ಯಶ್ 'ಟಾಕ್ಸಿಕ್' ಟೀಸರ್ ನೋಡಿ ಮಮ್ಮುಟ್ಟಿ ಫ್ಯಾನ್ಸ್ ಟ್ರೋಲ್ ಮಾಡುತ್ತಿರುವುದು ಯಾಕೆ?

ಯಶ್ ನಟನೆಯ 'ಟಾಕ್ಸಿಕ್' ಚಿತ್ರದ 2ನೇ ಟೀಸರ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅದರಲ್ಲಿರುವ ಕೆಲ ದೃಶ್ಯಗಳ ಬಗ್ಗೆ ಪರ, ವಿರೋಧ ಚರ್ಚೆ ಶುರುವಾಗಿದೆ. ಕಾರಿನ ಒಳಗಿನ ದೃಶ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಟ್ರೋಲಿಗರಿಗೆ ಇದು ಆಹಾರವಾಗಿದೆ. ಇದೀಗ ಮಮ್ಮುಟಿ ಅಭಿಮಾನಿಗಳು ಕೂಡ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟ್ರೋಲ್ ಮಾಡುತ್ತಿದ್ದಾರೆ.

'ಟಾಕ್ಸಿಕ್' ಟೀಸರ್ ನೋಡಿ ಮಮ್ಮುಟಿ ಅಭಿಮಾನಿಗಳು ಯಾಕೆ ಟ್ರೋಲ್ ಮಾಡುತ್ತಾರೆ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಕಾರಣ ನಿರ್ದೇಶಕಿ ಗೀತು ಮೋಹನ್ ದಾಸ್. ಬಹುಕೋಟಿ ವೆಚ್ಚದ ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ದಾರೆ. ಆದರೆ ಚಿತ್ರದಲ್ಲಿರುವ ಹಸಿಬಿಸಿ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಮಹಿಳೆಯನ್ನು ಭೋಗದ ವಸ್ತುವಿನ ರೀತಿ ತೋರಿಸುವುದು ಎಷ್ಟು ಸರಿ? ಇಂತಹ ದೃಶ್ಯ ಬೇಕಿತ್ತಾ? ಎಂದು ಪ್ರಶ್ನಿಸುತ್ತಿದ್ದಾರೆ. ಅದು ಒಬ್ಬ ಮಹಿಳಾ ನಿರ್ದೇಶಕಿ ಇದಕ್ಕೆ ಹೇಗೆ ಒಪ್ಪಿದ್ರು? ಹೇಗೆ ಚಿತ್ರೀಕರಣ ನಡೆಸಿದ್ರು? ಎಂದು ಕೇಳುತ್ತಿದ್ದಾರೆ.

Mammootty Fans Troll Yash s Toxic Teaser Question Geethu Mohan Das Over Controversial Car Scene

ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದ್ದ ಟೀಸರ್‌ನಲ್ಲಿ ಕೂಡ ಇಂಥದ್ದೇ ಸನ್ನಿವೇಶಗಳಿದ್ದವು. ಆಗ ನಿರ್ದೇಶಕ ನಿತಿನ್ ರೆಂಜಿ ಪಣಿಕ್ಕರ್ ವ್ಯಂಗ್ಯ ಮಾಡಿ ಪೋಸ್ಟ್ ಮಾಡಿದ್ದರು. ಗೀತು ಮೋಹನ್ ದಾಸ್ ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ಕಾಮೆಂಟ್ ಮಾಡಿದ್ದರು. ನಿತಿನ್ ಬೇಸರಕ್ಕೆ ಕಾರಣ ತಾವು ನಿರ್ದೇಶಿಸಿದ 'ಕಸಬ' ಸಿನಿಮಾ ವಿವಾದದಲ್ಲಿ ಗೀತು ಮೋಹನ್ ದಾಸ್ ದನಿ ಎತ್ತಿದ್ದು.

