ನನಗೆ ಖಾಯಿಲೆ ಇದೆ ಪ್ಲೀಸ್ ಅರ್ಥ ಮಾಡಿಕೊಳ್ಳಿ ಎಂದು ಕಣ್ಣೀರಿಟ್ಟ ಮಲಯಾಳಂ ನಟಿ..!
ತಾವು ಒಪ್ಪಿಕೊಳ್ಳುವ ಸಿನಿಮಾಗಳಿಗೆ ತಕ್ಕಂತೆ ತಮಗಿರುವ ಪಾತ್ರಕ್ಕೆ ಅನುಸಾರವಾಗಿ ಸೆಲೆಬ್ರೆಟಿಗಳು ತೂಕ ಹೆಚ್ಚಿಸಿಕೊಳ್ಳುವ, ಇಳಿಸಿಕೊಳ್ಳುವ, ಕೆಲವೊಮ್ಮೆ ಫಿಟ್ ನೆಸ್ ಪಾಲಿಸುವ ಸಂಪ್ರದಾಯವನ್ನು ಕಠಿಣವಾಗಿ ಫಾಲೋ ಮಾಡುತ್ತಿರುತ್ತಾರೆ. ಇನ್ನೂ ಕೆಲವೊಮ್ಮೆ ಬ್ಯುಸಿ ಲೈಫಿಗೆ ದೇಹ ಸಪೋರ್ಟ್ ಮಾಡದ ಕಾರಣಕ್ಕೆ ಅಥವಾ ಥೈರಾಯ್ಡ್ ಕಾರಣಕ್ಕೆ ದೇಹದ ತೂಕದಲ್ಲಿ ಏರಿಕೆಯಾಗುತ್ತೆ. ಆದರೆ ಇದನ್ನರಿಯದ ಕೆಲವರು ಸಾಮಾಜಿಕ ಜಾಲತಾಣದ ಮೂಲಕ ನಟಿಮಣಿಯರ ಮೇಲೆ ಮುಗಿ ಬೀಳುತ್ತಾರೆ. ಅವರ ತೂಕ..ದೇಹವನ್ನ ಅಣುಕಿಸುತ್ತಾರೆ. ಯಾರೇ ಇರಲಿ ಸಹಜವಾಗಿ ಈ ತರಹದ ಕಮೆಂಟ್‌ಗಳನ್ನ ನೋಡಿದಾಗ ಅವರಿಗೆ ಆಕಾಶವೇ ಕಳಚಿ ಬಿದ್ದ ಅನುಭವವಾಗುತ್ತೆ. ಸದ್ಯಕ್ಕೆ ಮಲಯಾಳಂ ನಟಿ ಅನ್ನಾ ರಾಜನ್ ವಿಚಾರದಲ್ಲಿಯೂ ಇದೇ ಆಗಿದೆ.
ಹೌದು, ಅಂಗಮಾಲಿ ಡೈರೀಸ್ ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿದ ಅನ್ನಾ ರಾಜನ್, ಇತ್ತೀಚೆಗೆ ಆವೇಶಂ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ತಮ್ಮ ಅಭಿಮಾನಿಗಳಿಗಾಗಿ ಆ ವಿಡಿಯೋವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಎಲ್ಲ ಜನರಿಗೆ, ನಿಮ್ಮ ಕಾಳಜಿ ಮತ್ತು ವಿಶೇಷ ಪ್ರೀತಿಗೆ ಧನ್ಯವಾದ ಎಂದು ಹೇಳಿದ್ದ ಅನ್ನಾ, ಧಗಧಗಿಸುವ ಬಿಸಿಲಿನ ಕಾರಣಕ್ಕೆ, ಮನ ಬಿಚ್ಚಿ ಕುಣಿಯಲು ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಡ್ಯಾನ್ಸ್ ಅಂದರೆ ಅಷ್ಟಕಷ್ಟೇ ಎಂದಿದ್ದರು. ಮುಂದಿನ ಬಾರಿ ಇನ್ನೂ ಚೆನ್ನಾಗಿ ತಮ್ಮ ನೃತ್ಯ ಕಲೆಯನ್ನ ಪ್ರದರ್ಶಿಸುವುದಾಗಿಯೂ ಅನ್ನಾ ಹೇಳಿದ್ದರು.

