ರಿಮೇಕ್ ಆಗುತ್ತಿದೆ ಮಲಯಾಳಂನ ಸೂಪರ್ ಹಿಟ್ 'ಹೋಮ್' ಸಿನಿಮಾ
ಮಲಯಾಳಂ ಚಿತ್ರರಂಗ ಈಗ ದೇಶದ ಗಮನ ಸೆಳೆಯುತ್ತಿದೆ. ಅದ್ಭುತ ಸಿನಿಮಾಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಮಲಯಾಳಂ ಸಿನಿರಂಗಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮಲಯಾಳಂ ಸಿನಿಮಾಗಳು ಚಿತ್ರಮಂದಿರಕ್ಕಿಂತ ಹೆಚ್ಚಾಗಿ ಒಟಿಟಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚಿಗೆ ಒಟಿಟಿಯಲ್ಲಿ ಬಿಡುಗಡೆಯಾದ ಹೋಮ್ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಹೃದಯಸ್ಪರ್ಶಿ ಕಥೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಮಲಯಾಳಂ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ತುಂಬಾ ಇಷ್ಟ ಪಟ್ಟಿದ್ದರು. ಇದೀಗ ಹೋಮ್ ಸಿನಿಮಾ ಬೇರೆ ಭಾಷೆಗೆ ರಿಮೇಕ್ ಆಗುತ್ತಿದೆ.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿರುವ ಹೋಮ್ ಸಿನಿಮಾವೀಗ ಹಿಂದಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. ಹೌದು, ಹೋಮ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿದೆ. ಬಾಲಿವುಡ್ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೋಮ್ ಸಿನಿಮಾದ ರಿಮೇಕ್ ಹಕ್ಕು ಖರೀದಿ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ರೋಜಿನ್ ಥಾಮಸ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ 'ಹೋಮ್'. ವಿಭಿನ್ನ ಮತ್ತು ಹೊಸ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ಮೊಬೈಲ್ ಲೋಕ. ಎಲ್ಲರೂ ಮೊಬೈಲ್ ನಲ್ಲೇ ಬ್ಯುಸಿಯಾಗಿರುತ್ತಾರೆ. ಹಿರಿಯ ಮತ್ತು ಹೊಸ ತಲೆಮಾರಿನ ನಡುವೆ ಮೊಬೈಲ್ ಅಡ್ಡ ಬಂದಾಗ ಏನೆಲ್ಲ ಎಡವಟ್ಟುಗಳು ಆಗುತ್ತವೆ ಎಂಬುದನ್ನು ಈ ಚಿತ್ರ ವಿವರಿಸುತ್ತದೆ. ಆ ಕಥೆಗೆ ಬಾಲಿವುಡ್ ನಿರ್ಮಾಪಕರು ಮನಸೋತಿದ್ದಾರೆ. ಅಬಂಡನ್ಷಾ ಎಂಟರ್ಟೇನ್ಮೆಂಟ್ ಸಂಸ್ಥೆ ಮೂಲಕ ಈ ಸಿನಿಮಾ ಹಿಂದಿಗೆ ರಿಮೇಕ್ ಆಗಲಿದೆ. ಮೂಲ ಚಿತ್ರ ನಿರ್ಮಾಣ ಮಾಡಿದ್ದ 'ಫ್ರೈಡೇ ಫಿಲ್ಮ್ ಹೌಸ್' ಕೂಡ ರಿಮೇಕ್ ಗೆ ಸಾಥ್ ನೀಡುತ್ತಿದೆ.

ಇಂದ್ರನ್ಸ್, ಶ್ರೀನಾಥ್ ಭಾಸಿ, ಶ್ರೀಕಂಠ್ ಮುರಳಿ, ಮುಂಜು ಪಿಳ್ಳೈ, ಜಾನಿ ಆಂಟೊನಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಹೋಮ್ ಸಿನಿಮಾ ಆಗಸ್ಟ್ 19ರಂದು ಬಿಡುಗಡೆ ಆಗಿತ್ತು. ಒಟಿಟಿಯಲ್ಲಿ ಯಶಸ್ಸು ಕಂಡು ಈ ಸಿನಿಮಾವನ್ನು ಈಗ ಹಿಂದಿ ಪ್ರೇಕ್ಷಕರಿಗಾಗಿ ರಿಮೇಕ್ ಮಾಡಲಾಗುತ್ತಿದೆ. ಹಿಂದಿ ಪ್ರೇಕ್ಷಕರಿಗೂ ಇಷ್ಟವಾಗುತ್ತಾ ಎನ್ನುವುದನ್ನು ಕಾದುನೋಡಬೇಕು.
ಇತ್ತೀಚಿನ ದಿನಗಳಲ್ಲೇ ದಕ್ಷಿಣ ಭಾರತದ ಅನೇಕ ಸಿನಿಮಾಗಳು ಹಿಂದಿಗೆ ರಿಮೇಕ್ ಆಗುತ್ತಿದೆ. ದಕ್ಷಿಣದ ಅನೇಕ ಸಿನಿಮಾಗಳನ್ನು ಅಲ್ಲಿನ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈಗ ಹೋಮ್ ಕೂಡ ರಿಮೇಕ್ ಆಗುತ್ತಿದೆ. ರಿಮೇಕ್ನಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗ ಆಗಿಲ್ಲ.


Click it and Unblock the Notifications











