತ್ತು ಅರುಣ್ ದಾಂಪತ್ಯ ಜೀವನಕ್ಕೆ ಶುಭಂ ಹಾಡಲಿದ್ದಾರೆ ಅನ್ನುವ ಮಾತು ಬಲವಾಗಿ ಕೇಳಿ ಬಂದಿತ್ತು. ಆದರೆ. ಕಾಲ..ಕಾಲಕ್ಕೆ ಭಾಮಾ ಇದೆಲ್ಲವೂ ಸುಳ್ಳು ಎಂದು ಹೇಳ್ತಾನೇ ಬಂದಿದ್ದರು.

Malayalam Actress Bhama Confirms Separation From Husband Shares Post

ಆದರೆ ಈಗ ಭಾಮಾ ಅವರ ಈ ಹೊಸ ಫೋಸ್ಟ್ ಅಂತೆ-ಕಂತೆಯ ಸುದ್ದಿಯ ಮೇಲೆ ಅಧಿಕೃತ ಮುದ್ರೆಯನ್ನ ಒತ್ತಿದೆ. ಉದ್ಯಮಿ ಅರುಣ್ ಜಗದೀಶ್ ಅವರಿಗೆ ಭಾಮಾ ವಿಚ್ಛೇದನ ನೀಡಲಿದ್ದಾರೆ ಅನ್ನುವ ಮಾತು ಕೇರಳದಲ್ಲಿ ಹಬ್ಬಿದೆ. ಇಷ್ಟೇ ಅಲ್ಲ ಪತಿಯಿಂದ ದೂರವಾದ ಬಳಿಕ ಭಾಮಾ, ದುಬೈನಲ್ಲಿ ಬದುಕಿನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದ್ದಾರೆ ಅನ್ನುವ ಸುದ್ದಿ ಕೂಡ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಒಟ್ನಲ್ಲಿ ವ್ಯೆಯಕ್ತಿಕ ಬದುಕಿನ ವಿಚಾರದಲ್ಲಿ ಭಾಮಾ ಸದ್ಯಕ್ಕೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. ಭಾಮಾ ವಿಚ್ಛೇದನದ ಸುಳಿವನ್ನ ಕೊಟ್ಟಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ. ನಿಜಾಂಶ ಏನು.. ಇಬ್ಬರು ದೂರವಾಗಿದ್ದೇಕೆ ಅನ್ನುವುದಕ್ಕೆ ಉತ್ತರ ಖುದ್ದು ಭಾಮಾ ಅವರೇ ನೀಡಬೇಕಿದೆ.

More from Filmibeat

English summary
"Malayalam Actress Bhama Announces Separation from Husband, Embracing Single Motherhood"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X