13 ವರ್ಷದ ಮಗಳ ಎದುರು ಎರಡನೇ ಮದುವೆಯಾದ ಖ್ಯಾತ ನಟಿ

ಮದುವೆ ಬದುಕಿನ ಮಹತ್ವದ ಹಂತ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೆ ಮದುವೆ ಎನ್ನುವುದು ಒಂದೆರಡು ದಿನದ ಆಟ ಅಲ್ಲ, ಜೀವನ ಪೂರ್ತಿ ಸಂಗಾತಿಯ ಜೊತೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ. ಆದರೆ ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿ ಕೈಮೀರಿ ಹೋಗಿರುತ್ತವೆ.

ಆಗ ವಿಚ್ಛೇದನ ಪಡೆಯದೇ ಬೇರೆ ದಾರಿಯೇ ಇಲ್ಲ ಎಂಬ ಭಾವನೆ ಬರುತ್ತೆ. ನಿರೀಕ್ಷೆಯಂತೆ ಸಂಬಂಧ ಕೂಡ ಮುರಿದು ಬೀಳುತ್ತೆ. ಹೀಗೆ ದಾಂಪತ್ಯ ಅಂತ್ಯವಾದಾಗ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ.

Malayalam Star Arya Marries Sibin Benjamin A New Beginning with Daughter Roya

ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಇನ್ನು ಕೆಲವರು ಸಮಯ-ಸಂದರ್ಭ ಕೂಡಿ ಬಂದಾಗ ತಮ್ಮ ಇಷ್ಟದ ಹುಡುಗ ಸಿಕ್ಕಾಗ ಮರು ಮದುವೆಯ ಆಲೋಚನೆ ಮಾಡುತ್ತಾರೆ. ಎರಡನೇ ಮದುವೆಯಾಗುವುದರ ಮೂಲಕ ಹೊಸ ಜೀವನ ಆರಂಭ ಮಾಡುತ್ತಾರೆ. ಉದಾಹರಣೆಗೆ ''ಆರ್ಯ'' ಮತ್ತು ''ಸಿಬಿನ್ ಬೆಂಜಮಿನ್''.

ಹೌದು, ಆರ್ಯ.. ಮಲಯಾಳಂನ ನಟಿ ನಿರೂಪಕಿ ಮತ್ತು ಉದ್ಯಮಿ. ''ಹಿಟ್ ಬಜಾರ್''.. ''ರೇನ್‌ ಬೋ''.. ''ಚಿಲ್ ಬೌಲ್'' ಸೇರಿ ಹತ್ತು ಹಲವು ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿರುವ ಆರ್ಯ ''ಕುಂಜಿರಾಮಾಯಣಂ''.. ''ಪಾವಾ''..''ಉಲ್ಟಾ'' ಹೀಗೆ ಮುಂತಾದ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ಇಂಥಾ ಆರ್ಯ ಸದ್ಯ ತಮ್ಮ ಹದಿಮೂರು ವರ್ಷದ ಮಗಳ ಸಮ್ಮುಖದಲ್ಲಿ ಸಿಬಿನ್ ಅವರ ಜೊತೆ ಮದುವೆಯಾಗಿದ್ದಾರೆ. ವಿಶೇಷ ಅಂದರೆ ಕೇವಲ ಆರ್ಯ ಅವರಿಗೆ ಮಾತ್ರ ಇದು ಎರಡನೇ ಮದುವೆ ಅಲ್ಲ ಬದಲಿಗೆ ಸಿಬಿನ್ ಅವರಿಗೆ ಕೂಡ ಇದು ಎರಡನೇ ಮದುವೆ.

