ಕುಡಿದ ಮತ್ತಿನಲ್ಲಿ ಅವತ್ತು 04 ಜನ ನನ್ನ ಬಳಿ ಬಂದಿದ್ದು ನಿಜಾ, ಆದರೆ ; ಶಕೀಲಾ ಹೇಳಿಕೆಗೆ ನಟಿಯ ಕೌಂಟರ್..!

ಮಲಯಾಳಂ ಚಿತ್ರರಂಗದತ್ತ ಎಲ್ಲರು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣುವುದು ಎಲ್ಲವೂ ಹಳದಿಯೆಂಬಂತೆ ಅಲ್ಲಿರುವ ನಾಯಕರೆಲ್ಲರು ಕಾಮಾಂಧರು ಎಂದು ಬಹುತೇಕರು ಅಂದುಕೊಂಡಿದ್ದಾರೆ. ಇನ್ನೂ .. ನಾಯಕಿಯರು ಕೂಡ ಒಬ್ಬರಾದ ಮೇಲೊಬ್ಬರಂತೆ ಬಂದು ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಿರುವ ಕಾರಣದಿಂದ ಶಾಖ ಇನ್ನೂ ಹೆಚ್ಚಾಗುತ್ತಿದೆ.

ಆದರೆ, ಇದೇ ವೇಳೆ ಹೇಮಾ ಸಮಿತಿಯ ವರದಿಯ ಹಿಂದೆ ನಿಂತು ಕೆಲವರು ಪ್ರಚಾರವನ್ನು ಪಡೆಯುತ್ತಿದ್ದಾರೆ ಎನ್ನುವ ಅನುಮಾನ ಕೂಡ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಮಲಯಾಳಂ ಚಿತ್ರರಂಗದಲ್ಲಿ ಜಡೆ ಜಗಳವೊಂದು ಶುರುವಾಗುವ ಎಲ್ಲ ಲಕ್ಷಣ ಕಂಡು ಬರುತ್ತಿದೆ. ಹೌದು, ಮಲಯಾಳಂ ಚಿತ್ರರಂದ ಕಾಮಕಾಂಡದ ಕುರಿತು ಇತ್ತೀಚೆಗೆ ಪೂರ್ವಾಶ್ರಮದಲ್ಲಿ ಫೋರ್ನ್ ನಾಯಕಿಯಾಗಿದ್ದ ಶಕೀಲಾ ಮಾತನಾಡಿದ್ದರು. ಕೇವಲ ಮಲಯಾಳಂ ಮಾತ್ರವಲ್ಲ ಎಲ್ಲ ಭಾ‍ಷೆಯಲ್ಲಿ ಕೂಡ ಈ ಸಮಸ್ಯೆ ಇದೆ ಅಂದಿದ್ದರು.

malayalam-and-tamil-actress-rupa-sree-responds-to-shakeelas-casting-couch-claim-about-her

ಹೀಗೆ ಮಾತನಾಡುತ್ತಾ, ಮಾತನಾಡುತ್ತಾ ರೂಪಶ್ರೀ ಎಂಬ ನಟಿಯ ಹೆಸರನ್ನು ಶಕೀಲಾ ಹೇಳಿದ್ದರು. ನಾವೂ ಇಬ್ಬರು ಒಂದು ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ನಾಲ್ಕು ಜನ ಬಲವಂತವಾಗಿ ರೂಪಶ್ರೀಯ ಕೋಣೆಗೆ ನುಗ್ಗುವ ಪ್ರಯತ್ನ ಮಾಡಿದ್ದರು ಎಂದಿದ್ದ ಶಕೀಲಾ, ನಾನೇ ಆಗ ರೂಪಶ್ರೀಯನ್ನು ಅಪಾಯದಿಂದ ಪಾರು ಮಾಡಿದ್ದೇ ಎಂದು ಹೇಳಿದ್ದರು.