ಅನ್ನಾ ಇಷ್ಟೆಲ್ಲ ವಿನಂತಿಯನ್ನ ಮಾಡಿಕೊಂಡರು, ಕೆಲವರು.. ಅನ್ನಾ ರಾಜನ್ ಅವರನ್ನ ಟ್ರೋಲ್ ಮಾಡಿದ್ದಾರೆ.ಕುಣಿಯೋಕೆ ಬಾರದವರು ನೆಲ ಡೊಂಕು ಅಂದರಂತೆ, ಹಾಗಾಯಿತು ನಿಮ್ಮ ಕಥೆ ಅಂದಿದ್ದಾರೆ. ಇಷ್ಟ್ಯಾಕೇ ದಪ್ಪ ಆಗಿದ್ದೀರಾ ಎಂದು ಪ್ರಶ್ನೆಯನ್ನ ಕೇಳಿದ್ದಾರೆ. ದಪ್ಪ ಆಗುವುದು ಮಹಾ ಅಪರಾಧ ಎಂಬಂತೆ ಅನ್ನಾ ಅವರನ್ನ ಟೀಕಿಸಿದ್ದಾರೆ. ವ್ಯಂಗ್ಯ ಮಾಡಿದ್ದಾರೆ.
ಅನಿರೀಕ್ಷಿತವಾಗಿ ಎದುರಾದ ಈ ಆಘಾತದಿಂದ ಸದ್ಯಕ್ಕೆ ಕುಗ್ಗಿ ಹೋಗಿರುವ ಅನ್ನಾ, ನನ್ನ ವಿಡಿಯೋ ನಿಮಗೆ ಇಷ್ಟವಾಗದೇ ಇದ್ದರೆ ನೇರವಾಗಿ ಹೇಳಿ ಅದನ್ನ ಬಿಟ್ಟು ಈ ತರಹ ಕಮೆಂಟ್ ಎಲ್ಲ ಮಾಡಬೇಡಿ ಎಂದಿದ್ದಾರೆ. ಇದರಿಂದ ನನಗೆ ನೋವುಂಟು ಆಗಿದೆ ಅಂದಿದ್ದಾರೆ. ನಾನು ಆಟೋಇಮ್ಯೂನ್ ಥೈರಾಯ್ಡ್ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದೇನೆ ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ.

ಕೆಲವೊಮ್ಮೆ ನನ್ನ ದೇಹದಲ್ಲಿ ಊತ ಕಾಣುತ್ತೆ. ಮರು ದಿನ ಮತ್ತೆ ಸಹಜ ಸ್ಥಿತಿಗೆ ಮರಳಿರುತ್ತೆ ಎಂದಿರುವ ಅನ್ನಾ, ನಾನು ಕೀಲು ನೋವು ಮತ್ತು ಇತರ ರೋಗಲಕ್ಷಣಗಳಿಂದ ಬಳಲುತ್ತಿದ್ದೇನೆ. ಆದರೂ, ಕಳೆದ 2 ವರ್ಷಗಳಿಂದ ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ. ಈ ಜಗತ್ತಿಗೆ ನಾನು ಕೂಡ ಸೇರಿದವಳಾಗಿರುವುದರಿಂದ ಏನೂ ಮಾಡದೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಿಮಗೆ ಇಷ್ಟವಿಲ್ಲದಿದ್ದರೆ ನನ್ನ ಬಿಟ್ಟುಬಿಡಿ. ಆದರೆ ಈ ರೀತಿ ನೋವಾಗುವಂತೆ ಕಮೆಂಟ್ ಗಳನ್ನ ಮಾಡಬೇಡಿ ಎಂದಿದ್ದಾರೆ ಅನ್ನಾ ರಾಜನ್

ಸದ್ಯಕ್ಕೆ ಅನ್ನಾ ಅವರ ಡ್ಯಾನ್ಸ್ ವಿಡಿಯೋ ಮತ್ತು ಅವರು ನೊಂದುಕೊಂಡ ಬರೆದಿರುವ ಬರಹ ಎರಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಾಡಿ ಶೇಮಿಂಗ್ ಕುರಿತು ಚರ್ಚೆಗೆ ನಾಂದಿಯನ್ನೂ ಹಾಡಿವೆ. ಪರ-ವಿರೋಧದ ಚರ್ಚೆ ಕೂಡ ನಡೆಯುತ್ತಿದೆ.


Click it and Unblock the Notifications











