ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್ ನಿಧನ..!

ತಮ್ಮ ಅಭಿನಯದಿಂದ ಮನೆಮಾತಾಗಿದ್ದ ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್ ಇಂದು ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಮೀನಾ ಗಣೇಶ್ ಅವರನ್ನು ಶೋರ್‌ನೂರ್‌ನ ಪಿಕೆ ದಾಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 81ನೇ ವಯಸ್ಸಿನಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

1976ರಲ್ಲಿ ಮಣಿಮುಳಕಂ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಮೀನಾ ಅವರಿಗೆ 1991ರಲ್ಲಿ ಬಂದ ಮುಖಚಿತ್ರಂ ಅಪಾರ ಹೆಸರನ್ನು ತಂದು ಕೊಟ್ಟಿತ್ತು. ರಂಗಭೂಮಿಯಿಂದ ಚಿತ್ರರಂಗವನ್ನು ಪ್ರವೇಶಿಸಿದ್ದ ಮೀನಾ 100ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ಪೈಕಿ ವಸಂತಿಯುಂ ಲಕ್ಷ್ಮಿಯುಂ ಪಿನ್ನೆ ನಾನುಂ, ವಲ್ಕನ್ನಡಿ, ನಂದನಂ, ಮೀಸಮಾಧವನ್, ಕರುಮಾಡಿಕುಟ್ಟನ್, ಪ್ರಮುಖವಾದವು.

Malayalam actress Meena Ganesh passes away at the age of 81

ಇನ್ನು ಪಾಂಚಜನ್ಯಂ, ಫಸಹ್, ಮಯೂಖಂ, ಸಿಂಹಾಸನಂ, ಸ್ವರ್ಣ ಮಯೂರಂ, ಆಯರಂ ನಾವುಲ್ಲ ಮೌನಂ, ರಾಗಂ, ಕಾಲಂ, ಹೀಗೆ ಹಲವಾರು ನಾಟಕಗಳಲ್ಲಿ ಕೂಡ ಮೀನಾ ಅಭಿನಯಿಸಿದ್ದರು. ಇವರ ಪಾಂಚಜನ್ಯಂ ನಾಟಕವನ್ನು ಸತತ ಮೂರು ವರ್ಷಗಳ ಕಾಲ ಪ್ರದರ್ಶಿಸಲಾಗಿತ್ತು. ಫಸಾ ಎಂಬ ನಾಟಕದಲ್ಲಿ ಇವರು ನಿರ್ವಹಿಸಿದ್ದ ಕುಲಸುಂಬಿ ಪಾತ್ರ ಅಪಾರ ಜನಪ್ರಿಯತೆಯನ್ನು ಕೂಡ ಗಳಿಸಿತ್ತು.

1971ರಲ್ಲಿ ರಂಗಭೂಮಿಯಲ್ಲಿ ಅಪಾರವಾದ ಹೆಸರನ್ನು ಮಾಡಿದ್ದ ಎ.ಎನ್.ಗಣೇಶ್ ಅವರ ಜೊತೆ ಮದುವೆಯಾದ ಮೀನಾ, ತಮ್ಮ ಪತಿಯ ಜೊತೆ 20ಕ್ಕೂ ಹೆಚ್ಚಿನ ನಾಟಕಗಳಲ್ಲಿ ಅಭಿನಯಿಸಿದ್ದರು.

More from Filmibeat

Read more about: death malayalam filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X