For Quick Alerts
  ALLOW NOTIFICATIONS  
  For Daily Alerts

  ಅಡುಗೆ ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ಕಿರುತೆರೆ ನಟಿ

  |

  ಖ್ಯಾತ ಕಿರುತೆರೆ ನಟಿ ಮತ್ತು ರೂಪದರ್ಶಿ ಆಗಿರುವ ಜಗಿ ಜಾನ್ ತನ್ನ ಅಡುಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಗಿ ಕೇರಳ ಮೂಲದ ಖ್ಯಾತ ಕಿರುತೆರೆ ನಟಿ. ಕೇರಳದ ಕುರವಕೋಣಂನಲ್ಲಿರುವ ಜಗಿ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಜಗಿ ಗೆಳತಿ ಮನೆಗೆ ಭೇಟಿ ನೀಡಿದಾಗ ಮೃತ ದೇಹ ನೋಡಿ ಶಾಕ್ ಆಗಿದ್ದಾರೆ.

  ಆ ನಂತರ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೆರೂರ್ಕಾಡಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಜಗಿ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಜಗಿ ಜಾನ್ ಕುತ್ತಿಗೆಯ ಬಳಿ ಗಾಯವಾಗಿದ್ದು, ರಕ್ತ ಸ್ರಾವವಾಗಿದೆ ಎಂದು ಹೇಳಲಾಗುತ್ತಿದೆ.

  ಪ್ರಿಯಕರನಿಂದ ಮೋಸ, ಆಸಿಡ್ ಹಾಕುವ ಬೆದರಿಕೆ, ಫೇಸ್ಬುಕ್ನಲ್ಲಿ ನಟಿ ಅಂಜಲಿ ಕಣ್ಣೀರು!ಪ್ರಿಯಕರನಿಂದ ಮೋಸ, ಆಸಿಡ್ ಹಾಕುವ ಬೆದರಿಕೆ, ಫೇಸ್ಬುಕ್ನಲ್ಲಿ ನಟಿ ಅಂಜಲಿ ಕಣ್ಣೀರು!

  45 ವರ್ಷದ ಜಗಿ ನಟಿ, ರೂಪದರ್ಶಿ, ಗಾಯಕಿ ಮತ್ತು ಸಾಕಷ್ಟು ಬ್ಯೂಟಿ ಸ್ಪರ್ಧೆಯಲ್ಲಿ ಜಡ್ಜ್ ಆಗಿ ಗುರುತಿಸಿ ಕೊಂಡಿದ್ದರು. ಜಾನ್ ಆತ್ಮ ಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿಯವಳಲ್ಲ, ಆಕೆಯ ಸಾವು ಸಹಜವಲ್ಲ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಜಗಿ ಜಾನ್ ತಾಯಿಯ ಜೊತೆ ಫ್ಲಾಟ್ ನಲ್ಲಿ ವಾಸವಾಗಿದ್ದರಂತೆ.

  ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗಿ ಖಾಸಗಿ ವಾಹಿನಿಯಲ್ಲಿ ಅಡುಗೆ ಕಾರ್ಯಕ್ರವನ್ನು ನಡೆಸಿಕೊಡುತ್ತಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಯ್ ಆಗಿದ್ದರು. ಅಲ್ಲದೆ ಮೋಟಿವೇಶನ್ ಭಾಷಣಗಳನ್ನು ಮಾಡುತ್ತಿದ್ದರು.

  Read more about: malayalam ಮಲಯಾಳಂ
  English summary
  Malayalam actress Jagee John found dead at her house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X