ಹೌದು, ಅಸಲಿಗೆ ಆರ್ಯ ಈ ಹಿಂದೆ 2008ರಲ್ಲಿ ಐಟಿ ಉದ್ಯೋಗಿ ''ರೋಹಿತ್ ಸುಶಿಲನ್'' ಅವರ ಜೊತೆ ಮದುವೆಯಾಗಿದ್ದರು. ಇವರಿಬ್ಬರಿಗೆ ''ರೋಯಾ'' ಎಂಬ ಮಗಳಿದ್ದಾಳೆ. ಆದರೆ .. ಹತ್ತು ವರ್ಷ ಸಂಸಾರ ನಡೆಸಿದ ಇಬ್ಬರು ಆ ನಂತರ 2018ರಲ್ಲಿ ದೂರವಾದರು. ಅಲ್ಲಿಂದ ಮಗಳ ಜೊತೆ ವಾಸವಾಗಿದ್ದ ಆರ್ಯ ಇದೇ ವರ್ಷದ ಮೇನಲ್ಲಿ ಸಿಬಿನ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಹಸೆಮಣೆ ಏರಿದ್ದಾರೆ.

Malayalam Star Arya Marries Sibin Benjamin A New Beginning with Daughter Roya

ಇನ್ನೂ ಆರ್ಯ ಅವರನ್ನು ಅವರ ಮಗಳು ರೋಯಾ ಮದುವೆ ಮಂಟಪಕ್ಕೆ ಕರೆದುಕೊಂಡು ಬಂದಿದ್ದು ಈ ಮದುವೆ ಸಮಾರಂಭದ ವಿಶೇಷಗಳಲ್ಲಿ ಒಂದು. ಇಷ್ಟೇ ಅಲ್ಲ ಮಾಂಗಲ್ಯಧಾರಣೆ ಸಮಯದಲ್ಲಿ ಕೂಡ ತಮ್ಮ ತಾಯಿಯ ಸಂಭ್ರಮದಲ್ಲಿ ಭಾಗಿಯಾಗಿದ್ದರು ರೋಯಾ.

ಸದ್ಯ ಆರ್ಯ ಮತ್ತು ಸಿಬಿನ್ ಅವರ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವರು ಈ ನವಜೋಡಿಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಅಂದ್ಹಾಗೇ ಆರ್ಯ ಅವರನ್ನು ಮದುವೆಯಾದ ಸಿಬಿನ್ ಬೆಂಜಮಿನ್ ಡಿಜೆಯಾಗಿ ಹೆಸರು ಮಾಡಿದವರು. ಕೇರಳದಲ್ಲಿ ಡಿಜೆ ಸಿಬಿನ್
ಎಂದೇ ಇವರು ಜನಪ್ರಿಯ. ಕೇವಲ ಇಷ್ಟೇ ಅಲ್ಲ ನೃತ್ಯ ನಿರ್ದೇಶಕ, ನಟ ಮತ್ತು ಬರಹಗಾರ ಕೂಡ ಹೌದು ಸಿಬಿನ್ ಬೆಂಜಮಿನ್. ''ದಿ ಆರ್ಟಿಸ್ಟ್ಸ್ ಡ್ಯಾನ್ಸ್ ಫ್ಯಾಮ್''ನ ಸಹ-ಸಂಸ್ಥಾಪಕರೂ ಕೂಡ ಹೌದು.

ಇನ್ನೂ ಆರ್ಯ ಈ ಹಿಂದೆ ಮಲಯಾಳಂ ''ಬಿಗ್‌ ಬಾಸ್‌''ನ ಎರಡನೇ ಸೀಸನ್‌ನಲ್ಲಿ ಸ್ಫರ್ಧಿಯಾಗಿ ಭಾಹವಹಿಸಿದ್ದರು. ಡಿಜೆ ಸಿಬಿನ್ ಕಳೆದ ವರ್ಷ ಅಂದರೆ ''ಬಿಗ್ ಬಾಸ್''ನ ಆರನೇ ಸೀಸನ್‌ನಲ್ಲಿ ಭಾಗವಹಿಸಿದ್ದರು. ಹೀಗೆ ಬೇರೆ ಬೇರೆ ಸೀಸನ್‌ನಲ್ಲಿ ಭಾಗವಹಿಸಿದ್ದ ಇಬ್ಬರು ಈಗ ಒಂದಾಗಿದ್ದಾರೆ.

More from Filmibeat

English summary
Bigg Boss' fame Arya marries Sibin Benjamin. See all the stunning photos and read about her second marriage and happy new life with her daughter, Roya.
Read more about: marriage wedding mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X