ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಸಹೋದರಿ ಅಮೀನಾ (70) ನಿಧನ

ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ಸಹೋದರಿ ಅಮೀನಾ ಇನ್ನಿಲ್ಲ. 70 ನೇ ವಯಸ್ಸಿನ ಅವರು ಸೆಪ್ಟಂಬರ್ 12 ರಂದು ನಿಧನರಾಗಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಅಮೀನಾ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 13 ರಂದು ನಡೆಯಲಿದೆ.

ಈ ವರ್ಷದ ಆರಂಭದಲ್ಲಿ ಅಂದರೆ ಏಪ್ರಿಲ್‌ನಲ್ಲಿ ನಟ ಮಮ್ಮುಟ್ಟಿಯವರ ತಾಯಿ ಫಾತಿಮಾ ಇಸ್ಮಾಯಿಲ್ ಅವರು ತಮ್ಮ 93 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದರ ಬೆನ್ನಲ್ಲೇ ಮುಮ್ಮಟ್ಟಿ ಅವರು ಸಹೋದರಿ ಅಮೀನಾ ಅವರನ್ನು ಕಳೆದುಕೊಂಡಿದ್ದಾರೆ. ಅಂತಿಮ ವಿಧಿವಿಧಾನಗಳು ನಾಳೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

malayalam-superstar-mammootty

ಮೃತ ಅಮೀನಾ ಅವರು ದಿವಂಗತ ಪಿ ಎಂ ಸಲೀಂ ಅವರನ್ನು ವಿವಾಹವಾಗಿದ್ದರು. ಅಮೀನಾ ಅವರು ತಮ್ಮ ಮಕ್ಕಳಾದ ಜಿಬಿನ್ ಸಲೀಂ, ಜೂಲಿ ಮತ್ತು ಜುಬಿ ಅವರನ್ನು ಅಗಲಿದ್ದಾರೆ. ಅಮೀನಾ ಮಮ್ಮುಟ್ಟಿಯ ಕಿರಿಯ ಸಹೋದರಿ. ಇಬ್ರಾಹಿಂ ಕುಟ್ಟಿ, ಜಕರಿಯಾ ಪಾನಪರಂಬಿಲ್, ಸೌದಾ ಮತ್ತು ಶಫೀನಾ ಇತರ ಒಡಹುಟ್ಟಿದವರು.

ಮಮ್ಮುಟ್ಟಿ ಸಹೋದರಿ ಅಮೀನಾ ನಿಧನ

ಅಮೀನಾ ಅವರನ್ನು ನಸೀಮಾ ಎಂದೂ ಕರೆಯಲಾಗುತ್ತದೆ. ಮಮ್ಮುಟ್ಟಿ ತಮ್ಮ ಸಹೋದರಿ ಅಮೀನಾ ಮತ್ತು ಇತರ ಒಡಹುಟ್ಟಿದವರು ವೈಕೋಮ್ ಬಳಿಯ ಚೆಂಪುದಲ್ಲಿ ಬಾಲ್ಯ ಕಳೆದಿದ್ದಾರೆ ಎಂದು ವರದಿಯಾಗಿದೆ.

malayalam-superstar-mammootty

2023 ಮಮ್ಮುಟ್ಟಿ ಮತ್ತು ಅವರ ಇಡೀ ಕುಟುಂಬಕ್ಕೆ ಭಾರೀ ದುಖಃ ತಂದಿರುವ ವರ್ಷ ಎಂದರೆ ತಪ್ಪಿಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ ನಟ ಮಮ್ಮುಟ್ಟಿ ಅವರ ತಾಯಿ ನಿಧನರಾದರು. ಅವರ ತಾಯಿ ಫಾತಿಮಾ ಇಸ್ಮಾಯಿಲ್ ಕೂಡ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

ಮಲಯಾಲಂ ಚಿತ್ರರಂಗದ ಕಲಾವಿದರು ಮತ್ತು ಅಭಿಮಾನಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆ‌ಗಳಲ್ಲಿ ಅಮೀನಾರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ವರ್ಷ ಮಮ್ಮುಟ್ಟಿಗೆ ವೈಯಕ್ತಿಕವಾಗಿ ತುಂಬಾ ಲಾಸ್ ಆದ ವರ್ಷ. ಆದರೆ ಇದಕ್ಕೆ ವಿರುದ್ಧವಾಗಿ ಅವರು ತಮ್ಮ ವೃತ್ತಿಪರ ವೃತ್ತಿಜೀವನದಲ್ಲಿ ಮೇಲೇರುತ್ತಿದ್ದಾರೆ.

ಲಿಜೋ ಜೋಸ್ ಪೆಲ್ಲಿಸ್ಸೆರಿಯವರ ನನ್ಪಕಲ್ ನೆರತು ಮಾಯಕ್ಕಂ ಚಿತ್ರದಲ್ಲಿನ ನಟನೆಗಾಗಿ ಮುಮ್ಮಟ್ಟಿ ಅವರಿಗೆ ಮತ್ತೊಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಆದರೆ ಅವರು ಪ್ರಶಸ್ತಿ ಗೆದ್ದ ನಂತರ ಯಾವುದೇ ಸಂಭ್ರಮಾಚರಣೆಯಲ್ಲಿ ತೊಡಗಿಲ್ಲ. ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಧನದಿಂದಾಗಿ ಮಮ್ಮುಟ್ಟಿ ಆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

More from Filmibeat

English summary
Malayalam superstar Mammootty’s sister Ameena dies at 70.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X