ಗುರುಪ್ರಸಾದ್ ಅವರಂತೆ ಮತ್ತೊಂದು ದುರಂತ ಅಂತ್ಯ, ಶವವಾಗಿ ಪತ್ತೆಯಾದ ನಟ ದಿಲೀಪ್ ಶಂಕರ್...!
ಅಮ್ಮ ಇರಿಯಾತೆ, ಪಂಚಾಗ್ನಿ ಮತ್ತು ಸುಂದರಿ ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದವರು ದಿಲೀಪ್ ಶಂಕರ್. ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲೂ ತಮ್ಮ ಚಾಪು ಮೂಡಿಸಿದ್ದ ದಿಲೀಪ್ ಶಂಕರ್ ತಿರುವನಂತಪುರದ ಹೋಟೆಲ್‌ನಲ್ಲಿ ಶವವಾಗಿ ಇಂದು ಪತ್ತೆಯಾಗಿದ್ದಾರೆ.
ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವಂತೆ ದಿಲೀಪ್ ಪಂಚಾಗ್ನಿ ಧಾರಾವಾಹಿಯ ಚಿತ್ರೀಕರಣಕ್ಕೆ ತಿರುವನಂತಪುರಂಗೆ ಬಂದಿದ್ದರು. ಡಿಸೆಂಬರ್ 27ರಂದು ಹೊಟೇಲ್‌ನಲ್ಲಿ ರೂಮ್ ಬಾಡಿಗೆ ಪಡೆದಿದ್ದರು. ಆದರೆ ಅವತ್ತು ರೂಮ್ ಒಳಗೆ ಹೋದ ದಿಲೀಪ್ ಆ ನಂತರ ಹೊರ ಬರಲಿಲ್ಲ. ಧಾರಾವಾಹಿಯ ಸಹ ಕಲಾವಿದರ ಕರೆಗೆ ಕೂಡ ಉತ್ತರವನ್ನು ನೀಡಲಿಲ್ಲ.

ಇಂದು ಬೆಳಗ್ಗೆ ಕೊಠಡಿಯಿಂದ ದುರ್ವಾಸನೆ ಬರಲು ಪ್ರಾರಂಭವಾದಾಗ ಅನುಮಾನಗೊಂಡ ಹೊಟೇಲ್ ಸಿಬ್ಬಂದಿ ತಮ್ಮ ಬಳಿ ಇದ್ದ ಕೀಲಿ ಕೈಯನ್ನು ಬಳಸಿಕೊಂಡು ರೂಮ್ ಬಾಗಿಲು ತೆರೆದಿದ್ದಾರೆ. ಆಗ ದಿಲೀಪ್ ಶವವಾಗಿ ಪತ್ತೆಯಾಗಿದ್ದಾರೆ. ಇನ್ನು ದಿಲೀಪ್ ಅವರ ನಿಧನಕ್ಕೆ ಕಾರಣ ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮೇಲ್ನೋಟಕ್ಕೆ ದಿಲೀಪ್ ಅವರದ್ದು ಅಸಹಜ ಸಾವು ಎಂದು ಅನಿಸುತ್ತಿಲ್ಲ ಎಂದಿರುವ ಪೊಲೀಸರು ಮರಣೋತ್ತರ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಇನ್ನು ದಿಲೀಪ್ ಶಂಕರ್ ಅವರ ಅಕಾಲಿಕ ನಿಧನದಿಂದ ಆಘಾತಕ್ಕೊಳಗಾದ ಪಂಚಾಗ್ನಿ ಧಾರಾವಾಹಿ ನಿರ್ದೇಶಕ ಮನೋಜ್, ದಿಲೀಪ್ ತೀವೃ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಅನೇಕ ಗಂಭೀರವಾದ ಆರೋಗ್ಯ ಸಮಸ್ಯೆಗಳು ಇದ್ದವು ಅದಕ್ಕಾಗಿ ಅವರು ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ. ಚಿತ್ರೀಕರಣದ ಪ್ರಯುಕ್ತ ತಿರುವನಂತಪುರಂಗೆ ತಾವೆಲ್ಲ ಬಂದಿದ್ದಾಗಿ ಹೇಳಿದ್ದಾರೆ. ವಾರಾಂತ್ಯವಾದ್ದರಿಂದ ಎರಡು ದಿನ ಯಾವುದೇ ಚಿತ್ರೀಕರಣ ಇರಲಿಲ್ಲ. ಹೀಗಾಗಿ ದಿಲೀಪ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು ಎಂದು ಕೂಡ ಹೇಳಿಕೆಯನ್ನು ನೀಡಿದ್ದಾರೆ. ದಿಲೀಪ್ ಅವರ ನಿಧನದ ಸುದ್ದಿಯನ್ನು ಕೇಳಿ ಕಣ್ಣೀರಾಗಿರುವ ಅನೇಕರು ದಿಲೀಪ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ದಿಲೀಪ್ ಅವರ ನಿಧನದ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ ಸೀಮಾ ಜಿ ನಾಯರ್ ನೀವು ನನಗೆ ಐದು ದಿನದ ಹಿಂದೆ ಕರೆ ಮಾಡಿದ್ದೀರಿ ಆದರೆ ಅವತ್ತು ನನಗೆ ತೀವೃ ತಲೆ ನೋವು ಇದ್ದ ಕಾರಣ ನಿಮ್ಮ ಜೊತೆ ಸರಿಯಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ಈಗ ಪತ್ರಕರ್ತರೊಬ್ಬರಿಂದ ನಿಮ್ಮ ನಿಧನದ ಸುದ್ದಿ ನನಗೆ ಗೊತ್ತಾಯಿತು. ನಿನಗೇನಾಯಿತು ದಿಲೀಪ್ ? ಇದೆಲ್ಲ ಯಾಕೆ ಆಯಿತು ? ನನಗೆ ಏನು ಬರೆಯಬೇಕೆಂದು ತಿಳಿಯುತ್ತಿಲ್ಲ ಎಂದಿದ್ದಾರೆ. ನಿಮಗೆ ನನ್ನ ಅಂತಿಮ ನಮನಗಳು ಎಂದು ಬರೆದುಕೊಂಡಿದ್ದಾರೆ.ಎರ್ನಾಕೂಲಂ ಮೂಲದವರಾದ ದಿಲೀಪ್ ಶಂಕರ್ ಅವರ ನಿಧನದ ಸುದ್ದಿಯನ್ನು ಕೇಳಿ ಕಿರುತೆರೆ ಮತ್ತು ಬೆಳ್ಳಿ ತೆರೆಯ ಅನೇಕರು ಅಗಲಿದೆ ದಿಲೀಪ್ ಶಂಕರ್ ಅವರಿಗೆ ನುಡಿ ನಮನ ಸಲ್ಲಿಸುತ್ತಿದ್ದಾರೆ.


Click it and Unblock the Notifications