ಶಕೀಲಾ ಅವರ ಈ ಹೇಳಿಕೆಗೆ ರೂಪಶ್ರೀ ಈಗ ಚಕಾರವೆತ್ತಿದ್ದಾರೆ. ಶಕೀಲಾ ಹೇಳಿರುವುದರಲ್ಲಿ ಅರ್ಧ ಸತ್ಯ ಇದೆ ಇನ್ನೂ ಅರ್ಧ ಮಿಥ್ಯ ಇದೆ ಎಂದಿದ್ದಾರೆ. ಒನ್ ಇಂಡಿಯಾ ತಮಿಳಿಗೆ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ರೂಪಶ್ರೀ ಆ ದಿನ ನನ್ನ ಬಳಿ ಕುಡುಕರ ಗುಂಪು ಬಂದಿದ್ದು ನಿಜಾ, ಗಲಾಟೆ ಮಾಡಿದ್ದು ನಿಜಾ ಎಂದಿದ್ದಾರೆ. ಶಕೀಲಾ ಅವರೇ ಹೇಳಿರುವಂತೆ ಅವರು ಮತ್ತು ಅವರ ಸಹೋದರ ಬಂದು ಆಗ ನನಗೆ ಸಹಾಯ ಮಾಡಿದರು, ಪರಿಸ್ಥಿತಿಯನ್ನು ಸಂಭಾಳಿಸಿದರು ಎಂದು ಕೂಡ ಒಪ್ಪಿಕೊಂಡಿದ್ದಾರೆ.

malayalam-and-tamil-actress-rupa-sree-responds-to-shakeelas-casting-couch-claim-about-her

ಆದರೆ, ಅವತ್ತು ನಡೆದ ಆ ಗಲಾಟೆ ಹಾಸಿಗೆ ಹಂಚಿಕೊಳ್ಳುವ ವಿಚಾರಕ್ಕೆ ಅಲ್ಲ ಬದಲಿಗೆ ಕಾಲ್ ಶೀಟ್ ವಿಚಾರಕ್ಕೆ ಎಂದಿರುವ ರೂಪಶ್ರೀ ಶಕೀಲಾ ತಪ್ಪು ತಿಳುವಳಿಕೆಯಿಂದ ಆ ಹೇಳಿಕೆಯನ್ನು ನೀಡಿದ್ದಾರೆ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಪಾತ್ರಕ್ಕಾಗಿ ಪಲ್ಲಂಗ ಹತ್ತುವಂತೆ ನನ್ನನ್ನು ಯಾರು ಒತ್ತಾಯ ಮಾಡಿಲ್ಲ ಎಂದು ಕೂಡ ರೂಪಶ್ರೀ ಹೇಳಿದ್ದಾರೆ. ಶಕೀಲಾ ಅವರು ಆ ದಿನದ ಘಟನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರಬಹುದು ಎಂದು ಹೇಳಿದ್ದಾರೆ.

ಸದ್ಯಕ್ಕೆ ಒಂದೇ ಚಿತ್ರದ ನಾಯಕಿಯರಿಬ್ಬರ ಈ ಭಿನ್ನ ಹೇಳಿಕೆಗಳು ಈಗ ಮಲಯಾಳಂ ಚಿತ್ರರಂಗದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಮಹಿಳೆಯರ ಸುರಕ್ಷಿತೆಯ ಕುರಿತು ನಡೆಯುತ್ತಿರುವ ಈ ಹೋರಾಟದಲ್ಲಿ ಸುಳ್ಳು ಹೇಳುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ರೂಪ ಶ್ರೀ ಅವರ ಈ ಹೇಳಿಕೆಗೆ ಇನ್ನೂ ಶಕೀಲಾ ಉತ್ತರವನ್ನು ನೀಡಿಲ್ಲ. ಮುಂದೆ ನೀಡುತ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Read more about: shakeela malayalam casting couch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X