ತಬ್ಬಿಕೊಂಡರು,ಮುತ್ತು ಕೊಟ್ಟರು,ಮಲಯಾಳಂನ ನಾಲ್ಕು ಪ್ರಮುಖ ನಟರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ನಟಿ ..!

ಹೇಮಾ ಆಯೋಗದ ವರದಿ ಜಗಜ್ಜಾಹೀರಾದ ಬೆನ್ನಲ್ಲಿಯೇ, ಮಲಯಾಳಂ ಚಿತ್ರರಂಗದಲ್ಲಿ ಒಬ್ಬೊಬ್ಬರಾಗಿಯೇ ತಮಗಾದ ಕಹಿ ಅನುಭವ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಈ ಸಾಲಿಗೆ ಈಗ ಮೀನು ಮುನೀರ್ ಕೂಡ ಸೇರಿಕೊಂಡಿದ್ದಾರೆ.

ಹೌದು, ಮಾಲಿವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಮೀನು ಮುನೀರ್, ಒಬ್ಬರಲ್ಲ ನಾಲ್ಕು ಜನರ ಮೇಲೆ ನೇರಾನೇರವಾಗಿ ಆರೋಪವನ್ನು ಮಾಡಿದ್ದಾರೆ. ಮಲಯಾಳಂನ ಪ್ರಮುಖ ನಟರಾದ ಎಂ.ಮುಕೇಶ್, ಮಣಿಯನ್ ಪಿಲ್ಲ ರಾಜು, ಇಡವೆಲ ಬಾಬು ಮತ್ತು ಜಯಸೂರ್ಯ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

Malayalam Actress Minu Muneer Accuses Prominent Stars of Misconduct Claims They Hugged and Kissed

2013ರಲ್ಲಿ ಚಿತ್ರದ ಚಿತ್ರೀಕರಣ ನಡೆದಿತ್ತು. ನಾನು ಆಗ ಶೌಚಾಲಯದಿಂದ ಮರಳಿ ಬರುತ್ತಿರುವ ಸಂದರ್ಭದಲ್ಲಿ ಜಯಸೂರ್ಯ ನನ್ನ ಒಪ್ಪಿಗೆ ಇಲ್ಲದೇ ನನ್ನನ್ನು ಹಿಂದೆಯಿಂದ ಬಂದು ತಬ್ಬಿಕೊಂಡಿದ್ದ ಎಂದಿರುವ ಮೀನು, ನನ್ನ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಇನ್ನಷ್ಟು ಚಿತ್ರಗಳಲ್ಲಿ ಅವಕಾಶ ಕೊಡಿಸುವುದಾಗಿಯೂ ಜಯಸೂರ್ಯ ಹೇಳಿದ್ದ ಅಂದಿದ್ದಾರೆ. ಹಾಗೂ ಹೀಗೂ ನಾನು ಅವನ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಬಂದೆ ಎಂದಿದ್ದಾರೆ.

ಇನ್ನೂ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಸದಸ್ಯತ್ವದ ಅರ್ಜಿಗೆ ನನ್ನನ್ನು ಸಂಪರ್ಕಿಸಿದ್ದ ಕಾರ್ಯದರ್ಶಿ ಇಡವೇಲ ಬಾಬು ಆ ನಂತರ ಸದಸ್ಯತ್ವ ನೀಡುವ ನೆಪದಲ್ಲಿ ತನ್ನ ಫ್ಲಾಟ್‌ಗೆ ಕರೆದು ದೈಹಿಕ ಹಿಂಸೆಯನ್ನು ನೀಡಿದ್ದಾನೆ ಎಂದು ಮೀನು ದೂರಿದ್ದಾರೆ. ಇವರು ಇಬ್ಬರು ಅಲ್ಲದೇ ಆಡಳಿತಾರೂಢ ಸಿಪಿಎಂ[ಎಂ]ನ ಶಾಸಕ ಮತ್ತು ನಟ ಮುಕೇಶ್ ವಿರುದ್ಧವೂ ಕೂಡ ಆರೋಪ ಮಾಡಿರುವ ಮೀನು ಮುನೀರ್ ಹಾಸಿಗೆ ಹಂಚಿಕೊಳ್ಳದ ಕಾರಣ ನನಗೆ ಮುಖೇಶ್ ಸದಸ್ಯತ್ವವನ್ನು ನೀಡಲಿಲ್ಲ ಎಂದಿದ್ದಾರೆ.

Malayalam Actress Minu Muneer Accuses Prominent Stars of Misconduct Claims They Hugged and Kissed

2013ರಲ್ಲಿ ನಾನು ಇವರೆಲ್ಲರಿಂದ ತುಂಬಾನೇ ಶೋಷಣೆಗೆ ಒಳಗಾಗಿದ್ದೇನೆ ಎಂದಿರುವ ಮೀನು ಒಂದು ಹಂತದಲ್ಲಿ ನಾನು ಎಲ್ಲವನ್ನೂ ಸಹಿಸಿಕೊಂಡು ಚಿತ್ರರಂಗದಲ್ಲಿ ಕೆಲಸ ಮಾಡಲು ಮುಂದಾದೆ, ಆದರೆ ಇವರೆಲ್ಲರಿಂದ ನಿರಂತರವಾಗಿ ನಡೆದ ದೈಹಿಕ ಮತ್ತು ಮೌಖಿಕ ನಿಂದನೆ ನನ್ನಿಂದ ಸಹಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಮಲಯಾಳಂ ಚಿತ್ರರಂಗವನ್ನೇ ನಾನು ಇವರಿಂದ ತೊರೆಯಬೇಕಾಯಿತು ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನಾನು ನನಗಾಗ ಅನ್ಯಾಯಕ್ಕೆ ನ್ಯಾಯವನ್ನು ಕೇಳುತ್ತಿದ್ದೇನೆ ಎಂದಿರುವ ಮೀನು ಮುನೀರ್, ಇವರೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇನ್ನೂ ತಮ್ಮ ಮೇಲೆ ಮೀನು ಮುನೀರ್ ಮಾಡಿರುವ ಈ ಆರೋಪಗಳಿಂದ ವಿಚಲಿತಗೊಂಡಿರುವ ನಟ ಮಣಿಯನ್ ಪಿಲ್ಲ ರಾಜು ಕೇಳಿ ಬಂದ ಈ ಆರೋಪಗಳ ಬಗ್ಗೆ ಶೀಘ್ರದಲ್ಲಿಯೇ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಆಗಲೇ ಇದರ ಹಿಂದಿನ ಉದ್ದೇಶ ಎಲ್ಲರಿಗೆ ಗೊತ್ತಾಗುತ್ತೆ ಎಂದಿದ್ದಾರೆ. ಕೆಲವರು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕೂಡ ಮಣಿಯನ್ ಪಿಲ್ಲ ರಾಜು ಹೇಳಿದ್ದಾರೆ. ಇದರ ನಡುವೆ ಕೊಲ್ಲಂ ಶಾಸಕ ಕೂಡ ಆಗಿರುವ ನಟ ಮುಖೇಶ್ ವಿರುದ್ಧ ಯುವ ಮೋರ್ಚಾ ಮತ್ತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಮುಕೇಶ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಅವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದಿದ್ದಾರೆ. ತಮ್ಮ ಶಾಸಕ ಸ್ಥಾನಕ್ಕೆ ಮುಖೇಶ್ ರಾಜೀನಾಮೆಯನ್ನು ಕೂಡ ನೀಡಬೇಕೆಂದು ಆಗ್ರಹಿಸಿದ್ದಾರೆ.

More from Filmibeat

Read more about: casting couch malayalam mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X