twitter
    For Quick Alerts
    ALLOW NOTIFICATIONS  
    For Daily Alerts

    ಮಲಯಾಳಂ ಡೈರೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ, ಶೂಟಿಂಗ್ ಸ್ಥಳದಲ್ಲೇ ಬಂಧನ!

    |

    ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಲಯಾಳಂ ನಿರ್ದೇಶಕ ಲಿಜು ಕೃಷ್ಣ ಎನ್ನುವವರನ್ನು ಶೂಟಿಂಗ್ ಸ್ಥಳದಲ್ಲಿಯೇ ಬಂಧಿಸಲಾಗಿದೆ. ಪೊಲೀಸರು ಲಿಜು ಕೃಷ್ಣನನ್ನು ಬಂಧಿಸಿದ ಬಳಿಕ 'ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ' ಸಂಸ್ಥೆ ಅಡಿಯಲ್ಲಿ ಬರುವ ನಿರ್ದೇಶಕರ ಸಂಘ ಈ ನಿರ್ದೇಶಕನ 30 ವರ್ಷದ ಸದಸ್ಯತ್ವವನ್ನು ರದ್ದುಗೊಳಿಸಿದೆ ಎಂದು ವರದಿ ಆಗಿದೆ.

    ಕಣ್ಣೂರಿನ ಪಡವೆಟ್ಟು ಎಂಬಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ಸ್ಥಳದಿಂದ ಕೃಷ್ಣ ಅವರನ್ನು ಭಾನುವಾರ (ಮಾರ್ಚ್ 6) ರಂದು ಬಂಧಿಸಲಾಗಿದೆ. ಅಲ್ಲಿಂದ ಕೃಷ್ಣನನ್ನು ಕೊಚ್ಚಿಗೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಲಿಜು ಕೃಷ್ಣ ವಿರುದ್ಧ ಆರೋಪ ಮಾಡಿರುವ ಸಂತ್ರಸ್ತೆ ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಆಕೆ ಚಿತ್ರದ ಸ್ಕ್ರಿಪ್ಟ್‌ಗೆ ಕೊಡುಗೆ ನೀಡಿದ್ದಾರಂತೆ. ಆದರೆ ನಿರ್ದೇಶಕ ಆಕೆಯ ಕೆಲಸವನ್ನು ಗುರುತಿಸಿಲ್ಲವಂತೆ. ಅವರು ಮಾಡುತ್ತಿದ್ದ ದೌರ್ಜನ್ಯದ ಬಗ್ಗೆ ಚಿತ್ರ ತಂಡಕ್ಕೆ ಸ್ಪಷ್ಟಪಡಿಸಲು ಲಿಜು ಕೃಷ್ಣ ಅವಕಾಶ ಮಾಡಿಕೊಟ್ಟಿಲ್ಲ. ಮತ್ತು 2020ರ ಜೂನ್‌ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬರೆದುಕೊಂಡಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸ ಇದೆ ಎಂದು ಹೇಳಿ, ಬಲವಂತವಾಗಿ ನನ್ನನ್ನು ಕರೆಸಿಕೊಂಡರು ಎಂದಿದ್ದಾರೆ.

    Malayalam Director Arrested From Shooting Location In Sexual Assault Case

    "ಅವನು ನನ್ನ ಒಪ್ಪಿಗೆ ಇಲ್ಲದೆ ನನ್ನನ್ನು ಲೈಂಗಿಕವಾಗಿ ಆಕ್ರಮಣ ಮಾಡಿದ್ದಾನೆ. ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದೆ, ಆದರೆ ಆತ ನಿರಾಕರಿಸಿದ. ನನಗೆ ಆ ಆಘಾತವನ್ನು ತಡೆದುಕೊಳ್ಳಲಾಗಲಿಲ್ಲ. ನನ್ನ ಆರೋಗ್ಯ ಹದಗೆಟ್ಟಿರುವ ಬಗ್ಗೆ ಅವನಿಗೆ ತಿಳಿಸಲು ಪ್ರಯತ್ನಿಸಿದೆ. ಆದರೆ ಅವನ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ." ಎಂದು ವಿವರಿಸಿದ್ದಾರೆ.

    ''ಲಿಜು ಕೃಷ್ಣ 2020 ಅಕ್ಟೋಬರ್‌ನಲ್ಲಿ ಮತ್ತೆ ಸಂಪರ್ಕಿಸಿದ್ದ. ಆತನ ಕೋರಿಕೆಯಂತೆ, ನಾನು ಚಲನಚಿತ್ರ ನಿರ್ಮಾಣಕ್ಕಾಗಿ ಮತ್ತೊಂದು ಮನೆಯನ್ನು ವ್ಯವಸ್ಥೆ ಮಾಡಿದೆ. ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಥೆಯಲ್ಲಿ ಬದಲಾವಣೆಗಳನ್ನು ಸೂಚಿಸಿದ್ದೆ. ಈ ಅವಧಿಯಲ್ಲೂ ಅವರು ನನ್ನನ್ನು ಶೋಷಿಸಿದರು. ಜೂನ್ 2021ರಲ್ಲಿ, ಅವರು ನನ್ನನ್ನು ಕಣ್ಣೂರಿನ ಶೂಟಿಂಗ್ ಸ್ಥಳಕ್ಕೆ ಆಹ್ವಾನಿಸಿದರು ಮತ್ತು ಅವರ ಮನೆಯಲ್ಲಿಯೇ ಇರುವಂತೆ ನನ್ನನ್ನು ಒತ್ತಾಯಿಸಿದರು, ಅಲ್ಲಿ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದರು. ನಾನು ವಿರೋಧಿಸಿದೆ ಮತ್ತು ಮರುದಿನ ಮನೆಗೆ ಮರಳಿದೆ."

    ಹೀಗೆ ತಮ್ಮ ಮೇಲೆ ಆಗಿರುವ ದೌರ್ಜನ್ಯವನ್ನು ಸಂತ್ರಸ್ತೆ ಕೂಲಂಕಶವಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕನ ವಿರುದ್ಧ ಸಾಕಷ್ಟು ಕಮೆಂಟ್‌ಗಳು ಬಂದಿವೆ.

    English summary
    Malayalam Director Liju Krishna Arrested From Shooting Location In Sexual Assault Case, Know More,
    Thursday, March 10, 2022, 15:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X