ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಎಂಬುದು ಜೋಕ್: ಅಡೂರು ಗೋಪಾಲಕೃಷ್ಣನ್

ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರುಗಳಲ್ಲಿ ಒಬ್ಬರೆನಿಸಿಕೊಂಡಿರುವ ಅಡೂರು ಗೋಪಾಲಕೃಷ್ಣನ್ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕಟುವಾಗಿ ಟೀಕಿಸಿದ್ದಾರೆ.

ಸಿನಿಮಾಗಳನ್ನು ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡುವವರನ್ನು 'ಬಾಲಿವುಡ್ ಅಭಿಮಾನಿಗಳು' ಎಂದಿರುವ ಅಡೂರು ಗೋಪಾಕೃಷ್ಣನ್, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಎಂಬುದೇ ಇತ್ತೀಚಿನ ವರ್ಷಗಳಲ್ಲಿ ಜೋಕ್ ಆಗಿ ಪರಿಣಮಿಸಿದೆ ಎಂದಿದ್ದಾರೆ.

ಸಿನಿಮಾಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಜ್ಯೂರಿಗಳಿಗೆ ಪ್ರಶಸ್ತಿಗೆ ಆಯ್ಕೆ ಮಾಡುವ ಮಾನದಂಡಗಳು ಸಹ ಗೊತ್ತಿಲ್ಲ. ಕಮರ್ಷಿಯಲ್ ಮಸಾಲಾ ಸಿನಿಮಾಗಳನ್ನು ಸಹ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಸಿನಿಮಾಗಳನ್ನು ನಿರ್ಮಾಣದ ಹಿಂದಿನ ಉದ್ದೇಶ ಸಹ ಅವರಿಗೆ ಗೊತ್ತಿಲ್ಲ ಎಂದಿದ್ದಾರೆ.

Malayalam Movie Director Adoor Gopalakrishnan Criticized National Film Awards

ಈ ಹಿಂದೆ ಆಯ್ಕೆ ಸಮಿತಿಯಲ್ಲಿ ಜನಪ್ರಿಯ ಸಿನಿಮಾ ನಿರ್ದೇಶಕರು, ರಂಗಭೂಮಿಯಲ್ಲಿ ದಶಕಗಳ ಕಾಲ ಕೆಲಸ ಮಾಡಿದವರು ಸದಸ್ಯರಾಗಿರುತ್ತಿದ್ದರು. ಆದರೆ ಈಗ ಯಾರು ಜ್ಯೂರಿಗಳಾಗುತ್ತಿದ್ದಾರೆ ಎಂಬುದು ಸಹ ಗೊತ್ತಾಗುತ್ತಿಲ್ಲ. ಅನುಭವ ಇಲ್ಲದ, ವಿಷಯ ಜ್ಞಾನ ಇಲ್ಲದವರನ್ನು ಸಹ ಜ್ಯೂರಿಗಳನ್ನಾಗಿ ಮಾಡಲಾಗುತ್ತಿದೆ ಎಂದಿದ್ದಾರೆ.

2015 ರಲ್ಲಿ ಸಹ ಅಡೂರು ಗೋಪಾಲಕೃಷ್ಣನ್ ಅವರು ರಾಷ್ಟ್ರ ಪ್ರಶಸ್ತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಪತ್ರ ಬರೆದಿದ್ದರು ಅಡೂರು ಗೋಪಾಲಕೃಷ್ಣನ್. ಆಗಲೂ ಸಹ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸಿನಿಮಾ ನಿರ್ದೇಶಕ ಪ್ರಶಸ್ತಿಗಳು ಕಮರ್ಷಿಯಲ್ ಸಿನಿಮಾಕ್ಕೆ ಹೋಗಿದ್ದವು.

ಕೆಲವು ದಿನಗಳ ಹಿಂದಷ್ಟೆ ಕೇಂದ್ರ ಸರ್ಕಾರದ ವಿರುದ್ಧವೂ ಅಡೂರು ಗೋಪಾಲಕೃಷ್ಣನ್ ಅಸಮಾಧಾನ ವ್ಯಕ್ತಪಡಿಸಿದ್ದರು. ''ಕೇಂದ್ರ ಸರ್ಕಾರವು ನನ್ನನ್ನು ಶತ್ರುವಿನಂತೆ ನೋಡುತ್ತದೆ. ನಾನು ನನ್ನ ಸಿನಿಮಾಗಳ ಮೂಲಕ ನನ್ನ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ ಅವು ಕೇಂದ್ರ ಸರ್ಕಾರದ ಆದರ್ಶಗಳ ವಿರುದ್ಧ ಇವೆ'' ಎಂದಿದ್ದಾರೆ ಅಡೂರು.

ಅಡೂರು ಗೋಪಾಲಕೃಷ್ಣನ್ ಅವರು ಮಲಯಾಳಂ ಸಿನಿಮಾ ನಿರ್ದೇಶಕರಾಗಿದ್ದು, ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು ಎನ್ನಲಾಗುತ್ತದೆ. ಈ ವರೆಗೆ ನಿರ್ದೇಶಿಸಿರುವುದು ಕೇವಲ 12 ಪೂರ್ಣ ಪ್ರಮಾಣದ ಸಿನಿಮಾಗಳನ್ನಷ್ಟೆ ಅವರು ಮಾಡಿದ್ದಾರೆ. ಆದರೆ ಅವರ ಸಿನಿಮಾಗಳು ಹಲವು ರಾಷ್ಟ್ರಪ್ರಶಸ್ತಿ, ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿವೆ. ಅಡೂರು ಗೋಪಾಲಕೃಷ್ಣನ್ ಅವರಿಗೆ ಪದ್ಮ ವಿಭೂಷಣ ಗೌರವ ಸಹ ನೀಡಲಾಗಿದೆ.

More from Filmibeat

English summary
Malayalam senior movie director Adoor Gopalakrishnan criticized national film awards and its jury. He said juries are fans of Bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X