ಒಳ್ಳೆ ಕಥೆ ಇರುವ ಸಾಲು ಸಾಲು ಚಿತ್ರ ಕೊಟ್ರೂ 4 ವರ್ಷಗಳಿಂದ 100 ಕೋಟಿ ಕ್ಲಬ್ ಸೇರಿಲ್ಲ ಈ ಇಂಡಸ್ಟ್ರಿ! ಕಾರಣವೇನು?

ಇತ್ತೀಚೆಗಿನ ದಿನಗಳಲ್ಲಿ ನೂರು ಕೋಟಿ ಕ್ಲಬ್ ಎನ್ನುವುದು ಹಲವು ನಟರಿಗೆ ಹಾಗೂ ನಿರ್ದೇಶಕರಿಗೆ ಸುಲಭ ತುತ್ತಾಗಿಬಿಟ್ಟಿದೆ. ತೆಲುಗಿನ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದ ಒಂದೇ ವಾರದಲ್ಲಿ ಸುಲಭವಾಗಿ ನೂರು ಕೋಟಿ ಕ್ಲಬ್ ಸೇರುತ್ತಿವೆ. ತಮಿಳಿನ ಸ್ಟಾರ್ ನಟರ ಚಿತ್ರಗಳೂ ಸಹ ನೂರು ಕೋಟಿ ಕ್ಲಬ್ ಸೇರುತ್ತಿವೆ.

ಇತ್ತ ಕನ್ನಡ ಚಿತ್ರರಂಗದ ಹಲವು ಚಿತ್ರಗಳು ಕೆಜಿಎಫ್ ಸಕ್ಸಸ್ ಬಳಿಕ ನೂರು ಕೋಟಿ ಕ್ಲಬ್ ಸೇರಿವೆ. ಕಳೆದ ವರ್ಷ ಜೇಮ್ಸ್, ವಿಕ್ರಾಂತ್ ರೋಣ, ಕಾಂತಾರ, 777 ಚಾರ್ಲಿ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಯಶಸ್ವಿಯಾಗಿ ನೂರು ಕೋಟಿ ಕ್ಲಬ್ ಸೇರಿವೆ. ಬಾಲಿವುಡ್ ಬಗ್ಗೆ ಹೆಚ್ಚೇನೂ ಹೇಳುವುದೇ ಬೇಕಿಲ್ಲ. ಅಲ್ಲಿನ ಚಿತ್ರಗಳ ಬಜೆಟ್ ಹೆಚ್ಚಿರುವ ಕಾರಣ ಹಾಗೂ ಬೃಹತ್ ಮಾರುಕಟ್ಟೆ ಇರುವ ಕಾರಣ ಸಾಧಾರಣ ಎಂಬ ರಿಪೋರ್ಟ್ ಪಡೆದುಕೊಳ್ಳುವ ಸಿನಿಮಾಗಳೂ ಸಹ ನೂರು ಕೋಟಿ ಕ್ಲಬ್ ಸೇರಿವೆ.

Malayalam film industry failed to enter 100 crore club since 2019; Here is the reason

ಆದರೆ ಮಲಯಾಳಂ ಚಿತ್ರರಂಗ ಮಾತ್ರ ಕಳೆದ ನಾಲ್ಕು ವರ್ಷಗಳಲ್ಲಿ ಈ ಮೈಲಿಗಲ್ಲನ್ನು ಮುಟ್ಟುವಲ್ಲಿ ಯಶಸ್ವಿಯಾಗಿಲ್ಲ. ಹೌದು, ಮಲಯಾಳಂ ಚಿತ್ರರಂಗದ ಸಿನಿಮಾವೊಂದು ನೂರು ಕೋಟಿ ಕ್ಲಬ್ ಸೇರಿದ್ದು ಕೊನೆಯದಾಗಿ 2019ರಲ್ಲಿ. ಮೋಹನ್‌ಲಾಲ್ ನಟನೆಯ ಲೂಸಿಫರ್ ಚಿತ್ರ 127 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

