For Quick Alerts
  ALLOW NOTIFICATIONS  
  For Daily Alerts

  ಕೇರಳ ಚುನಾವಣಾ ಫಲಿತಾಂಶ: ಪಿಣರಾಯಿ ವಿಜಯನ್‌ಗೆ ಸಿನಿತಾರೆಯರ ಅಭಿನಂದನೆ

  |

  ಕೇರಳ ವಿಧಾನಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ಪಿಣರಾಯಿ ವಿಜಯನ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿಬದುಬರುತ್ತಿದೆ. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಮುಂದುವರೆಸುತ್ತಿರುವ ಪಿಣರಾಯಿ ಅವರಿಗೆ ಮಲಯಾಳಂ ಸಿನಿತಾರೆಯರಿಂದ ಅಭಿನಂದನೆ ಹರಿದುಬರುತ್ತಿದೆ.

  ಮೋಹನ್ ಲಾಲ್, ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸೇರಿದಂತೆ ಅನೇಕರು ಪಿಣರಾಯಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.

  ಅಬ್ಬಾ.! ಎಂತಹಾ ಗಟ್ಟಿಗಿತ್ತಿ ಈ ದೀದಿ, ಈ ದಿಗ್ವಿಜಯ ಬಣ್ಣಿಸಲು ಮಾತೇ ಇಲ್ಲ: ಕವಿರಾಜ್ಅಬ್ಬಾ.! ಎಂತಹಾ ಗಟ್ಟಿಗಿತ್ತಿ ಈ ದೀದಿ, ಈ ದಿಗ್ವಿಜಯ ಬಣ್ಣಿಸಲು ಮಾತೇ ಇಲ್ಲ: ಕವಿರಾಜ್

  ನಟ ದುಲ್ಕರ್ ಸಲ್ಮಾನ್, 'ಕಳೆದ ಕೆಲವು ದಿನಗಳಿಂದ ಪರಿಸ್ಥಿತಿ ಗಂಭೀರವಾಗಿದೆ. ಇದರ ನಡುವೆಯೂ ಸಂತೋಷದ ಸುದ್ದಿ. ಐತಿಹಾಸಿಕ ಗೆಲುವಿಗೆ ಮುಖ್ಯಮಂತ್ರಿ ಪಿಣಿಯಾರಿ ವಿಜಯನ್ ಮತ್ತು ತಂಡಕ್ಕೆ ಅಭಿನಂದನೆಗಳು. ಕೇರಳ ಎದುರಿಸಿದ ಕೆಲವು ಕಠಿಣ ಸಮಯದಲ್ಲಿ ಅನುಕರಣೀಯ ನಾಯಕತ್ವ ತೋರಿದ್ದೀರಿ. ಉಜ್ವಲ ಭವಿಷ್ಯಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

  ನಟ ಪೃಥ್ವಿರಾಜ್ ಸುಕುಮಾರನ್, 'ಗೌರವಾನ್ವಿತ ಮುಖ್ಯಮಂತ್ರಿ, ಶ್ರೀ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿ ಎಫ್ ಮತ್ತು ರಾಜ್ಯದ ಎಲ್ಲಾ ಚುನಾಯಿತ ಪ್ರತಿನಿಧಗಳಿಗೆ ಅಭಿನಂದನೆಗಳು' ಎಂದು ಹೇಳಿದ್ದಾರೆ.

  Malayalam film stars congratulate to Pinarayi Vijayan for the victory

  Recommended Video

  ಇಪ್ಪತ್ತೊಂದು ದಿನ ಅನುಭವಿಸಿದ ಕೊರೊನಾ ಕರಾಳತೆ ಬಿಚ್ಚಿಟ್ಟ ಶ್ವೇತಾ ಚಂಗಪ್ಪ | Filmibeat Kannada

  ನಟ ಮೋಹನ್ ಲಾಲ್ ವಿಶ್ ಮಾಡಿ, ಜಯಗಳಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಅಭಿನಂದನೆಗಳು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನನ್ನ ಶುಭಾಶಯಗಳು' ಎಂದಿದ್ದಾರೆ.

  English summary
  Malayalam film stars congratulate to Pinarayi Vijayan for the victory.
  Monday, May 3, 2021, 10:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X