For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿ ಮೋಹನ್ ಲಾಲ್: 'ದೃಶ್ಯಂ-2' ಕಾಮನ್ ಡಿಪಿ ವೈರಲ್

  |

  ಮಲಯಾಳಂ ಸಿನಿಮಾರಂಗದ ಖ್ಯಾತ ನಟ ಮೋಹನ್ ಲಾಲ್ ಗೆ ಇಂದು (ಮೇ 21) ಹುಟ್ಟುಹಬ್ಬದ ಸಂಭ್ರಮ. 61ನೇ ವಸಂತಕ್ಕೆ ಕಾಲಿಟ್ಟಿರುವ ಸೂಪರ್ ಸ್ಟಾರ್ ಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸುಮಾರು 3 ದಶಕಗಳಿಗೂ ಅಧಿಕ ಕಾಲ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಮೋಹನ್ ಲಾಲ್ ಇಂದಿಗೂ ಅದೇ ಚಾರ್ಮ್ ನಲ್ಲಿದ್ದಾರೆ.

  ಕೇರಳ ಮಾತ್ರವಲ್ಲದೆ ದೇಶದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ಮೋಹನ್ ಲಾಲ್ ಇತ್ತೀಚಿಗೆ ಬಿಡುಗಡೆಯಾದ ದೃಶ್ಯಂ-2 ಮೂಲಕ ಮತ್ತೆ ಕಮಾಲ್ ಮಾಡಿದ್ದರು. ದೃಶ್ಯಂ ಮೊದಲ ಭಾಗದಂತೆ ಪಾರ್ಟ್-2 ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ. ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಚಿತ್ರವನ್ನು ಮಲಯಾಳಂ ಅಭಿಮಾನಿಗಳು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಸಹ ಮುಗಿಬಿದ್ದು ವೀಕ್ಷಿಸಿದ್ದರು.

  ಜಾತಕ ಅಡ್ಡಿಯಾಗಿದ್ದರೂ ಮೋಹನ್ ಲಾಲ್-ಸುಚಿತ್ರಾ ಪ್ರೀತಿ ದಕ್ಕಿಸಿಕೊಂಡಿದ್ದು ಹೇಗೆ? ಇಂಟರಸ್ಟಿಂಗ್ ಲವ್ ಸ್ಟೋರಿಜಾತಕ ಅಡ್ಡಿಯಾಗಿದ್ದರೂ ಮೋಹನ್ ಲಾಲ್-ಸುಚಿತ್ರಾ ಪ್ರೀತಿ ದಕ್ಕಿಸಿಕೊಂಡಿದ್ದು ಹೇಗೆ? ಇಂಟರಸ್ಟಿಂಗ್ ಲವ್ ಸ್ಟೋರಿ

  ಇಂದು ಹುಟ್ಟುಹಬ್ಬದ ದಿನವೂ ದೃಶ್ಯಂ-2 ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ.

  ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳು ದೃಶ್ಯಂ-2 ಚಿತ್ರದ ಗೆಟಪ್ ನ ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ. ಫೋಟೋ ಶೇರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡುತ್ತಿದ್ದಾರೆ.

  ಇನ್ನು ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ವಿಶ್ ಮಾಡಿ, ಮೋಹನ್ ಲಾಲ್ ಜೊತೆಗಿನ ಲೂಸಿಫರ್ ಚಿತ್ರೀಕರಣದ ಫೋಟೋ ಹಂಚಿಕೊಂಡಿದ್ದಾರೆ. ಇನ್ನು ಟೊವಿನೋ ಥಾಮಸ್ ಕೂಡ ಸೂಪರ್ ಸ್ಟಾರ್ ಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

  Malayalam super star Mohanlal celebrating his 61th birthday
  ನೋರಾ ಫತೇಹಿ ಹಾಡಿಗೆ ಪ್ರವಾಹದಲ್ಲೂ ಡ್ಯಾನ್ಸ್ ಮಾಡಿದ ಯುವಕ | Filmibeat Kannada

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ದೃಶ್ಯಂ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಮರಕ್ಕರ್, ರಾಮ್, ಆರಾಟ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಎಂದರೆ ನಟನೆ ಜೊತೆಗೆ ನಿರ್ದೇಶನಕ್ಕೂ ಇಳಿದಿದ್ದಾರೆ ಮೋಹನ್ ಲಾಲ್. ಬರೋಜ್ ಚಿತ್ರದ ಮೂಲಕ ಮೋಹನ್ ಲಾಲ್ ನಿರ್ದೇಶನಕ್ಕೆ ಕೈ ಹಾಕಿದ್ದು, ಮೊದಲ ಸಿನಿಮಾ ಹೇಗೆ ಮೂಡಿಬರಲಿದೆ ಎನ್ನುವ ಕುತೂಹಲದಲ್ಲಿ ಕಾಯುತ್ತಿದ್ದಾರೆ ಅಭಿಮಾನಿಗಳು.

  English summary
  Malayalam super star Mohanlal celebrating his 61th birthday. Fans release Mohanlal's Drishyam-2 DCP.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X