Siddique health: ಮಲಯಾಳಂ ನಿರ್ದೇಶಕ ಸಿದ್ದಿಕಿಗೆ ಹೃದಯಾಘಾತ, ಆರೋಗ್ಯ ಸ್ಥಿತಿ ಚಿಂತಾಜನಕ
ಸೋಮವಾರ ಸಂಜೆಯ ವೇಳ ಹೃದಯಾಘಾತಕ್ಕೆ ಒಳಗಾಗಿರುವ ಮಲಯಾಳಂ ಸಿನಿಮಾ ನಿರ್ದೇಶಕ ಸಿದ್ದಿಕಿ ಅವರ ಸ್ಥಿತಿ ಚಿಂತಾಜನಕವಾಗಿದೆ. ವರದಿಗಳ ಪ್ರಕಾರ ಅವರ ಆರೋಗ್ಯ ಸ್ಥೀತಿ ತೀವ್ರ ಗಂಭೀರವಾಗಿದೆ. ಅವರು ಇನ್ನೂ ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ಇಸಿಎಂಒ) ಯಂತ್ರದ ಬೆಂಬಲ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ದೃಢಪಡಿಸಿವೆ.
ಸಿದ್ದಿಕಿ ಅವರ ಆರೋಗ್ಯದ ಮೇಲೆ ದಿನದ 24 ಗಂಟೆಯೂ ನಿಗಾ ಇರಿಸಲಾಗಿದೆ. ಇಂದು ಸಂಜೆ ಅವರ ಆರೋಗ್ಯ ಸ್ಥಿತಿ ಕುರಿತು ವೈದ್ಯಕೀಯ ಮಂಡಳಿ ಪರಿಶೀಲನಾ ಸಭೆ ನಡೆಸಲಿದ್ದು ಅದರ ನಂತರ ಆರೋಗ್ಯದ ಕುರಿತು ಹೆಚ್ಚಿನ ಅಪ್‌ಡೇಟ್ ನೀಡಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.

ಮಲಯಾಳಂ ಚಿತ್ರ ನಿರ್ದೇಶಕ ಸಿದ್ದಿಕಿಗೆ ಆಗಸ್ಟ್ 7, 2023 ರಂದು ಮಧ್ಯಾಹ್ನ 3 ಗಂಟೆಗೆ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದಿಕಿ ಅವರು ನ್ಯುಮೋನಿಯಾ ಮತ್ತು ಯಕೃತ್ತಿನ ಕಾಯಿಲೆಯಿಂದ ವೈದ್ಯಕೀಯ ಆರೈಕೆಯಲ್ಲಿದ್ದರು ಎಂಬ ಮಾಹಿತಿ ದೊರೆತಿದೆ. ನಿರಂತರ ಚಿಕಿತ್ಸೆಯ ಹೊರತಾಗಿಯೂ ಸೋಮವಾರ ಅವರಿಗೆ ಹೃದಯಾಘಾತವಾಗಿದೆ.
ನಿರ್ದೇಶಕ ಸಿದ್ದಿಕಿ ಪರಿಚಯ
ಸಿನಿಮಾ ಲೋಕಕ್ಕೆ ಸಿದ್ದಿಕಿ ಅವರ ಪಯಣ ಆರಂಭವಾದದ್ದು ಖ್ಯಾತ ಚಿತ್ರ ನಿರ್ದೇಶಕ ಫಾಜಿಲ್ ಅವರ ಸಹಾಯಕ ನಿರ್ದೇಶಕರಾಗಿ. ಪ್ರತಿಭೆಯನ್ನು ಗುರುತಿಸುವಲ್ಲಿ ತಮ್ಮದೇ ಹೆರು ಮಾಡಿರುವ ಫಾಜಿಲ್, ಕೊಚ್ಚಿನ್ ಕಲಾಭವನ ತಂಡದಲ್ಲಿ ತಮ್ಮ ಗಮನಾರ್ಹ ಕಲೆ ಪ್ರದರ್ಶಿಸಿದ್ದ ಸಿದ್ದಿಕಿ ಮತ್ತು ಲಾಲ್ ಅವರನ್ನು ಗುರುತಿಸಿದ್ದ ಅವರು, ಇಬ್ಬರನ್ನು ತಮ್ಮ ಜೊತೆಗೆ ಸೇರಿಸಿಕೊಂಡಿದ್ದರು.
ಒಟ್ಟಿಗೆ, ಸಿದ್ದಿಕಿ ಮತ್ತು ಲಾಲ್ ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ತೊಡಗಿದರು., ಮಲಯಾಳಂ ಮತ್ತು ಇತರ ಭಾಷೆಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಸಾಂಪ್ರದಾಯಿಕ ಹಾಸ್ಯ ಚಲನಚಿತ್ರಗಳ ಸರಣಿಗೆ ಇವರು ಮೂಲ. ಸಿದ್ದಿಕಿ-ಲಾಲ್ ಜೋಡಿಯು "ರಾಮ್‌ಜಿ ರಾವ್ ಸ್ಪೀಕಿಂಗ್" (1989), "ಇನ್ ಹರಿಹರ್ ನಗರ" (1990), "ಗಾಡ್‌ಫಾದರ್" (1991), "ವಿಯೆಟ್ನಾಂ ಕಾಲೋನಿ" (1992), "ಕಾಬುಲಿವಾಲಾ" (1994) ನಂತಹ ಹಿಟ್‌ಗಳನ್ನು ನೀಡಿದ್ದಾರೆ.

