twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರೀಕರಣ ಸೆಟ್‌ನಲ್ಲೇ ಕುಸಿದು ಜೀವ ಬಿಟ್ಟ ಹಿರಿಯ ನಟ

    |

    ಮಲಯಾಳಂ ಚಿತ್ರರಂಗ ಹಾಗೂ ನಾಟಕ ರಂಗದ ಹಿರಿಯ ಕಲಾವಿದ ಖಲೀದ್ ಶುಕ್ರವಾರ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

    ಬಹು ದಶಕಗಳಿಂದಲೂ ಮಲಯಾಳಂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಖಲೀದ್ ಅವರು ಸಿನಿಮಾದ ಶೂಟಿಂಗ್ ವೇಳೆ ಸೆಟ್‌ನಲ್ಲಿಯೇ ಕುಸಿದು ಪ್ರಾಣ ಬಿಟ್ಟಿರುವುದು ಕಾಕತಾಳೀಯ.

    ಮಲಯಾಳಂನ ನಟ ಟೊವಿನೊ ಥಾಮಸ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದರು ಖಲೀದ್, ಸಿನಿಮಾದ ಚಿತ್ರೀಕರಣ ಕೇರಳದ ವೈಕೋಮ್ ಬಳಿ ನಡೆಯುತ್ತಿದ್ದು, ಆ ವೇಳೆ ಸೆಟ್‌ನಲ್ಲಿಯೇ ಕುಸಿದು ಬಿದ್ದ ಖಲೀದ್ ಸಾವನ್ನಪ್ಪಿದ್ದಾರೆ.

    ''ಶುಕ್ರವಾರ ಬೆಳಿಗ್ಗೆ 9:30 ರ ವೇಳೆಗೆ ಸೆಟ್‌ನಲ್ಲಿನ ಬಾತ್‌ರೂಮ್‌ನಲ್ಲಿ ಖಲೀದ್ ಪ್ರಜ್ಞೆಯಿಲ್ಲದೆ ಬಿದ್ದಿದ್ದರು, ಇದನ್ನು ಗಮನಿಸಿದ ಸೆಟ್‌ನ ಸಿಬ್ಬಂದಿ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅದಾಗಲೇ ವರ ಪ್ರಾಣ ಪಕ್ಷಿ ಹಾರಿಹೋಗಿತ್ತೆಂದು ವೈದ್ಯರು ಖಚಿತಪಡಿಸಿದ್ದಾರೆ.

    ಖಲೀದ್ ಅವರದ್ದು ಸಿನಿಮಾ ಕುಟುಂಬ

    ಖಲೀದ್ ಅವರದ್ದು ಸಿನಿಮಾ ಕುಟುಂಬ

    ಹಲವಾರು ಸಿನಿಮಾ, ಧಾರಾವಾಹಿ ಮಲಯಾಳಂ ನಾಟಕಗಳಲ್ಲಿ ನಟಿಸಿರುವ ಖಲೀದ್‌ರ ನಾಲ್ವರು ಮಕ್ಕಳು ಸಹ ಮಲಯಾಳಂ ಚಿತ್ರರಂಗದಲ್ಲಿ ಬಹು ಜನಿಪ್ರಿಯರು. ಶೈಜು ಖಲೀದ್ ಮಲಯಾಳಂ ಚಿತ್ರರಂಗದ ಜನಪ್ರಿಯ ಕ್ಯಾಮೆರಾಮನ್ ಆಗಿದ್ದರೆ ಅವರ ಮತ್ತೊಬ್ಬ ಪುತ್ರ ಖಲೀದ್ ರೆಹಮಾನ್ ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕರಾಗಿದ್ದಾರೆ. ಖಲೀದ್‌ರ ಮೊದಲ ಪುತ್ರ ಶಾಜಿ ಖಲೀದ್ ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕ ಹಾಗೂ ಕ್ಯಾಮೆರಾಮನ್ ಆಗಿದ್ದರು, ಆದರೆ ಅವರು 2012 ರಲ್ಲಿಯೇ ನಿಧನ ಹೊಂದಿದರು.

    ಕೊನೆ ಉಸಿರಿರುವವರೆಗೆ ನಟಿಸುತ್ತೇನೆ ಎಂದಿದ್ದ ಖಲೀದ್

    ಕೊನೆ ಉಸಿರಿರುವವರೆಗೆ ನಟಿಸುತ್ತೇನೆ ಎಂದಿದ್ದ ಖಲೀದ್

    ಕಳೆದ ಲಾಕ್‌ಡೌನ್‌ನಲ್ಲಿ ಮನೊರಮಾಗೆ ಸಂದರ್ಶನ ನೀಡಿದ್ದ ಖಲೀದ್, ''ಮಕ್ಕಳಿಬ್ಬರೂ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಇನ್ನೇಕೆ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರಿ ಆರಾಮವಾಗಿ ಮನೆಯಲ್ಲಿರಿ, ದೂರ ದೂರುಗಳಿಗೆ ಚಿತ್ರೀಕರಣಗಳಿಗೆ ಹೋಗಬೇಡಿ ಎಂದೆಲ್ಲ ಹೇಳುತ್ತಾರೆ. ಆದರೆ ನನಗೆ ಸುಮ್ಮನಿರಲು ಇಷ್ಟವಿಲ್ಲ. ನನ್ನ ಕೊನೆ ಉಸಿರಿರುವವರೆಗೆ ನಾನು ನಟಿಸುತ್ತಲೇ ಇರಬೇಕು'' ಎಂದಿದ್ದರು. ಅವರು ಹೇಳಿದಂತೆಯೇ ಅವರ ಕೊನೆಯ ದಿನದ ವರೆಗೂ ಖಲೀದ್ ನಟಿಸುತ್ತಲೇ ಇದ್ದರು.

