twitter
    For Quick Alerts
    ALLOW NOTIFICATIONS  
    For Daily Alerts

    Big News: ಆಸ್ಕರ್‌ ಸ್ಪರ್ಧೆಗೆ ಆಯ್ಕೆಯಾದ ದಕ್ಷಿಣ ಭಾರತದ ಸಿನಿಮಾ

    |

    ಸೃಜನಶೀಲ ಸಿನಿಮಾಗಳ ಕಣಜ ಮಲಯಾಳಂ ಸಿನಿಮಾ ಉದ್ಯಮದಿಂದ ಆಸ್ಕರ್ ಪ್ರಶಸ್ತಿಗೆ 'ಜಲ್ಲಿಕಟ್ಟು' ಸಿನಿಮಾ ಆಯ್ಕೆಯಾಗಿದ್ದು, ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿರುವ ಸಿನಿಮಾ ಇದಾಗಿದೆ.

    ಸೆಪ್ಟೆಂಬರ್ 2019 ರಂದು ಬಿಡುಗಡೆಯಾದ ಈ ಸಿನಿಮಾ ಬಹಳ ವಿಭಿನ್ನವಾದ ಕತೆ ಹೊಂದಿರುವ ಮಹತ್ವದ ಸಂದೇಶವನ್ನು ಕಟ್ಟಿಕೊಡುವ ಸಿನಿಮಾ ಆಗಿದೆ. ಸಿನಿಮಾವನ್ನು ಲಿಜೊ ಜೋಸ್ ಫೆಲ್ಲಿಸೆರಿ ನಿರ್ದೇಶಿಸಿದ್ದಾರೆ.

    ಆಸ್ಕರ್‌ ಪ್ರಶಸ್ತಿಯ ವಿದೇಶಿ ಭಾಷಾ ಸಿನಿಮಾ ಕ್ಯಾಟಗರಿಗಾಗಿ ಭಾರತದಿಂದ 'ಜಲ್ಲಿಕಟ್ಟು' ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಸಿನಿಮಾವು ಅಂತರಾಷ್ಟ್ರೀಯ ಭಾಷಾ ಸಿನಿಮಾದ ಅಂತಿಮ ಸುತ್ತಿಗೆ ಆಯ್ಕೆ ಆಗಿ, ಅಲ್ಲಿ ಮತ್ತೆ ಕೆಲ ಸಿನಿಮಾಗಳ ನಡುವೆ ಸ್ಪರ್ಧೆ ಮಾಡಿ ಆಸ್ಕರ್ ಗೆಲ್ಲಬೇಕಿರುತ್ತದೆ.

     Malayalam Movie Jallikattu Is Indian Entry For 2021 Oscar

    27 ಸಿನಿಮಾಗಳ ನಡುವೆ ಜಲ್ಲಿಕಟ್ಟು ಸಿನಿಮಾವನ್ನು ಆಸ್ಕರ್ ಸ್ಪರ್ಧೆಗೆ ಕಳಿಸಲು ಆಯ್ಕೆ ಮಾಡಲಾಗಿದೆ. 'ಶಕುಂತಲಾ ದೇವಿ, ಚಪಾಕ್, ಗುಲಾಬೊ ಸಿತಾಬೊ, ಚಲಾಂಗ್ ಇನ್ನೂ ಹಲವು ಸಿನಿಮಾಗಳ ನಡುವೆ ಸ್ಪರ್ಧೆ ನಡೆದು ಕೊನೆಗೆ 'ಜಲ್ಲಿ ಕಟ್ಟು' ಸಿನಿಮಾವನ್ನು ಆಯ್ಕೆ ಮಾಡಲಾಗಿದೆ.

    ಕಡಿಯಬೇಕಿದ್ದ ಎಮ್ಮೆಯೊಂದು ಒಂದು ದಿನ ವಧಾ ಸ್ಥಾನದಿಂದ ತಪ್ಪಿಸಿಕೊಂಡು ಊರ ಒಳಗೆ ನುಗ್ಗಿಬಿಡುತ್ತದೆ. ಕೋಣ ಕಡಿಯುವವನು ಕೋಣದ ಹಿಂದೆ ಬೀಳುತ್ತಾನೆ. ಅದು ಗ್ರಾಮದಲ್ಲೆಲ್ಲಾ ಓಡಾಡುತ್ತದೆ, ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಇಡೀಯ ಗ್ರಾಮವೇ ಎಮ್ಮೆಯನ್ನು ಹಿಡಿಯಲು ಪ್ರಯತ್ನಿಸುತ್ತದೆ.

    Recommended Video

    ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham

    ಕೇಳಲು ಸರಳ ಕತೆಯಂತೆ ಇದು ಕಾಣುತ್ತದೆ ಆದರೆ ಕತೆ ಇರುವುದು ಕತೆಯ ರೂಪಕದಲ್ಲಿ. ಎಮ್ಮೆಯ ಪಾತ್ರ, ಹಳ್ಳಿಗರ ಸಂಭಾಷಣೆ, ಎಲ್ಲೆ ಸೃಷ್ಟಿಸುವ ಸಮಸ್ಯೆಗಳು ಹೀಗೆ ಎಲ್ಲವೂ ರೂಪಕಗಳನ್ನು ಒಳಗೊಂಡಿದೆ, ಹಾಗಾಗಿ ಇದೊಂದು ಅದ್ಭುತವಾದ ಸಿನಿಮಾ.

    English summary
    Malayalam movie Jallikattu is Indian entry for Oscar 2021. Movie directed by Lijo Jose Pellisery.
    Wednesday, November 25, 2020, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X