ಮಲಯಾಳಂ ಇತಿಹಾಸದಲ್ಲೇ ಮೊದಲು; ಓಟಿಟಿಗೆ ಬಂದ ನಂತರ ಕನ್ನಡದಲ್ಲಿ ಥಿಯೇಟರ್‌ ರಿಲೀಸ್ ಆಗ್ತಿದೆ ಈ ಚಿತ್ರ!

ಸದ್ಯ ಪ್ಯಾನ್ ಇಂಡಿಯಾ ಹವಾ ಜೋರಾಗಿದೆ. ಸಿನಿಮಾ ಮಾಡಲು ಮುಂದಾಗುವ ಪ್ರತಿ ನಿರ್ದೇಶಕ ಹಾಗೂ ನಿರ್ಮಾಪಕರೂ ಸಹ ಪ್ಯಾನ್ ಇಂಡಿಯಾ ಚಿತ್ರ ಮಾಡಬೇಕು ಎಂದು ಕನಸು ಹೊಂದಿರುವವರೇ. ಹೆಚ್ಚು ಬಂಡವಾಳ ಹಾಗೂ ಮಾರ್ಕೆಟ್ ಬಲ್ಲ ನಿರ್ಮಾಪಕರು ಮತ್ತು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲ್ಲಬಲ್ಲ ಕಥೆ ಹೊಂದಿರುವ ನಿರ್ದೇಶಕರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾಗಳನ್ನು ತಯಾರಿಸಿದರೆ, ಇನ್ನೂ ಕೆಲವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ನಿರ್ಮಿಸುವಷ್ಟು ಬಂಡವಾಳವಿರುವುದಿಲ್ಲ ಹಾಗೂ ಅಂತಹ ಕಥೆಯೂ ಇರುವುದಿಲ್ಲ.

ಆದರೆ ಕೆಲ ಚಿತ್ರತಂಡಗಳು ಕೇವಲ ಮೂಲ ಭಾಷೆಯಲ್ಲಿ ಮಾತ್ರ ಚಿತ್ರಗಳನ್ನು ಬಿಡುಗಡೆ ಮಾಡೋಣ ಎಂದು ಯೋಜನೆ ಹಾಕಿಕೊಂಡೇ ಸಿನಿಮಾಗಳನ್ನು ತಯಾರಿಸಿದರೂ ಸಹ ಆ ಚಿತ್ರಗಳು ಪಡೆದುಕೊಂಡ ಬೃಹತ್ ಪ್ರತಿಕ್ರಿಯೆಯ ಬಳಿಕ ಆ ಚಿತ್ರಗಳನ್ನು ಇತರೆ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಿದ ಅನೇಕ ಉದಾಹರಣೆಗಳಿವೆ. ಹೌದು, ಉದಾಹರಣೆಗೆ ಕಾಂತಾರ ಮೊದಲಿಗೆ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡು ವಿಪರೀತ ಯಶಸ್ಸು ಸಾಧಿಸಿ ಬೇರೆ ಭಾಷೆಯ ಸಿನಿ ರಸಿಕರಿಂದ ಡಬಿಂಗ್ ಬೇಡಿಕೆ ಪಡೆದುಕೊಂಡ ನಂತರ ಬಳಿಕ ಆ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಯಿತು.

Malayalam Malikappuram dubbed into Kannada and releasing in theatres after OTT release

ಹೀಗೆ ಸಿನಿಮಾವೊಂದು ಚೆನ್ನಾಗಿದ್ದರೆ ಆ ಚಿತ್ರಗಳ ಡಬಿಂಗ್‌ಗೆ ಬೇಡಿಕೆ ತಾನಾಗಿಯೇ ಹುಟ್ಟುಕೊಳ್ಳಲಿದೆ. ಕೆಲವರು ಇಂತಹ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ, ಇನ್ನೂ ಕೆಲ ಚಿತ್ರತಂಡಗಳು ಇಂತಹ ಅವಕಾಶವನ್ನು ಕೈತಪ್ಪಿಸಿಕೊಂಡಿವೆ. ಚಿತ್ರಗಳು ಎಷ್ಟೇ ಚೆನ್ನಾಗಿದ್ದರೂ, ಅವುಗಳು ರಾಜ್ಯವನ್ನು ದಾಟಿ ಬೇರೆ ಭಾಷೆಯ ಸಿನಿ ರಸಿಕರಿಗೆ ಮುಟ್ಟಿದರೂ ಸಹ ಅವುಗಳನ್ನು ಬೇರೆ ಭಾಷೆಗೆ ಡಬ್ ಮಾಡಲು ಮುಂದಾಗುವುದಿಲ್ಲ. ಅದರಲ್ಲಿಯೂ ಮಲಯಾಳಂ ಸಿನಿಮಾಗಳು ಇದಕ್ಕೆ ಉತ್ತಮ ಉದಾಹರಣೆ.

