''ಮನಸಾರೆ ಮಲಗೆದ್ದು ಆ ನಂತರ ನನ್ನ ಮೇಲೆ ಅತ್ಯಾಚಾರ ಆಯಿತು ಅನ್ನುವುದು ತಪ್ಪು'' ಎಂದ ಮಲಯಾಳಂ ನಟಿ.!

ಮದುವೆ ಅನ್ನುವುದು ಅನೇಕ ಹೃದಯಗಳಿಗೆ ನವಿರಾದ ಕಂಪನ. ಮಧುರ ಬಂಧನವೊಂದಕ್ಕೆ ಬೆಸೆದುಕೊಳ್ಳುವ, ಬದುಕು ಹಂಚಿಕೊಳ್ಳುವ ಸಡಗರ ತರುವ ಅನುಬಂಧ. ಈ ಬಂಧಕ್ಕೆ ತಮ್ಮನ್ನು ಜೋಡಿಸಿಕೊಳ್ಳುವ ಕಣ್ಣುಗಳು ಕಾಣುವ ಕನಸುಗಳಿಗೆ ಕೊನೆ ಇಲ್ಲ.

ಆದರೆ, ಈಗ ಆಧುನಿಕ ಯುಗದಲ್ಲಿ ಎಲ್ಲವೂ ಸರಿಯಾಗಿದ್ದರೂ ಕೂಡ ಹೊಸ ಸಂಬಂಧಕ್ಕೆ ಅನೇಕರು ಹಾತೊರೆಯುತ್ತಾರೆ. ವಿವಾಹೇತರ ಸಂಬಂಧ ಒಂದು ಸಾಹಸದಂತೆ, ರೋಚಕ ಅಧ್ಯಾಯದಂತೆಯೂ ಅನೇಕರು ಭಾವಿಸುತ್ತಾರೆ. ಹೀಗೆ ಮನದಲ್ಲಿ ಮೊಳಕೆಯೊಡೆಯುವ ಈ ಚಿಂತನೆಯನ್ನು ಕೆಲವರು ತಪ್ಪೆಂದು ವಾದ ಮಾಡುತ್ತಾರೆ. ಇನ್ನೂ ಕೆಲವರು ಸಮರ್ಥನೆಯನ್ನು ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಮಲಯಾಳಂನ ನಟಿ ಶೀಲು ಅಬ್ರಹಾಂ.

malayalam-actress-sheelu-abraham-says-its-wrong-to-claim-rape-after-consensual-sex-multiple-times

ಹೌದು, ಕಳೆದ ಒಂದು ದಶಕದಿಂದ ದೇವರ ನಾಡು ಕೇರಳದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ಶೀಲು ಅಬ್ರಹಾಂ, ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವಾಹೇತರ ಸಂಬಂಧ ತಪ್ಪಲ್ಲ ಎಂದಿದ್ದಾರೆ. ಅವರ ಅವರ ದೃಷ್ಟಿಕೋನದಲ್ಲಿ ಅವರು ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇರುತ್ತೆ ಎಂದಿದ್ದಾರೆ. ವೈವಾಹಿಕ ಜೀವನದಲ್ಲಿನ ಕೆಲ ಲೋಪ ದೋಷಗಳಿಂದ, ವಿವಾಹೇತರ ಸಂಬಂಧ ಶುರುವಾಗುತ್ತೆ ಎಂದಿರುವ ಶೀಲು ಇಂತಹ ಸಂಬಂಧವನ್ನು ತಪ್ಪು ಎಂದು ಹೇಳಲು ಆಗಲ್ಲ ಎಂದಿದ್ದಾರೆ.