10 ವರ್ಷಗಳ ಹಿಂದೆ ಮಮ್ಮುಟ್ಟಿ ನಟನೆಯ 'ಕಸಬ' ಸಿನಿಮಾ ತೆರೆಗೆ ಬಂದಿತ್ತು. ನಿತಿನ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದ ಒಂದು ಡೈಲಾಗ್ ವಿವಾದಕ್ಕೆ ಕಾರಣವಾಗಿತ್ತು. ಚಿತ್ರದಲ್ಲಿ ಮಮ್ಮುಟಿ ಪಾತ್ರ ಮಾತನಾಡುವ ಒಂದು ಡೈಲಾಗ್ ಮಹಿಳೆಯರನ್ನು ಅವಹೇಳನ ಮಾಡುವಂತಿದೆ ನಟಿ ಪಾರ್ವತಿ ಮೆನನ್ ಬೇಸರ ವ್ಯಕ್ತಪಡಿಸಿದ್ದರು. ಆಕೆಯ ಹೇಳಿಕೆ ಖಂಡಿಸಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದ ಘಟನೆ ನಡೆದಿತ್ತು. ಆ ಪಾರ್ವತಿ ಮೆನನ್ ಹೇಳಿಕೆಯನ್ನು ಗೀತು ಮೋಹನ್ ದಾಸ್ ಸಮರ್ಥಿಸಿಕೊಂಡಿದ್ದರು. "ಇಂತಹ ಸಿನಿಮಾ ಡೈಲಾಗ್ ಅನ್ನು ಸೆಲೆಬ್ರೇಟ್ ಮಾಡಬಾರದು, ಅದು ಪ್ರಗತಿಯ ಸಂಕೇತ ಅಲ್ಲ" ಎಂದಿದ್ದರು.

Mammootty Fans Troll Yash s Toxic Teaser Question Geethu Mohan Das Over Controversial Car Scene

ಅಂದು ಸ್ತ್ರೀಯರ ಬಗ್ಗೆ ಆ ರೀತಿ ಮಾತನಾಡಿದ್ದ ಗೀತು ಮೋಹನ್ ದಾಸ್ ಈಗ 'ಟಾಕ್ಸಿಕ್' ಚಿತ್ರದಲ್ಲಿ ಏನು ಮಾಡಿದ್ದಾರೆ? ಎಂದು ಮಮ್ಮುಟ್ಟಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಆಕ್ಷನ್ ಚಿತ್ರದಲ್ಲಿ ಇಂತಹ ಹಸಿಬಿಸಿ ದೃಶ್ಯದ ಅವಶ್ಯಕತೆ ಏನಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಗೀತು ಮೋಹನ್ ದಾಸ್ ಮಲಯಾಳಂ ಚಿತ್ರರಂಗದಲ್ಲಿ 'ವುಮೆನ್ ಇನ್ ಸಿನಿಮಾ ಕಲೆಕ್ಟಿವ್'(WCC) ಭಾಗವಾಗಿದ್ದಾರೆ. ಇಷ್ಟೆಲ್ಲ ಇದ್ರು 'ಟಾಕ್ಸಿಕ್' ಚಿತ್ರದಲ್ಲಿ ಆ ಅಂತಹ ದೃಶ್ಯಗಳು ಹೇಗೆ ಬಂತು ಎಂದು ಕೇಳುವಂತಾಗಿದೆ.

ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಸಾಕಷ್ಟು ಮಹಿಳಾ ಪಾತ್ರಗಳಿವೆ. ನಯನತಾರಾ, ಕಿಯಾರಾ ಅದ್ವಾನಿ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹೀಗೆ ಖ್ಯಾತ ನಟಿಯರು ಬಣ್ಣ ಹಚ್ಚಿದ್ದಾರೆ. ಈಗಾಗಲೇ ಅವರ ಲುಕ್ ಸಹ ರಿವೀಲ್ ಆಗಿದೆ. ಬಹಳ ಅದ್ಧೂರಿಯಾಗಿ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ತಯಾರಾಗಿದೆ.

ಕನ್ನಡ ನೆಟಿವಿಟಿಯ ಸಿನಿಮಾವನ್ನು ಹಾಲಿವುಡ್ ಮಂದಿ ನೋಡವಂತೆ ಮಾಡಬೇಕಿತ್ತು. ಅದು ಬಿಟ್ಟು ಹಾಲಿವುಡ್ ನೇಟಿವಿಟಿ ಸಿನಿಮಾ ಕನ್ನಡ ಪ್ರೇಕ್ಷಕರು ನೋಡುವಂತಾಗಿದೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಯಶ್ ಅಭಿಮಾನಿಗಳು ಟೀಸರ್ ನೋಡಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಈಗಲೇ ಯಾವುದೇ ನಿರ್ಧಾರಕ್ಕೆ ಬರಬೇಡಿ. ಮಾರ್ಚ್ 19ರಂದು ಸಿನಿಮಾ ನೋಡಿ ಮಾತನಾಡಿ ಎನ್ನುತ್ತಿದ್ದಾರೆ.

More from Filmibeat

Read more about: mammootty yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X