ಹನಿಟ್ರ್ಯಾಪ್: ವೃದ್ಧನನ್ನು ವಿವಸ್ತ್ರಗೊಳಿಸಿ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಕಿರುತೆರೆ ನಟಿಯ ಬಂಧನ

ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎನ್ನುವ ಮಾತಿದೆ. ಆದರೆ ಕೆಲವೊಮ್ಮೆ ಅಮಾಯಕರನ್ನು ಮೋಸದಿಂದ ಸುಲಿಗೆ ಮಾಡುವವರ ಸಂಖ್ಯೆ ಜಾಸ್ತಿಯಿದೆ. ಗೌರವ, ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎಂದು ಕೆಲವರು ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಬಿದ್ದು ಹಣ ಕಳೆದುಕೊಂಡಿರುವ ನಿದರ್ಶನಗಳಿವೆ. ಇದೀಗ ಕಿರುತೆರೆ ನಟಿಯೊಬ್ಬಳು ಇದೇ ರೀತಿ ವೃದ್ಧನಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೇರಳದ ಕಿರುತೆರೆ ನಟಿ ನಿತ್ಯಾ ಶಶಿ ಈಗ ಹನಿ ಟ್ರ್ಯಾಪ್‌ ಪ್ರಕರಣದಲ್ಲಿ ಪೊಲೀಸರ ಅತಿಥಿ ಆಗಿದ್ದಾಳೆ. ನಿತ್ಯಾ ಹಾಗೂ ಆಕೆಯ ಸ್ನೇಹಿತ ಬಿನು ಸೇರಿ ಮೋಸದಿಂದ ವೃದ್ಧರೊಬ್ಬರನ್ನು ಟ್ರ್ಯಾಪ್ ಮಾಡಿ 11 ಲಕ್ಷ ರೂ. ಹಣ ಸುಲಿಗೆ ಮಾಡಿದ್ದರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಆ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾರೆ. ಕೊನೆಗೆ ಪೊಲೀಸರು ಬುದ್ದವಂತಿಕೆಯಿಂದ ನಿತ್ಯಾ ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ. ಕೇರಳದ ಕಲೈಕೋಡ್, ಪರವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Malayalam tv actress Nithya Sasi arrested in Honey-trap case

ಪೊಲೀಸರ ಮಾಹಿತಿ ಪ್ರಕಾರ, ತಿರುವನಂತಪುರಂನ ಪಟ್ಟಂನಲ್ಲಿ ನೆಲೆಸಿರುವ 75 ವರ್ಷದ ಮಾಜಿ ಸೈನಿಕ, ಕೇರಳ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿ ಆಗಿದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿರುವ ನಿತ್ಯಾ ಶಶಿ ಒಂದಷ್ಟು ಮಲಯಾಳಂ ಧಾರಾವಾಹಿಗಳಲ್ಲಿ ನಟಿಸಿದ್ದಾಳೆ. ದೂರುದಾರರು 74 ವರ್ಷದ ಕೊಲ್ಲಂ ಪರವೂರು ಮೂಲದವರಾಗಿದ್ದಾರೆ. ಅವರು ತಿರುವನಂತಪುರಂನ ಪತ್ತಂನಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಹೆಂಡತಿ ಮಕ್ಕಳು ಇಲ್ಲ. ಕಲೈಕೋಡ್‌ನಲ್ಲಿ ಅವರಿಗೆ ಒಂದು ಮನೆ ಇದೆ. ಅಲ್ಲಿಗೆ ಅಪರೂಪಕ್ಕೆ ಹೋಗುತ್ತಿದ್ದರು. ಹಾಗಾಗಿ ಆ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದರು. ಈ ವಿಚಾರ ತಿಳಿದ ನಿತ್ಯ ಶಶಿ ಮನೆ ಕೊಂಡುಕೊಳ್ಳಲು ವೃದ್ಧನನ್ನು ಮೊದಲಿಗೆ ಭೇಟಿ ಮಾಡಿದ್ದಾರೆ. ನಂತರ ಸಾಕಷ್ಟು ಬಾರಿ ಫೋನ್‌ನಲ್ಲಿ ಮಾತನಾಡಿದ್ದಾರೆ.

