For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಖ್ಯಾತ ನಿರ್ದೇಶಕ-ನಿರ್ಮಾಪಕ ಎಬಿ ರಾಜ್ ನಿಧನ

  |

  ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ ಎಬಿ ರಾಜ್ ಅಲಿಯಾಸ್ ರಾಜ್ ಆಂಟನಿ (95 ವರ್ಷ) ಭಾಸ್ಕರ್ ಆಗಸ್ಟ್ 23 ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

  Brahma ಚಿತ್ರದ ಅಪಾಯಕಾರಿ ಕಾರು ಚೇಸಿಂಗ್ ದೃಶ್ಯ ತಯಾರಾಗಿದ್ದು ಹೀಗೆ | Car Crash Scenes | Filmibeat Kannada

  95 ವರ್ಷದ ನಿರ್ದೇಶಕರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ. ರಾಜ್ ಅವರು ಖ್ಯಾತ ನಟಿ ಶರಣ್ಯ ಪೊನ್ವಣ್ಣನ್ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ. ಎಬಿ ರಾಜ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

  ನಟ ದಿಲೀಪ್ ಕುಮಾರ್ ಸಹೋದರ ಕೊವಿಡ್‌ನಿಂದ ಸಾವುನಟ ದಿಲೀಪ್ ಕುಮಾರ್ ಸಹೋದರ ಕೊವಿಡ್‌ನಿಂದ ಸಾವು

  1925ರಲ್ಲಿ ಮಧುರೈನಲ್ಲಿ ಜನಿಸಿದ ರಾಜ್ 1940ರ ದಶಕದ ಉತ್ತರಾರ್ಧದಲ್ಲಿ ಟಿ.ಆರ್.ಸುಂದರಾಮ್ ಮಾರ್ಗದರ್ಶನದಲ್ಲಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಆರಂಭಿಸಿದ್ದರು. 1951ರಲ್ಲಿ ಶ್ರೀಲಂಕಾಕ್ಕೆ ಹೋದ ರಾಜ್ 10 ವರ್ಷಗಳ ಕಾಲ ತಂಗಿದ್ದರು. ಎಬಿ ರಾಜ್ ಅವರು ಸುಮಾರು 11 ಸಿಂಹಳೀಯ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಎಂದು ಫೆಫ್ಕಾ (ಚಲನಚಿತ್ರ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ) ನಿರ್ದೇಶಕರ ಒಕ್ಕೂಟ ಕೊಚ್ಚಿಯಲ್ಲಿ ಪ್ರಕಟಣೆಯಲ್ಲಿ ತಿಳಿಸಿದೆ.

  ಕೇರಳದ ಆಲಪ್ಪುಳಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದ ಎಬಿ ರಾಜ್ 1968 ಮತ್ತು 1985ರ ನಡುವೆ ಸುಮಾರು 50 ಮಲಯಾಳಂ ಚಲನಚಿತ್ರಗಳನ್ನು ನಿರ್ದೇಶಿಸಿದ್ದರು ಎಂದು ವರದಿಯಾಗಿದೆ. 'ಕಲಿಯಾ ಕಲ್ಯಾಣಂ' ಅವರ ಮೊದಲ ಮಲಯಾಳಂ ಚಿತ್ರ.

  ಶಾಸ್ತ್ರ ಜಯೈಚು ಮನುಶ್ಯನ್ ತೊಟ್ಟು, ಪಚನೋಟುಕಲ್, ಇರುಂಬಾಜಿಕಲ್, ಲೈಟ್ ಹೌಸ್ ಮತ್ತು ಥಾಲಂ ಥೆಟ್ಟಿಯಾ ತಾರಟ್ಟು ಎಂಬ ಜನಪ್ರಿಯ ಚಿತ್ರಗಳನ್ನು ಎಬಿ ರಾಜ್ ನಿರ್ದೇಶಿಸಿದ್ದಾರೆ. 1985 ರಲ್ಲಿ ನಿರ್ದೇಶನದ 'ಒರ್ಮಿಕನ್ ಒಮಾನಿಕ್ಕನ್' ಅವರ ಕೊನೆಯ ಮಲಯಾಳಂ ಚಿತ್ರ. ಇದರ ಜೊತೆ ತಮಿಳು ಚಿತ್ರಗಳನ್ನೂ ಸಹ ರಾಜ್ ನಿರ್ದೇಶಿಸಿದ್ದಾರೆ.

  English summary
  Malayalam filmmaker AB Raj (raj antony bhaskar) dies in Chennai on august 23rd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X