''02 ಲಕ್ಷ ಕೊಡೋದೆಲ್ಲ ಬೇಡ, ಮಲ್ಕೊಂಡ್ರೆ ಸಾಕು''-ಹೆಸರು ಸಮೇತ ಮಲಯಾಳಂ ಚಿತ್ರರಂಗದ ಮೇಲೆ ಬಾಂಬ್ ಎಸೆದ ನಟಿ..!
ಹೆಚ್ಚೇನು ಇಲ್ಲ. ಕಳೆದ 06-07 ವರ್ಷದ ಹಿಂದೆ ಭಾರತದೆಲ್ಲೆಡೆ ಬಣ್ಣದ ಲೋಕದಲ್ಲಿ ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ಬಣ್ಣ ದಿನನಿತ್ಯ ಬಯಲಾಗಲು ಶುರುವಾಗಿತ್ತು. ದೊಡ್ಡವರು .. ಸಣ್ಣವರು ಅನ್ನದೇ ಅನೇಕರ ಮುಖವಾಡ ಕಳಚಿ ಬೀಳುತ್ತಿತ್ತು.
ಆ ಕಾಲಕ್ಕೆ ತೀವೃ ಸ್ವರೂಪ ಪಡೆದ ಈ ಮೀಟೂ ಅಭಿಯಾನದಿಂದ ಯಾವತ್ತೋ ನಡೆದಿದ್ದ ಲೈಂಗಿಕ ಶೋಷಣೆಗೆ ಬಲ ಬಂದು ಧೈರ್ಯವಾಗಿ ಹೆಣ್ಣು ಮಕ್ಕಳು ತಮಗಾದ ನೋವನ್ನು ಹೇಳಿಕೊಂಡಿದ್ದರು. ಆದರೆ, ಆ ನಂತರ.. ಇದೇ ಅಭಿಯಾನದಡಿ ಕೆಲವರು ಪ್ರಚಾರ ಪಡೆಯಲು ಮುಂದಾದ ಕಾರಣ ಅಭಿಯಾನ ಹಳಿ ತಪ್ಪಿತು. ಕಾಲಾನುಕ್ರಮೇಣ ಎಲ್ಲರ ತಲೆಯಿಂದ ಈ ಪ್ರಕರಣ ಮಾಯವಾಯಿತು.

ಆದರೆ ಈಗ ಈ ಪ್ರಕರಣಕ್ಕೆ ಮರುಜೀವ ಬಂದಿದೆ. ಮಲಯಾಳಂ ಚಿತ್ರರಂಗದವರ ಕಾಮಕಾಂಡ ಕೇಳಿ ಇಡೀ ಭಾರತೀಯ ಚಿತ್ರರಂಗ ಬೆಚ್ಚಿ ಬಿದ್ದಿದೆ. ಹೇಮಾ ಆಯೋಗದ ವರದಿ ಹೊರ ಬಿದ್ದ ನಂತರ ಒಂದೊಂದೇ ಕಥೆ ಹೊರ ಬರುತ್ತಿವೆ. ಅವತ್ತು ಮಾತನಾಡಲು ಹಿಂದೆ ಮುಂದೆ ನೋಡಿದ ಅನೇಕರ ಬಾಯಿಂದ ಸತ್ಯ ಹೊರ ಬರುತ್ತಿದೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಪಕ್ಕದ ಕೇರಳದಲ್ಲಿನ ಜುಬಿತಾ ಆಂಡಿ ತಮಗಾದ ಕರಾಳ ಅನುಭವದ ಕಥೆಯನ್ನು ಹಂಚಿಕೊಂಡಿದ್ದಾರೆ.
ಹೌದು, ಮಲಯಾಳಂ ಚಿತ್ರರಂಗದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವ ಜುಬಿತಾ ಆಂಡಿ, ಮಲಯಾಳಂನ ಮೂವಿ ಆರ್ಟಿಸ್ಟ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಮತ್ತು ನಟ ಎಡವೇಲು ಬಾಬು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಎಎಂಎಂಎ { ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ } ಸದಸ್ಯತ್ವ ಶುಲ್ಕ ಎರಡು ಲಕ್ಷ ನೀಡುವ ಬದಲು ಮಲಗುವಂತೆ ಎಡವೇಲು ಬಾಬು ಬೇಡಿಯನ್ನಿಟ್ಟಿದ್ದ ಎಂದು ಹೇಳಿರುವ ಜುಬಿತಾ ಆಂಡಿ ಮಲಯಾಳಂ ಚಿತ್ರರಂಗದಲ್ಲಿರುವ ಮತ್ತಿಬ್ಬರ ಮೇಲೆ ಕೂಡ ಆರೋಪ ಮಾಡಿದ್ದಾರೆ. ಎಡವೇಲು ಬಾಬು ಅಲ್ಲದೇ ಹರಿ ಕುಮಾರ್ ಮತ್ತು ಸುಧೀಶ್ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದಿದ್ದಾರೆ.

ಸಿನಿಮಾ ಕೆಲಸ ಮುಗಿಸಿದ ನಂತರ ಹರಿ ಕುಮಾರ್ ನನಗೆ ಮನೆಗೆ ಕರೆದರೆ, ಸುಧೀಶ್ ನನ್ನ ಜೊತೆ ಪ್ರವಾಸಕ್ಕೆ ಬರುವಂತೆ ದುಂಬಾಲು ಬಿದ್ದಿದ್ದ ಎಂದಿದ್ದಾರೆ. ಅವಕಾಶಕ್ಕೆ ಹೊಂದಾಣಿಕೆ ಮಾಡಿಕೊಳ್ಳುವವಳು ನಾನಲ್ಲ ಎಂದು ಕೂಡ ಹೇಳಿದ್ದಾರೆ ಜುಬಿತಾ ಆಂಡಿ.
ಸದ್ಯ ತಮ್ಮ ಮೇಲೆ ಬಂದ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಮಲಯಾಳಂ ನಟ ಸುಧೀಶ್, ಅವಳೊಬ್ಬಳು ಸುಳ್ಳುಗಾರ್ತಿ ಎಂದು ಹೇಳಿದ್ದಾರೆ. ನನ್ನ ತೇಜೋವಧೆ ಮಾಡಲು ಬಾಯಿಗೆ ಬಂದ ಹಾಗೇ ಹೇಳಿಕೆಗಳನ್ನು ಆಕೆ ನೀಡಿದ್ದಾಳೆ ಎಂದಿರುವ ಸುಧೀಶ್ ಇದು ಗಂಭೀರವಾದ ಆರೋಪವಾಗಿದ್ದು ಸಾಕ್ಷಿಗಳು ಎಲ್ಲಿವೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ನನ್ನ ಮೇಲೆ ಮಾಡಲಾದ ಆರೋಪಗಳೆಲ್ಲ ಸುಳ್ಳು ಎಂದಿರುವ ಸುಧೀಶ್, ಜುಬಿತಾ ಆಂಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ತಾವು ಆಲೋಚನೆ ಮಾಡುತ್ತಿರುವುದಾಗಿ ಹೇಳಿದ್ದಾರೆ.


Click it and Unblock the Notifications











