ಮುಖ ಮೂತಿ ನೋಡದೇ ಖ್ಯಾತ ನಟಿಯ ಮುಖ ಜಜ್ಜಿ ಹಾಕಿದ ಬಾಯ್‌ಫ್ರೆಂಡ್‌, ಮದ್ವೆ ಮುನ್ನವೇ ನರಕ ತೋರಿಸಿದ ಪ್ರಿಯಕರ

ಲವ್ ಮಾಡೋಕೆ ನಾನಾ ವಿಧ. ಯಾರು ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೋ ಅದು ಅವರ ಅವರಿಗಷ್ಟೇ ಗೊತ್ತಿರುತ್ತಾದರೂ, ಈಗೀಗ ಈ ಪ್ರೀತಿಯ ಹೆಸರಿನಲ್ಲಿ ಮೋಸ.. ವಂಚನೆ ಮಾಡೋರ ಸಂಖ್ಯೆ ಹೆಚ್ಚಾಗುತ್ತಿದೆ. ನಂಬಿಸಿ ಕತ್ತು ಕುಯ್ಯುವರ ಸಂತತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಪ್ರೀತಿ ಹೆಸರಿನಲ್ಲಿ ಹೆಣ್ಣಿನ ಮೇಲೆ ಹಲವರು ಶೋಷಣೆ, ಅತ್ಯಾಚಾರ ಮಾಡುತ್ತಿದ್ದಾರೆ.

ತಮ್ಮ ತೆವಲು ತೀರಿದ ನಂತರ ದೈಹಿಕ-ಮಾನಸಿಕ ಕಿರುಕುಳವನ್ನು ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು ಹೀಗೆ ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ.

Malayalam Actress Jaseela Parveen Alleges Brutal Physical Abuse by Ex-Boyfriend

ಕೇವಲ ಜನಸಾಮಾನ್ಯರು ಮಾತ್ರ ಅಲ್ಲ ಗಾಜಿನ ಮನೆಯಲ್ಲಿ ವಾಸ ಮಾಡುವ ಕಲಾವಿದರ ಬದುಕಿನಲ್ಲಿಯೂ ಕೂಡ ಈ ಕ್ರೀಮಿಗಳು ಪ್ರೀತಿಯ ಹೆಸರಿನಲ್ಲಿ‌ಮಾಡಬಾರದ್ದನ್ನೆಲ್ಲಾ ಮಾಡುತ್ತಾರೆ. ದೌರ್ಜನ್ಯ ಎಸಗುತ್ತಾರೆ. ಇದಕ್ಕೆ ''ಜಸೀಲಾ ಪರ್ವೀನ್'' ಅವರ ಬದುಕಿನಲ್ಲಿ ನಡೆದ ದುರಂತ ಮತ್ತೊಂದು ಉದಾಹರಣೆ.

ಹೌದು.. ಜಸೀಲಾ ಪರ್ವೀನ್.. ಮಲಯಾಳಂನ ಚೆಲುವೆ. "ಥೇನಮ್ ವಯಂಬುಮ್".. " ಸೀತಾ" .. "ಅಲ್ಲಿಯಂಬಲ್".. "ಅನುರಾಗ ಗಾನಂ ಪೋಲೆ"".. "ದಯಾ".. ಹೀಗೆ ಹಲವು ಧಾರಾವಾಹಿಗಳ ಮೂಲಕ ಕೇರಳಿಗರ ಹೃದಯ ಗೆದ್ದ ಜಸೀಲಾ "ಆಗಸ್ಟ್ 27" ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. "ಸ್ಟಾರ್ ಮ್ಯಾಜಿಕ್" ಎಂಬ ಕಾರ್ಯಕ್ರಮದ ಮೂಲಕ ಕೇರಳದಲ್ಲೆಲ್ಲಾ ಮನೆ ಮಾತಾದರು.

ಇಂಥಾ ಜಸೀಲಾ ಪರ್ವೀನ್ ತಮ್ಮ ಬದುಕಿನ‌ ಕರಾಳ ಅಧ್ಯಾಯದ ಪುಟಗಳನ್ನು ತಿರುವಿ ಹಾಕಿದ್ದಾರೆ. ಜೆಸಿಲಾ ಅವರ ಈ ಭೂತಕಾಲದ ಕಥೆ ಸದ್ಯ ಹಲವರನ್ನು ಬೆಚ್ಚಿ ಬೀಳಿಸಿದೆ. ಯಾಕೆಂದರೆ ಈ ಕಥೆಯಲ್ಲಿ ರಕ್ತದ ಕಲೆಗಳಿವೆ. ಜಸೀಲಾ ಅವರ ನರಕಯಾತನೆಯ ಕುರುಹುಗಳಿವೆ.

