ಪವರ್ ಫುಲ್ ರಾಜಕಾರಣಿಯಾದ ಸೂಪರ್ ಸ್ಟಾರ್ ಮಮ್ಮುಟ್ಟಿ
ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ನಟನೆ ಮೂರು ಮೆಗಾ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ. ಪದ್ಮಕುಮಾರ್ ನಿರ್ದೇಶನದ ಐತಿಹಾಸಿಕ ಚಿತ್ರ 'ಮಾಮಂಗಂ'ಈಗಾಗಲೇ ಮೊದಲು ತೆರೆಕಾಣಲಿದೆ.
ಅದಾದ ಬಳಿಕ ಅಜಯ್ ವಾಸುದೇವನ್ ನಿರ್ದೇಶನದ ಆಕ್ಷನ್ ಸಿನಿಮಾ 'ಶೈಲಾಕ್' ಸಿನಿಮಾನೂ ಭಾರಿ ಕುತೂಹಲ ಹುಟ್ಟುಹಾಕಿದೆ.
ಈ ಎರಡು ಚಿತ್ರಗಳ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವ ಸಮಯದಲ್ಲಿ, ಈಗ ಪೊಲಿಟಿಕಲ್ ಡ್ರಾಮಾ ಸಿನಿಮಾ ಕುತೂಹಲ ಮೂಡಿಸಿದೆ. ಸಂತೋಷ್ ವಿಶ್ವನಾಥ್ ನಿರ್ದೇಶನದ 'ಒನ್' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ಸ್ವತಃ ಮಮ್ಮುಟ್ಟಿ ಅವರೇ ಒನ್ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಿದ್ದು, ಜನನಾಯಕನ ಪಾತ್ರದಲ್ಲಿ ಮಮ್ಮುಟ್ಟಿ ಮಿಂಚಿದ್ದಾರೆ. ನೂರಾರು ಜನರ ಎದುರು ವೇದಿಕೆ ಮೇಲೆ ನಿಂತು ಭಾಷಣ ಮಾಡುತ್ತಿರುವ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಮ್ಮಟ್ಟಿ ಅವರ ಪಾತ್ರದ ಬಗ್ಗೆ ಹೆಚ್ಚು ವಿವರ ನೀಡದ ಚಿತ್ರತಂಡ ಅವರು ರಾಜಕಾರಣಿ ಪಾತ್ರ ಮಾಡ್ತಿದ್ದಾರೆ ಎಂದಷ್ಟೆ ಬಹಿರಂಗಪಡಿಸಿದ್ದಾರೆ. ಮೂಲಗಳ ಪ್ರಕಾರ ಕೇರಳ ರಾಜ್ಯದ ಮುಖ್ಯಮಂತ್ರಿ ಪಾತ್ರ ನಿಭಾಯಿಸುತ್ತಿದ್ದಾರೆ ಎನ್ನಲಾಗಿದೆ.
ಉಳಿದಂತೆ ಗಾಯಿತ್ರಿ ಅರುಣ್ ಮತ್ತು ಸಂಯುಕ್ತ ಮೆನನ್ ಇಬ್ಬರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಗೋಪಿ ಸುಂದರ್ ಸಂಗೀತವಿದ್ದು, ರಿಲೀಸ್ ದಿನಾಂಕ ಸದ್ಯಕ್ಕೆ ಪ್ರಕಟವಾಗಿಲ್ಲ.


Click it and Unblock the Notifications