ಹೌದು, ಮಲಯಾಳಂ ಚಿತ್ರಗಳನ್ನು ಹುಡುಕಿ ಹುಡುಕಿ ನೋಡುವ ಬೇರೆ ಭಾಷೆಯ ಸಿನಿ ರಸಿಕರ ಸಂಖ್ಯೆ ದೊಡ್ಡದಿದೆ. ಮಲಯಾಳಂ ಚಿತ್ರಗಳು ಚೆನ್ನಾಗಿರಲಿವೆ ಎಂಬ ಕಾರಣದಿಂದಾಗಿ ಈ ಪರಿ ಕ್ರೇಜ್ ಇದ್ದು, ಇಷ್ಟಿದ್ದರೂ ಮಲಯಾಳಂ ಸಿನಿಮಾ ನಿರ್ಮಾಪಕರು ಮಾತ್ರ ತಮ್ಮ ಚಿತ್ರಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಆಸಕ್ತಿ ತೋರುತ್ತಿಲ್ಲ. ಹೌದು, ಕಳೆದ ವರ್ಷ ಬಿಡುಗಡೆಗೊಂಡ ಜಯ ಜಯ ಜಯ ಜಯ ಹೇ ಸೂಪರ್ ಹಿಟ್ ಆಗಿ ಕರ್ನಾಟಕ ಹಾಗೂ ಇತರೆ ಭಾಷೆಗಳಲ್ಲಿಯೂ ಸದ್ದು ಮಾಡಿತು, ಹಾಗಿದ್ದರೂ ಅದನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಬ್ ಮಾಡಲು ಮುಂದಾಗಲಿಲ್ಲ. ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ರೋಮಾಂಚನಂ ಚಿತ್ರದ ಕಥೆ ಸಹ ಇಷ್ಟೇ.

ಅಲ್ಲದೇ ಕಳೆದ ವರ್ಷ ಬಿಡುಗಡೆಗೊಂಡು ವಿಪರೀತಿ ಪ್ರಶಂಸೆ ಪಡೆದುಕೊಂಡಿದ್ದ ಚಿತ್ರ ಮಾಳಿಕಪುರಂ ಚಿತ್ರದ್ದೂ ಸಹ ಇದೇ ಪರಿಸ್ಥತಿ. ವಿಷ್ಣು ಶಶಿ ಶಂಕರ್ ನಿರ್ದೇಶನವಿರುವ ಹಾಗೂ ಉನ್ನಿ ಮುಕುಂದನ್ ಲೀಡ್ ರೋಲ್‌ನಲ್ಲಿ ನಟಿಸಿರುವ ಮಾಳಿಕಪುರಂ ಚಿತ್ರ ಕಳೆದ ವರ್ಷ 30ರಂದು ಬಿಡುಗಡೆಗೊಂಡಿತ್ತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಸದ್ಯ ಈ ಚಿತ್ರ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಈ ಚಿತ್ರ ಓಟಿಟಿ ಬಿಡುಗಡೆಯಾಗಿದ್ದು, ಈಗ ಈ ಚಿತ್ರದ ಕನ್ನಡ ವರ್ಷನ್ ಅನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

Malayalam Malikappuram dubbed into Kannada and releasing in theatres after OTT release

ಹೌದು, ಕರ್ನಾಟಕದ ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮಾಳಿಕಪುರಂ ಕನ್ನಡ ವರ್ಷನ್ ಇದೇ ತಿಂಗಳ 24ರಂದು ಬಿಡುಗಡೆಯಾಗಲಿದೆ. ಬೆಂಗಳೂರು, ಮೈಸೂರು, ತುಮಕೂರು, ಕಲಬುರಗಿ, ದಾವಣಗೆರೆ, ಬಳ್ಳಾರಿ, ಮಂಗಳೂರು ಹಾಗೂ ಮಭಿಪಾಲ ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಮಾಳಿಕಪುರಂ ಕನ್ನಡ ವರ್ಷನ್ ಬಿಡುಗಡೆಯಾಗಲಿದೆ. ಇನ್ನು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ ಓಟಟಿಗೆ ಬಂದ ನಂರವೂ ಯಾವ ಚಿತ್ರವೂ ಸಹ ಇತರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿರಲಿಲ್ಲ. ಆದರೀಗ ಈ ಚಿತ್ರ ಓಟಿಟಿಗೆ ಬಂದ ನಂತರ ಬೇರೆ ಭಾಷೆಗೆ ಡಬ್ ಆಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗ್ತಿದೆ.

More from Filmibeat

English summary
Malayalam Malikappuram dubbed into Kannada and releasing in theatres after OTT release. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X