ಹೌದು.. ಅಸಲಿಗೆ ಜಸೀಲಾ ಕೂಡ ಎಲ್ಲರಂತೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಪ್ರೀತಿಯಲ್ಲಿ ಇವರಿಗೆ ಸುಖ ಸಿಗಲಿಲ್ಲ. ಬದಲಿಗೆ ಸಿಕ್ಕಿದ್ದು ದುಃಖ ಮಾತ್ರ. ಇದಕ್ಕೆ ಕೈಗನ್ನಡಿ ಎಂಬಂತೆ ಜಸೀಲಾ ಹೊಸ ವರ್ಷದ ಸಂಭ್ರಮದಲ್ಲಿ ತಮ್ಮ ಮೇಲೆ ನಡೆದ ಹಲ್ಲೆಯ ವಿಚಾರವನ್ನು ಈಗ ಬಹಿರಂಗ ಮಾಡಿದ್ದಾರೆ.

Malayalam Actress Jaseela Parveen Alleges Brutal Physical Abuse by Ex-Boyfriend

ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಸಾಕ್ಷಿ ಸಮೇತ ವಿವರಣೆ ನೀಡಿರುವ ಜಸೀಲಾ, ಕಳೆದ ವರ್ಷ ಡಿಸೆಂಬರ್ 31ರಂದು ನನ್ನ ಮಾಜಿ ಬಾಯ್ ಫ್ರೆಂಡ್ ನನ್ನ ಮೇಲೆ‌ ಮಾರಣಾಂತಿಕ ಹಲ್ಲೆ‌ಮಾಡಿದ್ದ ಎಂದು ಹೇಳಿದ್ದಾರೆ.

ಕಳೆದ ಡಿಸೆಂಬರ್ 31 ರಂದು ನಮ್ಮ ನಡುವೆ ಹೀಗೆ ಶುರುವಾದ ಜಗಳ ವಾಗ್ವಾದಕ್ಕೆ ತಿರುಗಿತು ಎಂದು ಹೇಳಿರುವ ಜಸೀಲಾ ಪರ್ವೀನ್, ಅವತ್ತು ನನ್ನ ಕನಸಿನ ಹುಡುಗ ನನ್ನ ಹೊಟ್ಟೆಗೆ ಎರಡು ಬಾರಿ ಗುದ್ದಿದ, ಸಾಲದಕ್ಕೆ ನನ್ನ ಮುಖಕ್ಕೆ ಹೊಡೆದ, ತಾನು ಹಾಕಿದ ಬಳೆಯನ್ನು ತೆಗೆದು ಮನಸೋ ಇಚ್ಛೆ ನನ್ನ ಮೇಲೆ ಹಲ್ಲೆ ಮಾಡಿದ ಎಂದು ಹೇಳಿರುವ ಜಸೀಲಾ ಪರ್ವೀನ್, ಅವನು ಮಾಡಿದ ಮಾರಣಾಂತಿಕ ಹಲ್ಲೆಯಿಂದ ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಬೇಕಾಯ್ತು ಎಂದು ಹೇಳಿದ್ದಾರೆ.

ನನ್ನ ಮುಖವನ್ನು ವಿಕಾರ ಮಾಡಿದ ನಂತರವೂ ಅವನ ಮುಖದಲ್ಲಿ ಪಶ್ಚಾತಾಪದ ಕುರುಹು ಕೂಡ ಕಾಣಲಿಲ್ಲ ಎಂದು ಹೇಳಿರುವ ಜಸೀಲಾ ಪರ್ವೀನ್, ನಾನು ಜಾರಿ ಬಿದ್ದೆ ಎಂದು ಸುಳ್ಳು ಹೇಳುತ್ತೇನೆ ಎಂದ ನಂತರವಷ್ಟೇ ಅವನು ನನ್ನನ್ನೂ ಆಸ್ಪತ್ರೆಗೆ ದಾಖಲಿಸಿದ, ಆಸ್ಪತ್ರೆಯಲ್ಲಿ ಕೂಡ ಸುಳ್ಳು ಹೇಳಿದ ಎಂದು ಹೇಳಿದ್ದಾರೆ.

