ಸುಧಾಮೂರ್ತಿ ಪುಸ್ತಕ ಓದಿ ಮೆಚ್ಚಿದ ಮಲೆಯಾಳಂ ನಟಿ

ಇನ್ಫೋಸಿಸ್ ಫೌಂಡೇಶನ್‌ನ ಸುಧಾಮೂರ್ತಿ, ತಮ್ಮ ಸಮಾಜಸೇವೆಯಿಂದ ಜನಸಾಮಾನ್ಯರಿಗೆ ಪರಿಚಿತರು. ಸಾಹಿತಿಯಾಗಿಯೂ ಸಹ ರಾಷ್ಟ್ರಮಟ್ಟದಲ್ಲಿ ಖ್ಯಾತರು ಸುಧಾಮೂರ್ತಿ. ಸುಧಾಮೂರ್ತಿ ಅವರಿಗೆ ತಮ್ಮದೇ ಆದ ಓದುಗ ಬಳಗವೇ ಇದೆ.

Recommended Video

ನೀನಾಸಂ ಸತೀಶ್ ಅವರ ವಿನೂತನ ಕಥೆ ಹೇಳುವ ಸರಣಿ | Sathish Neenasam start new venture on YouTube channel

ಮಲೆಯಾಳಂ ಸಿನಿಮಾ ನಟಿಯೊಬ್ಬರು ಸುಧಾಮೂರ್ತಿ ರಚಿಸಿರುವ ಪುಸ್ತಕ ಓದಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಾಕಿದ್ದಾರೆ.

ಮಲೆಯಾಳಂ ನಟಿ ಮಂಜಿಮಾ ಮೋಹನ್ ಸುಧಾಮೂರ್ತಿ ಬರೆದಿರುವ 'ತ್ರೀ ಥೌಸಂಡ್ ಸ್ಟಿಚಸ್' ಪುಸ್ತಕ ಓದಿ ಮೆಚ್ಚಿಕೊಂಡಿದ್ದಾರೆ. ಬರಹಗಾರ್ತಿಯನ್ನು ಮನಸಾರೆ ಹೊಗಳಿದ್ದಾರೆ.

ಸೋಲುಗಳನ್ನು ಒಪ್ಪಿಕೊಂಡು ಮುಂದೆಸಾಗಿ

ಸೋಲುಗಳನ್ನು ಒಪ್ಪಿಕೊಂಡು ಮುಂದೆಸಾಗಿ

'ಆತ್ಮವಿಶ್ವಾಸವೆಂದರೆ ಎಲ್ಲವೂ ನೀವು ಅಂದುಕೊಂಡಂತೆ ಆಗುವುದಲ್ಲ, ಸೋಲುಗಳನ್ನು ಸಹ ಒಪ್ಪಿಕೊಂಡು ಆಶಾಭಾವನೆ, ಭರವಸೆಗಳೊಂದಿಗೆ ಮುಂದಕ್ಕೆ ನಡೆಯುವದೇ ಆಗಿದೆ' ಎಂಬ ಸುಧಾಮೂರ್ತಿ ಅವರ ಪುಸ್ತಕದ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಹಲವು ಪುಸ್ತಕಗಳನ್ನು ಬರೆದಿರುವ ಸುಧಾಮೂರ್ತಿ

ಹಲವು ಪುಸ್ತಕಗಳನ್ನು ಬರೆದಿರುವ ಸುಧಾಮೂರ್ತಿ

ಸುಧಾಮೂರ್ತಿ ಅವರು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ 30 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ಮಕ್ಕಳ ಸಾಹಿತ್ಯವೂ ಸೇರಿದೆ. ಡಾಲರ್ ಬಹು, ದಿ ಮದರ್ ಐ ನೆವರ್ ನ್ಯೂ, ದಿ ಡಾಟ್ ಫ್ರಮ್ ಎ ವಿಶಿಂಗ್ ಟ್ರೀ ಇನ್ನೂ ಹಲವನ್ನು ಹೆಸರಿಸಬಹುದು.

ತಮಿಳು, ತೆಲುಗು ಸಿನಿಮಾದಲ್ಲೂ ನಟನೆ

ತಮಿಳು, ತೆಲುಗು ಸಿನಿಮಾದಲ್ಲೂ ನಟನೆ

ಇನ್ನು ನಟಿ ಮಂಜಿಮಾ ಮೋಹನ್ ಮಲೆಯಾಳಂ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಎನ್‌ಟಿಆರ್ ಮಹಾನಾಕಡು, ಸಾಹಸಂ ಸ್ವಾಸಗಾ ಸಾಗಿಪೋ, ಜಾಮ್ ಜಾಮ್ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಮೇಶ್ ಅರವಿಂದ್ ನಿರ್ದೇಶನದ ಚಿತ್ರದಲ್ಲಿ ನಟನೆ

ರಮೇಶ್ ಅರವಿಂದ್ ನಿರ್ದೇಶನದ ಚಿತ್ರದಲ್ಲಿ ನಟನೆ

ರಮೇಶ್ ಅರವಿಂದ್ ನಿರ್ದೇಶಿಸಿರುವ ಕ್ವೀನ್ ಚಿತ್ರದ ಮಲೆಯಾಳಂ ರೀಮೇಕ್‌ನಲ್ಲಿ ಮಂಜಿಮಾ ಮೋಹನ್ ನಟಿಸಿದ್ದಾರೆ. ಇದಕ್ಕೆ ಜಾಮ್ ಜಾಮ್ ಎಂದು ಹೆಸರಿಡಲಾಗಿದೆ. ಮಲೆಯಾಳಂ ನ ಖ್ಯಾತ ನಟಿಯರಲ್ಲಿ ಒಬ್ಬರು ಮಂಜಿಮಾ.

More from Filmibeat

English summary
Malayalam actress Manjima Mohan read Sudha Murthy's three thousand stitches and praised it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X