Siddique death: ಮಲಯಾಳಂ ನಿರ್ದೇಶಕ ಸಿದ್ದಿಕಿ (63) ನಿಧನ

ಮಲಯಾಳಂ ಸಿನಿಮಾ ನಿರ್ದೇಶಕ ಸಿದ್ದಿಕಿ ಇಸ್ಮಾಯಿಲ್ ಅವರು 63 ನೇ ವಯಸ್ಸಿನಲ್ಲಿ ಮಂಗಳವಾರ ನಿಧನರಾದರು. ಯಕೃತ್ತಿನ ಕಾಯಿಲೆಯ ಹಿನ್ನೆಲೆ ಕಳೆದ ತಿಂಗಳು ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮಧ್ಯಾಹ್ನ ಹೃದಯಾಘಾತಕ್ಕೆ ಒಳಗಾಗಿದ್ದರು. ಬಳಿಕ ಅವರನ್ನು ಎಕ್ಸ್ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ECMO) ಬೆಂಬಲದಲ್ಲಿ ಇರಿಸಲಾಗಿತ್ತು.

ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ಮಂಗಳವಾರ ರಾತ್ರಿ ಸಿದ್ದಿಕಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಮಲಯಾಳಂ ನಿರ್ದೇಶಕರು ಅವರ ಪತ್ನಿ ಸಜಿತಾ ಮತ್ತು ಅವರ ಮೂವರು ಮಕ್ಕಳಾದ ಸುಮಯಾ, ಸಾರಾ ಮತ್ತು ಸುಕೂನ್ ಅವರನ್ನು ಅಗಲಿದ್ದಾರೆ.

Malayalam director Siddique passed away due to heart attack

ಸೋಮವಾರ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ, ಅವರ ದೀರ್ಘಕಾಲದ ಸ್ನೇಹಿತ ಲಾಲ್, ನಟರಾದ ಸಿದ್ಧಿಕ್ ಮತ್ತು ರೆಹಮಾನ್, ಗಾಯಕ ಎಂಜಿ ಶ್ರೀಕುಮಾರ್ ಮತ್ತು ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ (ಫೆಫ್ಕಾ) ಪ್ರಧಾನ ಕಾರ್ಯದರ್ಶಿ ಬಿ ಉನ್ನಿಕೃಷ್ಣನ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿಸಿದ್ದರು.

ನಿರ್ದೇಶಕ ಮೇಜರ್ ರವಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಸಿದ್ದಿಕ್ ವೈದ್ಯರೊಂದಿಗೆ ಮಾತನಾಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಜರ್ ರವಿ, "ಅವರಿಗೆ ಉಸಿರಾಟದ ಸಮಸ್ಯೆ ಇದೆ. ಕ್ರಿಯೇಟೈನ್ ಕೂಡ ಹೆಚ್ಚಾಗಿದೆ. ಅವರು ಕ್ರಿಟಿಕಲ್ ಐಸಿಯುನಲ್ಲಿರುವ ಕಾರಣ, ನನಗೆ ಅವರನ್ನು ನೋಡಲು ಸಾಧ್ಯವಾಗಲಿಲ್ಲ. ಮೂರು ದಿನಗಳ ಹಿಂದೆ ಅವರನ್ನು ಮತ್ತೆ ಆಸ್ಪತ್ರೆಯ ಕೊಠಡಿಗೆ ವರ್ಗಾಯಿಸಲಾಗಿತ್ತು. ಆದರೆ ನಂತರ ಅವರಿಗೆ ಹೃದಯಾಘಾತವಾಗಿತ್ತು. ಇದರಿಂದ ಅವರ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಅವರಿಗೆ ಪ್ರಮುಖ ಸಮಸ್ಯೆಗಳಿರಲಿಲ್ಲ. ಮೂರು ತಿಂಗಳ ಹಿಂದೆ ಒಂದು ಫಂಕ್ಷನ್‌ನಲ್ಲಿ ನಾನು ತುಂಬಾ ಖುಷಿಯಾದ ಸಿದ್ದಿಕಿ ಅವರನ್ನು ಭೇಟಿಯಾಗಿದ್ದೆ" ಎಂದಿದ್ದಾರೆ.