ಇದೆಲ್ಲವೂ ಆದ ನಂತರ ನಾನು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಬೇಕಾಯ್ತು ಎಂದು ಹೇಳಿರುವ ಜಸೀಲಾ, ಕೆಲ ದಿನಗಳ ನಂತರ ನಾನು ಪೊಲೀಸರಿಗೆ ದೂರು ನೀಡಿದೆ, ಆ ಸಮಯದಲ್ಲಿ ನಾನು ಮಾನಸಿಕವಾಗಿ.. ದೈಹಿಕವಾಗಿ ಕುಗ್ಗಿ ಹೋಗಿದ್ದೇ, 10 ಕೆಜಿ ತೂಕ ಕಳೆದುಕೊಂಡು ರಾತ್ರಿ ಎಲ್ಲಾ ನಿದ್ದೆ ಬರದೇ ಒದ್ದಾಡಿದ್ದೇ, ಇಷ್ಟೇ ಅಲ್ಲ ನನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಕೂಡ ನನಗೆ ಭಯವಾಗುತ್ತಿತ್ತು ಎಂದು ಹೇಳಿದ್ದಾರೆ.

ಸರ್ಜರಿಯ ನಂತರ ನನ್ನ ಮುಖಕ್ಕೆ ಹೊಲಿಗೆ ಹಾಕಲಾಗಿತ್ತು. ಆದರೆ.. ನನ್ನಲ್ಲಿ ನೋವು ಇತ್ತು.. ಆಕ್ರೋಶದ ಜ್ವಾಲೆ ಕುದಿಯುತ್ತಿತ್ತು, ಆದರೂ ಕೂಡ ಆ ವ್ಯಕ್ತಿಗೆ ತಾನು ಮಾಡಿದ್ದು ಮಹಾಅಪರಾಧ ಎಂದು ಯಾವತ್ತೂ ಅನಿಸಲೇ ಇಲ್ಲ ಎಂದು ಹೇಳಿರುವ ಜಸೀಲಾ ಪರ್ವೀನ್,ಆ ಸಮಯದಲ್ಲಿ ಆತ ಕಾಳಜಿಯೂ ವಹಿಸಲಿಲ್ಲ. ತನ್ನ ಜವಾಬ್ಧಾರಿಯನ್ನು ನಿರ್ವಹಿಸಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕ್ಷಮೆಯನ್ನು ಕೂಡ ಕೇಳಲಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಇಷ್ಟೆಲ್ಲಾ ಆದರೂ ಕೂಡ ನಾನು ಅವನಿಗೆ ಕೊನೆಯ ಅವಕಾಶವನ್ನೂ ನೀಡಿದ್ದೆ ಎಂದು ಹೇಳಿರುವ ಜಸೀಲಾ ಪರ್ವೀನ್, ಹೆಚ್ಚೇನು ಬೇಡ ಒಂದು ಕ್ಷಮಾಪಣ ಪತ್ರ ಬರೆದು ಕೊಡುವಂತೆ ನಾನು ಅವನಲ್ಲಿ ಕೇಳಿಕೊಂಡೆ ಆದರೆ ಆ ದುರಂಹಕಾರಿ ನ್ಯಾಯಾಲಯದ ಆವರಣದಲ್ಲಿಯೇ ಹೊರಾಡುವ ಮಾತುಗಳನ್ನಾಡಿದ ಹೀಗಾಗಿ ನಾನು ಅವನ ವಿರುದ್ದ ದೂರು ದಾಖಲಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಸದ್ಯ ಜಸೀಲಾ ಪರ್ವೀನ್ ಅವರು ಹೇಳಿದ ತಮ್ಮ ಬದುಕಿನ ಈ ಕಹಿಸತ್ಯವನ್ನು ಅನೇಕರು ಬೆಚ್ಚಿ ಬಿದ್ದಿದ್ದಾರೆ. ಜಸೀಲಾ ಹಂಚಿಕೊಂಡ ಫೋಟೊಗಳನ್ನು ಕಂಡು ಮಮ್ಮಲ ಮರಗುತ್ತಿದ್ದಾರೆ. ನಿಮ್ಮ ಜೊತೆ ನಾವು ಇದ್ದೇವೆ, ಯೋಚನೆ ಮಾಡಬೇಡಿ ಎಂದು ಧೈರ್ಯವನ್ನು ಕೂಡ ತುಂಬುತ್ತಿದ್ದಾರೆ. ಆ ವ್ಯಕ್ತಿಯ ಹೆಸರು ಹೇಳುವಂತೆ ಕೂಡ ಪಟ್ಟು ಹಿಡಿದಿದ್ದಾರೆ. ಆದರೆ ಜಸೀಲಾ ಮಾತ್ರ ಆ ವ್ಯಕ್ತಿ ಯಾರು ಎನ್ನುವುದನ್ನು ಇನ್ನೂ ಹೇಳಿಲ್ಲ.

More from Filmibeat

English summary
In a shocking revelation, popular actress Jaseela Parveen alleges she was violently assaulted by her ex-boyfriend. Get the full story on her brave decision to speak out.
Read more about: harrasement actress mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X