Renjusha Menon: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಲಯಾಳಂ ನಟಿ ರೆಂಜುಶಾ ಮೆನನ್

'ಸ್ತ್ರೀ', 'ನಿಜಾಲಟ್ಟಂ' ಮತ್ತು ಇನ್ನೂ ಅನೇಕ ಸಿನಿಮಾಗಳಿಂದ ಹೆಸರು ಗಳಿಸಿದ್ದ ಮಲಯಾಳಂ ನಟಿ ರೆಂಜುಶಾ ಮೆನನ್ ಸೋಮವಾರ (ಅಕ್ಟೋಬರ್ 30) ರಂದು ನಿಧನರಾಗಿದ್ದಾರೆ. 34 ವರ್ಷ ವಯಸ್ಸಿನ ಅವರು ಮಲಯಾಳಂ ಸಿನಿಮಾ ಮತ್ತು ಕಿರುತೆರೆ ಧಾರವಾಹಿಗಳಲ್ಲಿ ಅಭಿನಯಿಸುತ್ತಿದ್ದರು.

ನಟಿಯ ರೆಂಜುಶಾ ಮೆನನ್ ಮೃತದೇಹವು ತಿರುವನಂತಪುರಂನ ಶ್ರೀಕಾರ್ಯಂನಲ್ಲಿರುವ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ತನ್ನ ಗಂಡನೊಂದಿಗೆ ಶ್ರೀಕಾರ್ಯಂನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಸೋಮವಾರ ಬೆಳಗ್ಗೆ ಎಷ್ಟು ಹೊತ್ತಾದರೂ ತಮ್ಮ ಕೊಠಡಿಯ ಬಾಗಿಲು ತೆಗೆಯದ ಕಾರಣ ಮನೆಯವರಿಗೆ ಅನುಮಾನ ಬಂದು, ಬಾಗಿಲು ಹೊಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Malayalam Film And Serial Actress Renjusha Menon Found Dead at her Thiruvananthapuram home

ಹಲವಾರು ದೂರದರ್ಶನ ಧಾರಾವಾಹಿಗಳಲ್ಲಿ ಮತ್ತು ಜನಪ್ರಿಯ ಮಲಯಾಳಂ ಚಲನಚಿತ್ರಗಳಾದ 'ಸಿಟಿ ಆಫ್ ಗಾಡ್' ಮತ್ತು 'ಮರಿಕ್ಕುಂಡೋರು ಕುಂಜಾಡು'ಗಳಲ್ಲಿ ರೆಂಜುಶಾ ಮೆನನ್ ಕಾಣಿಸಿಕೊಂಡಿದ್ದರು. ಧಾರಾವಾಹಿಯಲ್ಲಿ ಲೈನ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದ ರೆಂಜುಶಾ ಮೆನನ್ ಅವರಿಗೆ ಹಣಕಾಸಿನ ಸಮಸ್ಯೆ ಇತ್ತು ಎಂದು ವರದಿಗಳು ಸೂಚಿಸಿವೆ.

ಕೊಚ್ಚಿ ಮೂಲದ ರೆಂಜೂಷಾ ಮೆನನ್ ಅವರು ಟಿವಿ ಚಾನೆಲ್‌ನಲ್ಲಿ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದವರು. "ಸ್ತ್ರೀ" ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ ಅವರು, ತಮ್ಮ ನಟನೆಯಿಂದ ಜನರ ಮನಸನ್ನು ಗೆದ್ದಿದ್ದರು. ಆ ಬಳಿಕ ರೆಂಜೂಷಾ ಮೆನನ್ ಇಪ್ಪತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Malayalam Film And Serial Actress Renjusha Menon Found Dead at her Thiruvananthapuram home

ಕಿರುತೆರೆಯಿಂದ ಬೆಳ್ಳಿತೆರೆಗೆ ರೆಂಜುಶಾ ಮೆನನ್

ರೆಂಜುಶಾ ಮೆನನ್ ಅವರ ವೃತ್ತಿಜೀವನ ಆರಂಭವಾಗಿದ್ದು ಮಲಯಾಳಂ ಟೆಲಿವಿಷನ್ ಧಾರಾವಾಹಿಗಳಿಂದ. ಬಳಿಕ ಅವರು ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದರು. ರೆಂಜುಶಾ ಮೆನನ್ ಅವರು ಕೈರಾಲಿ ಟೆಲಿವಿಷನ್‌ನಲ್ಲಿ ಸೆಲೆಬ್ರಿಟಿ ರಿಯಾಲಿಟಿ ಶೋ "ನಕ್ಷತ್ರದೀಪಂಗಲ್" ನಲ್ಲಿ ಸ್ಪರ್ಧಿಯಾಗಿದ್ದರು.

ರೆಂಜುಶಾ ಮೆನನ್ ಅಭಿನಯಿಸಿದ್ದ ಧಾರಾವಾಹಿ ಮತ್ತು ಚಲನಚಿತ್ರಗಳ ಪಟ್ಟಿ

ನಿಜಾಲಟ್ಟಂ, ಮಗಳುದೆ ಅಮ್ಮ, ಸ್ತ್ರೀ, ಬಾಲಾಮಣಿ, ತಾಳಪ್ಪಾವ್, ಬಾಂಬೆ ಮಾರ್ಚ್ 12, ಲಿಜಮ್ಮಯುಡೆ ವೀಡು, ವಧ್ಯಾರ್, ಒನ್ ವೇ ಟಿಕೆಟ್, ಕಾರ್ಯಸ್ಥಾನ, ಮತ್ತು 'ಅತ್ಭುತ ದ್ವೀಪ' ಮುಂತಾದ ಚಲನಚಿತ್ರಗಳು ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

ತನ್ನ ನಟನೆಯ ಜೊತೆಗೆ, ನುರಿತ ನೃತ್ಯಗಾರ್ತಿಯೂ ಆಗಿರುವ ರೆಂಜುಶಾ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರಿ. ಇದಾದ ನಂತರ ಭರತನಾಟ್ಯದಲ್ಲಿ ಪದವಿ ಪಡೆದಿದ್ದಾರೆ. ಈಕೆಯ ತಂದೆ ಪೊಲೀಸ್ ಇಲಾಖೆಯ ನಿವೃತ್ತ ಎಸ್‌ಐ ಸಿ.ಜಿ.ರವೀಂದ್ರನಾಥ್, ತಾಯಿ ಉಮಾದೇವಿ. ಸದ್ಯ ಅವರ ಸಾವಿನ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

More from Filmibeat

English summary
Malayalam actress Renjusha Menon found dead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X