ನಿರ್ದೇಶಕ ಸಿದ್ದಿಕಿ ಪರಿಚಯ

ಸಿನಿಮಾ ಲೋಕಕ್ಕೆ ಸಿದ್ದಿಕಿ ಅವರ ಪಯಣ ಆರಂಭವಾದದ್ದು ಖ್ಯಾತ ಚಿತ್ರ ನಿರ್ದೇಶಕ ಫಾಜಿಲ್ ಅವರ ಸಹಾಯಕ ನಿರ್ದೇಶಕರಾಗಿ. ಪ್ರತಿಭೆಯನ್ನು ಗುರುತಿಸುವಲ್ಲಿ ತಮ್ಮದೇ ಹೆರು ಮಾಡಿರುವ ಫಾಜಿಲ್, ಕೊಚ್ಚಿನ್ ಕಲಾಭವನ ತಂಡದಲ್ಲಿ ತಮ್ಮ ಗಮನಾರ್ಹ ಕಲೆ ಪ್ರದರ್ಶಿಸಿದ್ದ ಸಿದ್ದಿಕಿ ಮತ್ತು ಲಾಲ್ ಅವರನ್ನು ಗುರುತಿಸಿದ್ದ ಅವರು, ಇಬ್ಬರನ್ನು ತಮ್ಮ ಜೊತೆಗೆ ಸೇರಿಸಿಕೊಂಡಿದ್ದರು.

ಒಟ್ಟಿಗೆ, ಸಿದ್ದಿಕಿ ಮತ್ತು ಲಾಲ್ ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ತೊಡಗಿದರು., ಮಲಯಾಳಂ ಮತ್ತು ಇತರ ಭಾಷೆಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಸಾಂಪ್ರದಾಯಿಕ ಹಾಸ್ಯ ಚಲನಚಿತ್ರಗಳ ಸರಣಿಗೆ ಇವರು ಮೂಲ. ಸಿದ್ದಿಕಿ-ಲಾಲ್ ಜೋಡಿಯು "ರಾಮ್‌ಜಿ ರಾವ್ ಸ್ಪೀಕಿಂಗ್" (1989), "ಇನ್ ಹರಿಹರ್ ನಗರ" (1990), "ಗಾಡ್‌ಫಾದರ್" (1991), "ವಿಯೆಟ್ನಾಂ ಕಾಲೋನಿ" (1992), "ಕಾಬುಲಿವಾಲಾ" (1994) ನಂತಹ ಹಿಟ್‌ಗಳನ್ನು ನೀಡಿದ್ದಾರೆ.

ಇವರ ಜೋಡಿ ಸಿನಿರಂಗದಲ್ಲಿ ಛಾಪು ಮೂಡಿಸಲು ಶುರುಮಾಡಿದ ಬೆನ್ನಲ್ಲೇ ನಿರ್ದೇಶಕರಾಗಿ ಸಿದ್ದಿಕಿ ಅವರ ವೈಯಕ್ತಿಕ ವೃತ್ತಿಜೀವನವು ಪ್ರವರ್ಧಮಾನಕ್ಕೆ ಬಂದಿತು. ಅವರು "ಹಿಟ್ಲರ್" (1996), "ಫ್ರೆಂಡ್ಸ್" (1999), "ಕ್ರಾನಿಕ್ ಬ್ಯಾಚುಲರ್" (2003), "ಬಾಡಿ ಗಾರ್ಡ್" (2010), "ಲೇಡೀಸ್ & ಜಂಟಲ್ಮೆನ್" (2013), "ಭಾಸ್ಕರ್ ದಿ ರಾಸ್ಕಲ್" (2015), "ಫುಕ್ರಿ" (2017), ಮತ್ತು "ಬಿಗ್ ಬ್ರದರ್" (2020) ನಂತಹ ಗಮನಾರ್ಹ ಚಲನಚಿತ್ರಗಳನ್ನು ನಿರ್ದೇಶಿಸಿದರು.

ಸಿದ್ದಿಕಿ ಅವರು ತಮ್ಮದೆ ಹಿಟ್ ಚಿತ್ರ "ಬಾಡಿಗಾರ್ಡ್" ಅನ್ನು ತಮಿಳಿಗೆ "ಕಾವಲನ್" ಮತ್ತು ಹಿಂದಿಗೆ "ಬಾಡಿಗಾರ್ಡ್" ಎಂದು ರಿಮೇಕ್ ಮಾಡಿದ್ದರು. ತಮಿಳಿನಲ್ಲಿ ವಿಜಯ್ ಮತ್ತು ಯಾಸಿನ್ ಜೋಡಿ ಜನರನ್ನು ಮೋಡಿ ಮಾಡಿದರೇ, ಹಿಂದಿಯ ಬಾಡಿಗಾರ್ಡ್ ಸೂಪರ್ ಹಿಟ್ ಚಿತ್ರವಾಯಿತು. ನಟ ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಜೋಡಿ ಬಾಲಿವುಡ್‌ನಲ್ಲಿ ಧೂಳೆಬ್ಬಿಸಿತ್ತು.

More from Filmibeat

English summary
Siddique death: Malayalam director Siddique Ismail passed away on Tuesday night while undergoing treatment. he was suffered from heart attack monday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X