ಒಮ್ಮೆ ಮನೆ ನೋಡುವ ನೆಪದಲ್ಲಿ ಹೋಗಿ ನಿತ್ಯಾ ಹಾಗೂ ಬಿನು ಆ ವೃದ್ಧನನ್ನು ಬೆದರಿಸಿ ವಿವಸ್ತ್ರಗೊಳಿಸಿ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಆತನನ್ನು ಬೆದರಿಸಲು ಶುರು ಮಾಡಿದ್ದಾರೆ. ಹಣ ಕೊಡದಿದ್ದರೆ ಈ ಫೋಟೊಗಳನ್ನು ಲೀಕ್ ಮಾಡುತ್ತೇವೆ, ಸೋಶಿಯಲ್ ಮೀಡಿಯಾಗೆ ಹಾಕುತ್ತೇವೆ ಎಂದು ವೃದ್ಧನನ್ನು ಬ್ಲಾಕ್‌ಮೇಲ್ ಮಾಡಿದ್ಧಾರೆ. ಇದಕ್ಕೆ ಬೆದರಿದ ವೃದ್ಧ ಮೊದಲು 6 ಲಕ್ಷ ರೂ. ಬಳಿಕ 5 ಲಕ್ಷ ರೂ. ಕೊಟ್ಟಿದ್ದಾರೆ. ನಂತರ ಅವರು 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆಗ ಆ ವೃದ್ಧ ಪರವೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪರವೂರು ಪೊಲೀಸ್ ಇನ್ಸ್‌ಪೆಕ್ಟರ್ ಎ. ನಿಸರ್ ಮತ್ತವರ ತಂಡ ಆರೋಪಿಗಳನ್ನು ಬಂಧಿಸಿದ್ದರು. ಉಳಿದ ಹಣ ಕೊಡುವ ನೆಪದಲ್ಲಿ ವೃದ್ಧನ ಮೂಲಕ ಪೊಲೀಸರು ಆರೋಪಿಗಳನ್ನು ಪಟ್ಟಂನಲ್ಲಿರುವ ಫ್ಲ್ಯಾಟ್‌ವೊಂದಕ್ಕೆ ಬರುವಂತೆ ಮಾಡಿದ್ದರು. ಅವರು ಅಲ್ಲಿಗೆ ಬರುತ್ತಿದ್ದಂತೆ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಇದೇ ರೀತಿ ಹಣ ಸುಲಿಗೆ ಮಾಡಿದ್ದಾರಾ ಎನ್ನುವ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಬಂಧಿ ಬಿನು ಒನ್ನಿನ್ಮೂಟ್ಟಿಲ್ ಜಿಲ್ಲೆಯ ಗಡಿಭಾಗದಲ್ಲಿ ಮೀನಿನ ಅಂಗಡಿ ಇಟ್ಟುಕೊಂಡಿದ್ದಾನೆ. ಆತ ಶಿವ ನಂದನಂ, ಕಲೈಕೋಡ್, ಪರವೂರ್‌ನಲ್ಲಿ ನೆಲೆಸಿದ್ದು, ನಿತ್ಯಾ ಮನೆಗೆ ಮೀನು ಕೊಡಲು ಹೋಗುತ್ತಿದ್ದ. ಈ ವೇಳೆ ಇಬ್ಬರ ಪರಿಚಯವಾಗಿ ಕೊನೆಗೆ ಇಬ್ಬರು ಸೇರಿ ಹನಿ ಟ್ರ್ಯಾಪ್‌ ಬಲೆ ಹೆಣದಿದ್ದರು.

More from Filmibeat

English summary
Malayalam tv actress Nithya Sasi and her friend arrested in Honey-trap case. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X