ಅಂದ್ಹಾಗೇ ಶೀಲು ಬ್ಯಾಡ್ ಬಾಯ್ಸ್ ಎಂಬ ಚಿತ್ರದಲ್ಲಿ ಆಕ್ಟ್ ಮಾಡಿದ್ದಾರೆ. ಪ್ರಿಯಾ ವಾರಿಯರ್ ಹಿಂದೆ ಅಭಿನಯಿಸಿದ್ದ ಒರು ಅಡಾರ್ ಲವ್ ಚಿತ್ರ ನಿರ್ದೇಶಿಸಿದ್ದ ಒಮರ್ ಲುಲು ಈ ಚಿತ್ರವನ್ನು ನಿರ್ದೇಶಿಸಿದ್ಧಾರೆ. ವಿಪರ್ಯಾಸ ಎಂದರೆ ಈ ಒಮರ್ ಲುಲ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಇದೆ. ಚಿತ್ರದಲ್ಲಿ ಅವಕಾಶ ನೀಡುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿ ಆ ನಂತರ ಮೋಸ ಮಾಡಿದ ಅಪವಾದ ಇದೆ. ವಿವಾಹಿತನಾಗಿದ್ದರೂ ನಾನು ಇನ್ನೂ ಸಿಂಗಲ್ ಎಂದು ಸುಳ್ಳು ಹೇಳಿದ್ದಾನೆ ಎಂದು ಮಹಿಳೆಯಿಂದ ದೂರು ಕೂಡ ದಾಖಲಾಗಿದೆ.

malayalam-actress-sheelu-abraham-says-its-wrong-to-claim-rape-after-consensual-sex-multiple-times

ಈ ಪ್ರಕರಣದ ಕುರಿತು ಕೂಡ ಮಾತನಾಡಿರುವ ಶೀಲು ವಿವಾಹೇತರ ಸಂಬಂಧ ತಪ್ಪಲ್ಲ ಆದರೆ ಅತ್ಯಾಚಾರ ತಪ್ಪು ಎಂದಿದ್ದಾರೆ. ಇಷ್ಟ ಪಟ್ಟು ಬೇರೆಯವರ ಜೊತೆ ಹಾಸಿಗೆ ಹಂಚಿಕೊಳ್ಳುವುದು ತಪ್ಪಲ್ಲ ಆದರೆ ಹತ್ತು ಬಾರಿ ಮನಸಾರೆ ಹೋಗಿ ಆ ನಂತರ ನನ್ನ ಮೇಲೆ ಬಲಾತ್ಕಾರವಾಯಿತು ಎಂದು ಹೇಳುವುದು ತಪ್ಪು ಅಂದಿದ್ದಾರೆ. ಪುರುಷರು ಎಷ್ಟೇ ಸಂಬಂಧಗಳನ್ನು ಹೊಂದಿದ್ದರೂ ಅವರು ತಪ್ಪಿಸಿಕೊಳ್ಳುತ್ತಾರೆ. ಆದರೆ ಮಹಿಳೆಯರು ಯಾವಾಗಲೂ ಜಾಗರೂಕರಾಗಿರಬೇಕು ಎಂದು ಕೂಡ ಹೇಳಿದ್ದಾರೆ ಶೀಲು ಅಬ್ರಹಾಂ

ಮುಂದುವರೆದು ಒಮರ್ ಲುಲು ಒಳ್ಳೇಯವನಾ, ಕೆಟ್ಟವನಾ ಎಂದು ಹೇಳಲು ಸಾಧ್ಯ ಇಲ್ಲ. ಇವತ್ತು ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧ ಸರ್ವೆ ಸಾಮಾನ್ಯವಾಗಿವೆ ಎಂದಿರುವ ಶೀಲು ಪ್ರೀತಿಸುವವರ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಅದು ಅಸೂಯೆ, ದ್ವೇಷದ ಸ್ವರೂಪ ಪಡೆದು ಇಂತಹ ಪ್ರಕರಣಗಳಿಗೆ ಕಾರಣವಾಗುತ್ತವೆ ಅಂದಿದ್ದಾರೆ. ನನ್ನ ಮತ್ತು ಒಮರ್ ಲುಲು ನಡುವೆ ಆತ್ಮೀಯವಾದ ಸ್ನೇಹ ಇದೆ. ಈ ಪ್ರಕರಣದಿಂದ ಚಿತ್ರದ ಮೇಲೆ ಪರಿಣಾಮ ಆಗಬಹುದು ಎನ್ನುವ ಭಯ ನನಗೆ ಈಗ ಕಾಡುತ್ತಿದೆ ಎಂದಿದ್ದಾರೆ. ಸದ್ಯಕ್ಕೆ ಶೀಲು ಅಬ್ರಹಾಂ ಅವರ ಈ ಮಾತು ಮಂಥನ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶೀಲು ಅವರ ಈ ಹೇಳಿಕೆಗಳಿಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X