"ಮಹಿಳೆಯಾಗಿ ನನ್ನ ಜೀವನ ಈಗ ಪೂರ್ಣಗೊಂಡಿದೆ": ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಭಾವಕರಾದ ನಟಿ!

By ಫಿಲ್ಮಿಬೀಟ್ ಡೆಸ್ಕ್

ಪೂರ್ಣಾ ಉರ್ಫ್ ಶಮ್ನಾ ಕಾಸಿಂ. ಈ ಮಲಯಾಳಂ ನಟಿ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿ ಈಕೆ ನಟಿಸಿದ್ದಾರೆ. ಈ ನಟಿ ಇತ್ತೀಚೆಗೆ ದುಬೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿದ್ದಾರೆ.

ಶಮ್ನಾ ಕಾಸಿಂ (ಪೂರ್ಣಾ) ಕನ್ನಡದಲ್ಲೂ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿವಮಣಿ ನಿರ್ದೇಶಿಸಿದ 'ಜೋಶ್' ಈಕೆಯ ಮೊದಲ ಕನ್ನಡ ಸಿನಿಮಾ. ಆ ಬಳಿಕ ಇತ್ತೀಚೆಗೆ ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿದ ಸಿನಿಮಾ '100'ನಲ್ಲೂ ನಟಿಸಿದ್ದರು.

ಇದೇ ತಿಂಗಳು 4ರಂದು ಶಮ್ನಾ ಕಾಸಿಂ (ಪೂರ್ಣಾ) ದುಬೈನಲ್ಲಿ ಗಂಡು ಮಗವಿಗೆ ಜನ್ಮ ನೀಡಿದ್ದರು. ಇದೇ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ತೆಗೆದ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

"ಮಹಿಳೆಯಾಗಿ ನನ್ನ ಜೀವನ ಈಗ ಪೂರ್ಣಗೊಂಡಿದೆ"

ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೊಮ್ಮೆ ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದು, ತಾಯಿಯಾದ ಅನುಭವವನ್ನು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. "ಮಹಿಳೆಯಾಗಿ ನನ್ನ ಜೀವನ ಈಗ ಸಾರ್ಥಕಗೊಂಡಿದೆಂದು ಭಾವಿಸುತ್ತೇನೆ" ಎಂದು ನಟಿ ಶಮ್ನಾ ಕಾಸಿಂ (ಪೂರ್ಣಾ) ಭಾವುಕರಾಗಿದ್ದಾರೆ.

Malayalam actress Shamna Kasim Aka Poorna says feels complete women after gave birth To baby boy

ಇಂದು(ಏಪ್ರಿಲ್ 9) ಶಮ್ನಾ ಕಾಸಿಂ(ಪೂರ್ಣ) ಭಾವನಾತ್ಮಕ ಪೋಸ್ಟ್ ಅನ್ನು ಶೇರ್ ಮಾಡಿದ್ದು, ಆಪರೇಷನ್ ಥಿಯೇಟರ್‌ನಿಂದ ವಾರ್ಡ್‌ಗೆ ಕರೆತಂಡ ದೃಶ್ಯಗಳು, ವಾರ್ಡ್ ಅನ್ನು ಅಲಂಕರಿಸಿದ ಫೋಟೊಗಳು, ಬೇಬಿ ಬಾಯ್ ಎಂದು ಗೋಡೆ ಮೇಲೆ ಬರೆದ ದೃಶ್ಯ ಇವೆಲ್ಲವನ್ನೂ ವಿಡಿಯೋದಲ್ಲಿ ಹಂಚಿಕೊಂಡಿದ್ದರು. ಇದೆಲ್ಲವನ್ನೂ ನೋಡಿ ಕೆಲ ಕ್ಷಣ ಭಾವುಕರಾಗಿದ್ದರು.

"ನನಗೆ ನನ್ನ ತಾಯಿ ತುಂಬಾ ಇಷ್ಟ"

" ನನ್ನ ಜೀವನದಲ್ಲಿ ಇಂತಹ ಕ್ಷಣವನ್ನು ಊಹಿಸಲು ಸಾಧ್ಯವಿರಲಿಲ್ಲ. ನನ್ನ ತಾಯಿ ಅಂದರೆ ನನಗೆ ತುಂಬಾನೇ ಇಷ್ಟ. ಆಕೆ ನನ್ನ ಪ್ರಪಂಚ. ಈಗ ನಾನು ತಾಯಿಯಾಗುತ್ತಿದ್ದೇನೆ. ಈ ವೇಳೆ ನನಗೆ ನಾನು ಪರಿಪೂರ್ಣ ಮಹಿಳೆಯಾಗಿದ್ದೇನೆ." ಎಂದು ಅನಿಸುತ್ತಿದೆ ಎಂದು ನಟಿ ಪೂರ್ಣಾ ಹೇಳಿಕೊಂಡಿದ್ದಾರೆ.

ಪೂರ್ಣಾಗೆ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ದುಬೈ ಮೂಲದ ಉದ್ಯಮಿ ಶಾನಿದ್ ಆಸಿಫ್ ಅಲಿ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಎರಡು ತಿಂಗಳ ಬಳಿಕ ತಾಯಿಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದರು. ಹೀಗಾಗಿ ಮದುವೆಗೂ ಮುನ್ನವೇ ಡೇಟಿಂಗ್ ಮಾಡುತ್ತಿದ್ರಾ? ಅಂತನೂ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಮಲಯಾಳಂ ಸಿನಿಮಾ ಮೂಲಕ ನಟನೆ

ಕೇರಳ ಮೂಲದ ಶಮ್ನಾ ಕಾಸಿಂ ಚಿತ್ರರಂಗದಲ್ಲಿ ಪೂರ್ಣಾಳಾಗಿ ಚಿರಪರಿಚಿತ. 2004ರಲ್ಲಿ ಮಲಯಾಳಂ ಸಿನಿಮಾ 'ಮಂಜು ಪೊಲೊರು ಪೆಂಕುಟ್ಟಿ' ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಮಲಯಾಳಂ ಸಿನಿಮಾಗಳಲ್ಲೇ ಹೆಚ್ಚು ನಟಿಸಿದ ಬಳಿಕ 2007ರಲ್ಲಿ ತೆಲುಗಿಗೆ ಎಂಟ್ರಿ ಕೊಟ್ಟಿದ್ದರು.

ತೆಲುಗಿನ ಹಲವು ಸಿನಿಮಾಗಳಲ್ಲಿ ಶಮ್ನಾ ಕಾಸಿಂ ನಟಿಸಿದ್ದಾರೆ. ಹಾಗೇ ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ತೆರೆ ಕಂಡಿರೋ ಪ್ಯಾನ್ ಇಂಡಿಯಾ ಸಿನಿಮಾ 'ದಸರಾ'ದಲ್ಲೂ ಪೂರ್ಣಾ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ.

More from Filmibeat

English summary
Malayalam actress Shamna Kasim Aka Poorna says feels complete women after gave birth To baby boy, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X