ಇವರ ಜೋಡಿ ಸಿನಿರಂಗದಲ್ಲಿ ಛಾಪು ಮೂಡಿಸಲು ಶುರುಮಾಡಿದ ಬೆನ್ನಲ್ಲೇ ನಿರ್ದೇಶಕರಾಗಿ ಸಿದ್ದಿಕಿ ಅವರ ವೈಯಕ್ತಿಕ ವೃತ್ತಿಜೀವನವು ಪ್ರವರ್ಧಮಾನಕ್ಕೆ ಬಂದಿತು. ಅವರು "ಹಿಟ್ಲರ್" (1996), "ಫ್ರೆಂಡ್ಸ್" (1999), "ಕ್ರಾನಿಕ್ ಬ್ಯಾಚುಲರ್" (2003), "ಬಾಡಿ ಗಾರ್ಡ್" (2010), "ಲೇಡೀಸ್ & ಜಂಟಲ್ಮೆನ್" (2013), "ಭಾಸ್ಕರ್ ದಿ ರಾಸ್ಕಲ್" (2015), "ಫುಕ್ರಿ" (2017), ಮತ್ತು "ಬಿಗ್ ಬ್ರದರ್" (2020) ನಂತಹ ಗಮನಾರ್ಹ ಚಲನಚಿತ್ರಗಳನ್ನು ನಿರ್ದೇಶಿಸಿದರು.
ಸಿದ್ದಿಕಿ ಅವರು ತಮ್ಮದೆ ಹಿಟ್ ಚಿತ್ರ "ಬಾಡಿಗಾರ್ಡ್" ಅನ್ನು ತಮಿಳಿಗೆ "ಕಾವಲನ್" ಮತ್ತು ಹಿಂದಿಗೆ "ಬಾಡಿಗಾರ್ಡ್" ಎಂದು ರಿಮೇಕ್ ಮಾಡಿದ್ದರು. ತಮಿಳಿನಲ್ಲಿ ವಿಜಯ್ ಮತ್ತು ಯಾಸಿನ್ ಜೋಡಿ ಜನರನ್ನು ಮೋಡಿ ಮಾಡಿದರೇ, ಹಿಂದಿಯ ಬಾಡಿಗಾರ್ಡ್ ಸೂಪರ್ ಹಿಟ್ ಚಿತ್ರವಾಯಿತು. ನಟ ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಜೋಡಿ ಬಾಲಿವುಡ್‌ನಲ್ಲಿ ಧೂಳೆಬ್ಬಿಸಿತ್ತು.


Click it and Unblock the Notifications