    'ಮರಿಮಯಂ' ಧಾರಾವಾಹಿ ಪಾತ್ರದಿಂದ ಜನಪ್ರಿಯತೆ

    'ಮರಿಮಯಂ' ಧಾರಾವಾಹಿ ಪಾತ್ರದಿಂದ ಜನಪ್ರಿಯತೆ

    ಆ ಕಾಲಕ್ಕೆ ಒಳ್ಳೆಯ ಡ್ಯಾನ್ಸರ್ ಆಗಿದ್ದ ಖಲೀದ್, ನಾಟಕಗಳಲ್ಲಿ ನಟಿಸುತ್ತಿದ್ದರು. ಬಳಿಕ 'ಮರಿಮಯಂ' ಧಾರಾವಾಹಿಯಲ್ಲಿನ ಅವರ ಹಾಸ್ಯ ಪಾತ್ರ ಬಹಳ ದೊಡ್ಡ ಹಿಟ್ ಆಗಿಬಿಟ್ಟಿತು. ಆ ನಂತರ ಹಲವಾರು ಮಲಯಾಳಂ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದರು. ಆ ನಂತರ ತಮ್ಮ ಮೊದಲ ಪುತ್ರ ಶಾಜಿ ಖಲೀದ್ ಸಿನಿಮಾ ಮೂಲಕವೇ ಸಿನಿಮಾಕ್ಕೆ ಬಣ್ಣ ಹಚ್ಚಿದ ಅವರು ಆ ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ಶಾಜಿ ಖಲೀದ್ 2012 ರಲ್ಲಿ ನಿಧನ ಹೊಂದಿದರಾದರೂ ಖಲೀದ್‌ರ ಇನ್ನೂ ಮೂವರು ಮಕ್ಕಳು ಚಿತ್ರರಂಗದಲ್ಲಿಯೇ ತೊಡಗಿಕೊಂಡಿದ್ದಾರೆ ಹಾಗೂ ಯಶಸ್ವಿಯೂ ಆಗಿದ್ದಾರೆ.

    ನಿಧನ ಹೊಂದಿದರೂ ಬೇಸರವೇನಿಲ್ಲ ಎಂದಿದ್ದ ಖಲೀದ್

    ನಿಧನ ಹೊಂದಿದರೂ ಬೇಸರವೇನಿಲ್ಲ ಎಂದಿದ್ದ ಖಲೀದ್

    ''ನಾನು ಅವರನ್ನು (ಮಕ್ಕಳನ್ನು) ಅವಕಾಶ ಕೇಳುವುದಿಲ್ಲ. ಅವರು ಕರೆದರೆ ಮಾತ್ರವೆ ನಾನು ಶೂಟಿಂಗ್‌ಗೆ ಹೋಗುತ್ತೇನೆ. ನಟಿಸುತ್ತೇನೆ. ಸೆಟ್‌ನಲ್ಲಿ ಸಹ ಅವರೊಟ್ಟಿಗೆ ಹೆಚ್ಚು ಮಾತನಾಡುವುದಿಲ್ಲ. ಏಕೆಂದರೆ ಅಲ್ಲಿ ಅವರು ಅವರ ಕೆಲಸ ಮಾಡಬೇಕು, ನಾನು ನನ್ನ ಕೆಲಸ ಮಾಡಬೇಕು'' ಎಂದಿದ್ದ ಖಲೀದ್. ''ನಾನು ನಾಳೆಯೇ ನಿಧನ ಹೊಂದಿದರೂ ನನಗೆ ಬೇಸರವೇನೂ ಆಗುವುದಿಲ್ಲ. ನಾನು ಚಿತ್ರರಂಗದಲ್ಲಿ ಸಾಕಷ್ಟು ಒಳ್ಳೆಯ ದಿನಗಳನ್ನು ಕಳೆದಿದ್ದೇನೆ. ಸಾಕಷ್ಟು ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದೇನೆ. ನಾನು ಹೋದಮೇಲೂ ಆ ಹೆಸರು ಹಾಗೆಯೇ ಉಳಿದಿರುತ್ತದೆ ಅದು ಸಾಕು'' ಎಂದು ಮನೊರಮಾ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ ಖಲೀದ್ ಹೇಳಿಕೊಂಡಿದ್ದರು.

    English summary
    Malayalam movie industry senior actor Khalid died in movie set near Vaikom. He was acting in Tovino Thomas movie. He was 74 years of age.
    Saturday, June 25, 2022, 17:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X