For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಬಿಗ್ ಬಾಸ್ 3ನೇ ಆವೃತ್ತಿ ಎರಡು ವಾರ ವಿಸ್ತರಣೆ

  |

  ಕೊರೊನಾ ವೈರಸ್ ಭೀತಿಯಿಂದ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಅರ್ಧದಲ್ಲೇ ಮೊಟಕುಗೊಂಡಿತು. ಆದರೆ, ಮಲಯಾಳಂ ಬಿಗ್ ಬಾಸ್ ಎರಡು ವಾರ ಹೆಚ್ಚುವರಿ ಪ್ರಸಾರ ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

  ಶೋ ಆರಂಭವಾದಾಗ 100 ದಿನಗಳ ಸಂಚಿಕೆ ಎಂದು ಪ್ರಕಟಿಸಲಾಗಿತ್ತು. ಈಗ ಎರಡು ವಾರ ವಿಸ್ತರಿಸಿರುವ ಹಿನ್ನೆಲೆ 114 ದಿನಕ್ಕೆ ಮುಗಿಸಲು ತೀರ್ಮಾನಿಸಲಾಗಿದೆ ಎಂದು ಪಿಂಕ್‌ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.

  ಕೋವಿಡ್ ಎಫೆಕ್ಟ್: ಅರ್ಧಕ್ಕೆ ನಿಂತ ಬಿಗ್ ಬಾಸ್, ಭಾನುವಾರ ಕೊನೆಯ ಸಂಚಿಕೆಕೋವಿಡ್ ಎಫೆಕ್ಟ್: ಅರ್ಧಕ್ಕೆ ನಿಂತ ಬಿಗ್ ಬಾಸ್, ಭಾನುವಾರ ಕೊನೆಯ ಸಂಚಿಕೆ

  ಫೆಬ್ರವರಿ 14 ರಂದು ಆರಂಭವಾಗಿದ್ದ ಮಲಯಾಳಂ ಬಿಗ್ ಬಾಸ್ ಮೂರನೇ ಆವೃತ್ತಿ ಮೇ ಕೊನೆಯಲ್ಲಿ ಮುಗಿಯಬೇಕಿತ್ತು. ಈಗಾಗಲೇ ಮಲಯಾಳಂ ಬಿಗ್ ಬಾಸ್ 89 ದಿನಗಳನ್ನು ಪೂರೈಸಿದೆ. ಎರಡು ವಾರ ವಿಸ್ತರಿಸಿರುವುದರಿಂದ ಜೂನ್ ತಿಂಗಳಿಗೆ ಫಿನಾಲೆ ಮುಂದೂಡಿಕೆಯಾಗಿದೆ.

  ಒಟ್ಟು ಹದಿನಾಲ್ಕು ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ನಂತರ ವೈಲ್ಡ್ ಕಾರ್ಡ್‌ ಎಂಟ್ರಿಯೂ ಆಗಿತ್ತು. ಶೋ ನಿಯಮದಂತೆ ಇಷ್ಟು ವಾರಗಳ ಎಲಿಮಿನೇಷನ್ ನಂತರ 9 ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದಾರೆ.

  ಮಲಯಾಳಂ Bigg boss ಕದ್ದು ಚಿತ್ರೀಕರಣ ನಡೆಸಲಾಗುತ್ತಿತ್ತು | Filmibeat Kannada

  ಕೇರಳದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆದರೂ ರಿಯಾಲಿಟಿ ಶೋ ಮುಂದುವರಿಸಲು ಯಾವುದೇ ಅಡೆ-ತಡೆ ಇಲ್ಲ. ಸದ್ಯ ರಾಜ್ಯದಲ್ಲಿ ಸೋಂಕು ಹೆಚ್ಚಾಗಿರುವ ಕಾರಣದಿಂದ ಮತ್ತೆರಡು ವಾರ ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ.

  English summary
  Malayalam Superstar Mohanlal Hosted Bigg Boss 3 to be extended for two more weeks.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X