For Quick Alerts
  ALLOW NOTIFICATIONS  
  For Daily Alerts

  ಮೂರನೇ ಮಗುವಿಗೆ ಗರ್ಭಿಣಿಯಾದ ಖ್ಯಾತ ನಟಿ.!

  |

  ಕನ್ನಡ ಚಿತ್ರದಲ್ಲೂ ಅಭಿನಯಿಸಿರುವ ಮಲಯಾಳಂನ ಖ್ಯಾತ ನಟಿ ದಿವ್ಯ ಉನ್ನಿ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ. ಮೂರನೇ ಮಗುವನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ ದಿವ್ಯ ಉನ್ನಿ.

  'ಮುಸಾಫಿರ್', 'ಮಾರ್ಕ್ ಆಂಟೋನಿ', 'ಫ್ರೆಂಡ್ಸ್', 'ಆಯುಷ್ಮಾನ್ ಭವ' ಸೇರಿದಂತೆ ಮಲಯಾಳಂನ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದವರು ದಿವ್ಯ ಉನ್ನಿ. ಕನ್ನಡದ 'ಬಾನಲ್ಲೂ ನೀನೇ ಭುವಿಯಲ್ಲೂ ನೀನೇ' ಚಿತ್ರದಲ್ಲೂ ಮಿಂಚಿದ್ದ ದಿವ್ಯ ಉನ್ನಿ ನೃತ್ಯ ಕಲಾವಿದೆ ಕೂಡ ಹೌದು.

  ಭರತನಾಟ್ಯಂ, ಕುಚಿಪುಡಿ, ಮೋಹಿನಿಯಾಟಂ ಕಲಿತಿರುವ ದಿವ್ಯ ಉನ್ನಿ ಸದ್ಯ ಯು.ಎಸ್ ನಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ.

  ಏನು.. ಬಚ್ಚನ್ ಬಹುರಾಣಿ ಐಶ್ವರ್ಯ ರೈ ಮತ್ತೆ ಗರ್ಭಿಣಿಯಂತೆ.! ಹೌದಾ.?ಏನು.. ಬಚ್ಚನ್ ಬಹುರಾಣಿ ಐಶ್ವರ್ಯ ರೈ ಮತ್ತೆ ಗರ್ಭಿಣಿಯಂತೆ.! ಹೌದಾ.?

  ಒಂದ್ಕಾಲದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ದಿವ್ಯ ಉನ್ನಿ 2002 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸುಧೀರ್ ಶೇಖರ್ ಎಂಬುವರನ್ನು ದಿವ್ಯ ಉನ್ನಿ ವರಿಸಿದ್ದರು. ಈ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ಹದಿನಾಲ್ಕು ವರ್ಷಗಳ ಕಾಲ ದಾಂಪತ್ಯ ನಡೆಸಿದ ಈ ಜೋಡಿ 2016 ರಲ್ಲಿ ವಿಚ್ಛೇದನ ಪಡೆದರು.

  2018 ರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಅರುಣ್ ಕುಮಾರ್ ರನ್ನ ದಿವ್ಯ ಉನ್ನಿ ಮದುವೆ ಆದರು. ಈ ದಂಪತಿ ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 37 ವರ್ಷದ ದಿವ್ಯ ಉನ್ನಿಯವರ ಸೀಮಂತ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆದಿದೆ. ಹೆರಿಗೆ ದಿನಾಂಕದ ಬಗ್ಗೆ ದಿವ್ಯ ಉನ್ನಿ ಮಾಹಿತಿ ನೀಡಿಲ್ಲ.

  English summary
  Malayalam Actress Divya Unni is pregnant with Third Child.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X