ಈ ಚಿತ್ರದ ಬಳಿಕ ಮಲಯಾಳಂನಲ್ಲಿ ಬಂದ ಯಾವ ಚಿತ್ರಗಳೂ ಸಹ ನೂರು ಕೋಟಿ ಮೈಲಿಗಲ್ಲನ್ನು ಮುಟ್ಟಿಲ್ಲ. ಇನ್ನು ಲೂಸಿಫರ್ ಸಿನಿಮಾ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ನೂರು ಕೋಟಿ ಕ್ಲಬ್ ಸೇರಿದ ಎರಡನೇ ಚಿತ್ರ ಎಂಬುದು ಆಶ್ಚರ್ಯಕರ ಸಂಗತಿ. ಹೌದು, 2016ರಲ್ಲಿ ಬಿಡುಗಡೆಗೊಂಡಿದ್ದ ಇದೇ ಮೋಹನ್ ಲಾಲ್ ನಟನೆಯ ಪುಲಿ ಮುರುಗನ್ ಎಂಬ ಚಿತ್ರ 141 ಕೋಟಿ ಗಳಿಸುವ ಮೂಲಕ ಮೊದಲ ಬಾರಿಗೆ ನೂರು ಕೋಟಿ ಗಳಿಸಿದ ಮಲಯಾಳಂ ಸಿನಿಮಾ ಎನಿಸಿಕೊಂಡಿತ್ತು.

ಹೀಗೆ ಸಿನಿಮಾ ಇತಿಹಾಸದಲ್ಲಿ ಮಾಲಿವುಡ್‌ನ ಕೇವಲ ಎರಡು ಸಿನಿಮಾಗಳು ಮಾತ್ರ ನೂರು ಕೋಟಿ ಕ್ಲಬ್ ಸೇರಿದ್ದು, ಇದಕ್ಕೆ ಕಾರಣವೇನೆಂದು ಹುಡುಕಲು ಹೊರಟರೆ ಮೊದಲು ಸಿಗುವ ಉತ್ತರವೇ ಮಲಯಾಳಂ ಚಿತ್ರರಂಗ ಪ್ಯಾನ್ ಇಂಡಿಯಾ ಹಾಗೂ ಇತರೆ ಭಾಷೆಗಳಿಗೆ ತಮ್ಮ ಚಿತ್ರಗಳನ್ನು ಡಬ್ ಮಾಡಲು ಇಚ್ಛಿಸದೇ ಇರುವುದು.

Malayalam film industry failed to enter 100 crore club since 2019; Here is the reason

ಹೌದು, ಮಲಯಾಳಂ ಚಿತ್ರರಂಗದಿಂದ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದದ್ದು ತೀರಾ ಕಡಿಮೆ. ಕೆಲವೊಮ್ಮೆ ಪ್ಯಾನ್ ಇಂಡಿಯಾ ಪ್ರಯತ್ನ ಮಾಡಿದ ಮಲಯಾಳಂ ಚಿತ್ರರಂಗ ಕೈಸುಟ್ಟುಕೊಂಡಿದ್ದು, ಇದೂ ಸಹ ಪ್ಯಾನ್ ಇಂಡಿಯಾ ಪ್ರಯತ್ನ ನಡೆಯುತ್ತಿರುವುದು ಕಡಿಮೆ ಎನ್ನಬಹುದು.

ತಮಿಳು ಹಾಗೂ ತೆಲುಗಿನ ಹಲವಾರು ಚಿತ್ರಗಳು ತಮ್ಮ ರಾಜ್ಯಗಳಲ್ಲಿ ಕಡಿಮೆ ಕಲೆಕ್ಷನ್ ಮಾಡಿದರೂ ಹಿಂದಿಗೆ ಡಬ್ ಆದ ಕಾರಣ ಹಿಂದಿ ಬೆಲ್ಟ್‌ನಲ್ಲಿ ಹೆಚ್ಚಿನ ಗಳಿಕೆ ಮಾಡಿ ಕೋಟಿ ಕ್ಲಬ್ ಸೇರಿದ ಹಲವಾರು ಉದಾಹರಣೆಗಳಿವೆ. ಇದೇ ಮಾದರಿಯಲ್ಲಿ ಮಲಯಾಳಂನ ಸೂಪರ್ ಹಿಟ್ ಚಿತ್ರಗಳಾದ ಹೃದಯಂ, ಭೀಷ್ಮ ಪರ್ವಂ, ಕುರುಪ್, ರೋಮಾಂಚಂ, ಮಾಳಿಕಪುರಂ, ಜಯ ಜಯ ಜಯ ಜಯ ಹೇ ಹಾಗೂ ಜನ ಗಣ ಮನ ಚಿತ್ರಗಳು ಹಿಂದಿಗೆ ಡಬ್ ಆಗಿದ್ದರೆ ಸುಲಭವಾಗಿ ನೂರು ಕೋಟಿ ಕ್ಲಬ್ ಸೇರುತ್ತಿದ್ದವು.

More from Filmibeat

English summary
Malayalam film industry failed to enter 100 crore club since 2019; Here is the reason. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X