Malavika Mohanan: ರೆಡ್ ಹಾಟ್ ಡ್ರೆಸ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಮಲಯಾಳಂ ನಟಿ ಮಾಳವಿಕಾ ಮೋಹನನ್
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿರುವ ಮಲಯಾಳಂ ನಟಿ ಮಾಳವಿಕಾ ಮೋಹನನ್, ತಮ್ಮ ಬೋಲ್ಡ್ ಫೋಟೋಗಳಿಂದ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿರುವ ನಟಿ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ಹಾಟ್ ಫೋಟೋಗಳನ್ನು ಹಂಚಿಕೊಂಡಿ ಇಂಟರ್‌ನೆಟ್‌ನಲ್ಲಿ ಬೆಂಕಿ ಹಚ್ಚಿದ್ದಾರೆ.
ಡಿಸೆಂಬರ್ 23 ರಂದು ಮಾಳವಿಕಾ ಮೋಹನನ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಬಟ್ಟೆಯಲ್ಲಿರುವ ಈ ಫೊಟೋಗಳು ತಕ್ಷಣವೇ ಅವರ ಅಭಿಮಾನಿಗಳು ಮತ್ತು ಫಾಲೋವರ್ಸ್ ಗಮನವನ್ನು ಸೆಳೆದಿದೆ. ಫೊಟೋಗಳಿಗೆ ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ವೈರಲ್ ಆಗುತ್ತಿವೆ.

ಮಾಳವಿಕಾ ಮೋಹನನ್ ಸೆಕ್ಸಿ ಫೋಟೋಶೂಟ್
ಮಾಳವಿಕಾ ಮೋಹನನ್ ಅವರ ಫೋಟೋಗಳನ್ನು ನೋಡಿದವರು ಯಾರೆ ಆದರೂ, ಆಕೆಯ 'ಫ್ಯಾಶನ್ ಸೆನ್ಸ್' ಇಟ್ಟಪಡುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಅವರು ನೀರಿನಲ್ಲಿ ಬಿಳಿ ಬಟ್ಟೆಯುಟ್ಟು ಮಾಡಿಸಿದ್ದ ಫೋಟೋಶೂಟ್ ಕೂಡ ಪಡ್ಡೆ ಹುಡುಗರ ನಿದ್ದೆ ಕದ್ದಿತ್ತು. ಅದಕ್ಕೆ ಹೊಸ ಸೇರ್ಪಡೆಯಾಗಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕೆಂಪು ಬಣ್ಣದ ವಿಶೇಷ ಉಡುಪಿನಲ್ಲಿ ನಟಿಯ ಮೈಬಣ್ಣವು ಎದ್ದು ಕಾಣುತ್ತಿದೆ. ಸಿಂಗಲ್ ಶೋಲ್ಡರ್ ಡ್ರೆಸ್‌ನಲ್ಲಿ ವಿವಿಧ ಬಂಘಿಯಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ. ಈ ಫೋಟೋಳಿಗೆ ಈಗಾಗಲೇ ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಜೊತೆಗೆ ಅಭಿಮಾನಿಗಳು ಕಾಮೆಂಟ್ ಬಾಕ್ಸ್ ಫುಲ್ ಮಾಡಿದ್ದಾರೆ.

ಮಾಳವಿಕಾ ಮೋಹನನ್ ಫೋಟೋಗಳಿಗೆ ಕಾಮೆಂಟ್‌ಗಳ ಸುರಿಮಳೆ
ಮಾಳವಿಕಾ ಮೋಹನನ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ನಟಿ ಹಂಚಿಕೊಂಡಿರುವ ಫೋಟೋಗಳಿಗೆ ಅವರ ಫಾಲೋವರ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ನಟ, ನಟಿಯರು ಕೂಡ ಆಕೆಯ ಸೌಂದರ್ಯವನ್ನು ಹೊಗಳಿದ್ದಾರೆ. ಬಹುಭಾಷಾ ನಟಿ ಸೋಭಿತಾ ಧೂಳಿಪಾಲ ಕೂಡ ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರೀತಿ ತೋರಿದ್ದಾರೆ.
ಮಾಳವಿಕಾ ಮೋಹನನ್ ಅವರ ಪೋಸ್ಟ್‌ಗೆ ಅಭಿಮಾನಿಯೊಬ್ಬರು 'ರೆಡ್ ಹಾಟ್ ಚಿಲ್ಲಿ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಬುಡಕಟ್ಟು ಫೋಟೋಶೂಟ್ ಆ ಇದು..?' ಎಂದು ಪ್ರಶ್ನೆಸಿದ್ದಾರೆ. ಹಲವು ಮಂದಿ ರೆಡ್ ಹಾರ್ಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಫೋಟೋಗಳನ್ನು ಮೆಚ್ಚಿಕೊಂಡಿದ್ದಾರೆ.
ಮಾಳವಿಕಾ ಮೋಹನನ್ ಸಿನಿಮಾಗಳು
ಖ್ಯಾತ ಛಾಯಾಗ್ರಾಹಕ ಕೆ.ಯು. ಮೋಹನನ್ ಅವರ ಮಗಳಾದ ಮಾಳವಿಕಾ ಮೋಹನನ್ 2013 ರಲ್ಲಿ ಮಲಯಾಳಂನ 'ಪೆಟ್ಟಂ ಪೋಲ್' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಹಿಂದಿ ಚಲನಚಿತ್ರ ಬಿಯಾಂಡ್ ದಿ ಕ್ಲೌಡ್ಸ್ (2017) ಚಿತ್ರದಲ್ಲಿನ ನಟನೆಗಾಗಿ ಉತ್ತಮ ವುಮರ್ಶೆಯನ್ನು ಪಡೆದರು. ನಂತರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೇಟಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆದಾದ ನಂತರ ದಳಪತಿ ವಿಜಯ್ ಜೊತೆಗೆ 'ಮಾಸ್ಟರ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು, ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ 'ಕ್ರಿಸ್ಟಿ' ಚಿತ್ರದಲ್ಲಿ ಮಾಳವಿಕಾ ಮೋಹನನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವರು ನಿರ್ದೇಶಕ 'ಪಾ ರಂಜಿತ್ ಅವರ ಅತ್ಯಂತ ಕುತೂಹಲ ಹೆಚ್ಚಿಸಿರುವ ಚಿತ್ರ 'ತಂಗಾಲನ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಮಾಳವಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜುಲೈನಲ್ಲಿ, ನಿರ್ಮಾಪಕರು ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದ್ದರು. 'ತಂಗಲಾನ್' ನೈಜ ಘಟನೆಗಳನ್ನು ಆಧರಿಸಿದೆ. ಕೋಲಾರ ಗೋಲ್ಡ್ ಫೀಲ್ಡ್ಸ್ ನಲ್ಲಿ ಸೆಟ್ಟೇರಿರುವ ಈ ಚಿತ್ರವು 2024 ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ


Click it and Unblock the Notifications










