"ನನ್ನ ಬೆತ್ತಲೆ ಫೋಟೊಗಳನ್ನು ನಟಿ ರೇವತಿಗೆ ಕಳುಹಿಸಿದ್ದ"; ನಿರ್ದೇಶಕ ರಂಜಿತ್ ವಿರುದ್ಧ ಮತ್ತೊಂದು ಆರೋಪ

By ಫಿಲ್ಮಿಬೀಟ್ ಡೆಸ್ಕ್

ಮಲಯಾಳಂ ಚಿತ್ರರಂಗದಲ್ಲಿ ಧಗೆ ಹತ್ತಿ ಉರಿಯುತ್ತಿದೆ. ಜಸ್ಟಿಸ್ ಹೇಮಾ ಕಮಿಡಿ ವರದಿ ಬಹಿರಂಗಗೊಂಡ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಕರ್ಮಕಾಂಡದ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಮಲಯಾಳಂ ಚಿತ್ರರಂಗದ ದಿಗ್ಗಜರ ವಿರುದ್ಧ ಸಂತ್ರಸ್ತರು ಆರೋಪಗಳನ್ನು ಮಾಡುತ್ತಿದ್ದಾರೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಇಂತಹ ಆರೋಪವನ್ನು ಮಾಡುತ್ತಲೇ ಇದ್ದಾರೆ.

ಮಲಯಾಳಂ ನಿರ್ದೇಶಕ ರಂಜಿತ್, ನಟ ಮುಕೇಶ್, ಸಿದ್ಧಿಕಿ ಸೇರಿದಂತೆ ಹಲವರ ಹೆಸರುಗಳು ಈ ಲೈಂಗಿಕ ಕಿರುಕುಳ ಆರೋಪದಲ್ಲಿ ಕೇಳಿ ಬರುತ್ತಿದೆ. ಬೆಂಗಾಲಿ ನಟಿ ಶ್ರೀಲೇಖಾ ಮಿತ್ರ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಮತ್ತೊಬ್ಬ ಯುವಕ ಕೂಡ ಮಲಯಾಳಂ ನಿರ್ದೇಶಕ ರಂಜಿತ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Malayalam director Ranjith sent his nude photo to actress Revathi alleges a young man

2012ರಲ್ಲಿ ನಡೆದ ಘಟನೆಯನ್ನು ಯುವಕ ಪ್ರಸ್ತಾಪಿಸಿದ್ದು, ತನ್ನ ಬೆತ್ತಲೆ ಫೋಟೋವನ್ನು ಫೋನ್‌ನಲ್ಲಿ ಸೆರೆ ಹಿಡಿದು ನಟಿ ರೇವತಿಗೆ ಕುಳುಹಿಸಿದ್ದರು ಎಂದು ಆರೋಪ ಮಾಡಿದ್ದಾನೆ. ಈ ಮೂಲಕ ಮಲಯಾಳಂನ ಜನಪ್ರಿಯ ನಿರ್ದೇಶಕ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ ಸಂತ್ರಸ್ತ ಯುವಕನ ಆರೋಪವೇನು?

ಯುವಕನೊಬ್ಬ ಮಾಧ್ಯಮಗಳ ಮುಂದೆ ಬಂದು 2012ರಲ್ಲಿ ನಿರ್ದೇಶಕ ರಂಜಿತ್ ತನಗೆ ಕಿರುಕುಳ ನೀಡಿದ್ದಾಗಿ ಆರೋಪ ಮಾಡಿದ್ದಾನೆ. ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ಹೀಗೆ ಪೀಡಿಸಿದ್ದು, ಈ ಸಂಬಂಧ ಯುವಕ ದೂರನ್ನು ದಾಖಲಿಸಿದ್ದಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾನೆ. ಆ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ.

Malayalam director Ranjith sent his nude photo to actress Revathi alleges a young man

ಮಲಯಾಳಂ ನಿರ್ದೇಶಕ ರಂಜಿತ್ ಸೂಚನೆ ಮೇರೆಗೆ ಈ ಯುವಕ ಬೆಂಗಳೂರಿನ ಹೋಟೆಲ್‌ಗೆ ತಲುಪಿದ್ದರು. ಆಗ ರಂಜಿತ್ ನಟಿಯೊಬ್ಬರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಯುವಕನನ್ನು ಬೆತ್ತಲೆಯಾಗಿ ನಿಲ್ಲುವಂತೆ ನಿರ್ದೇಶಕ ರಂಜಿತ್ ಹೇಳಿದ್ದರಂತೆ. ಆ ಫೋಟೋವನ್ನು ತೆಗೆದು ನಟಿ ರೇವತಿಗೆ ಕಳುಹಿಸಿದ್ದಾಗಿ ಆ ಯುವಕ ಗಂಭೀರ ಆರೋಪ ಮಾಡಿದ್ದಾನೆ.

"ನಿರ್ದೇಶಕ ರಂಜಿತ್ ಕೋಣೆಗೆ ಹೋದಾಗ ಬೆತ್ತಲೆಯಾಗಿ ನಿಲ್ಲುವಂತೆ ಹೇಳಿದ್ದರು. ಆಗ ನಟಿ ರೇವತಿಯೊಂದಿಗೆ ನಿರ್ದೇಶಕ ರಂಜಿತ್ ಮಾತಾಡುತ್ತಿದ್ದರು. ಅವರಿಬ್ಬರಿಗೂ ಸಂಬಂಧವಿದೆಯೋ ಇಲ್ಲವೋ ಗೊತ್ತಿಲ್ಲ. ರಂಜಿತ್ ನನ್ನ ಫೋಟೊ ತೆಗೆದು ಕಳುಹಿಸಿದಾಗ, ಯಾರಿಗೆ ಎಂದು ಕೇಳಿದ್ದರು. ಆ ವೇಳೆ ಅವರು ರೇವತಿಗೆ ಕಳುಹಿಸಿದ್ದು, ಅವರು ಆ ಫೋಟೋವನ್ನು ನೋಡಿ ಇಷ್ಟ ಪಟ್ಟಿದ್ದಾರೆ" ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾನೆ.

ಹೋಟೆಲ್‌ಗೆ ಹೋದ ಬಳಿಕ ಬಲವಂತಾಗಿ ಮದ್ಯಸೇವನೆ ಮಾಡುವಂತೆ ಮಾಡಿ, ಅಮಲಿನಲ್ಲಿ ಇರುವಾಗ ಯುವಕನನ್ನು ಬೆತ್ತಲೆಗೊಳಿದ್ದಾರೆಂದು ಆ ಯುವಕ ಆರೋಪ ಮಾಡಿದ್ದಾನೆ. ಅಂದ್ಹಾಗೆ ಮಲಯಾಳಂನ ಈ ವಿವಾದಾತ್ಮಕ ನಿರ್ದೇಶಕ ಮೂರು ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದು, ನಟಿ ರೇವತಿ ಅವರಿಗೆ ಸಂಬಂಧಿಯಾಗಬೇಕು.

More from Filmibeat

English summary
Victim alleged that Malayalam director Ranjith sent his nude photo to actress Revathi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X