ಮಮ್ಮುಟ್ಟಿ ಕಾಲ್‌ಶೀಟ್ ಫುಲ್: 2026ರಲ್ಲಿ ಸೆಟ್ಟೇರಲಿವೆ ಮೆಗಾಸ್ಟಾರ್ ಅಭಿನಯದ 5 ಬಿಗ್ ಬಜೆಟ್ ಸಿನಿಮಾಗಳು…

ಮಲಯಾಳಂ ಚಿತ್ರರಂಗದ ಮಮ್ಮುಟ್ಟಿ ಈಗ ಫುಲ್ ಬ್ಯುಸಿ. ವಯಸ್ಸು ಎಪ್ಪತ್ತಾದರೂ ಅವರ ಎನರ್ಜಿ ಮಾತ್ರ ಇಪ್ಪತ್ತರ ಹರೆಯದ ಯುವ ನಟರಿಗೂ ಸವಾಲು ಹಾಕುವಂತಿದೆ. ಸಾಲು ಸಾಲು ಸಿನಿಮಾಗಳ ಮೂಲಕ ಮಮ್ಮುಕ್ಕಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಾರೆ.

ಸದ್ಯ ಮಮ್ಮುಟ್ಟಿ ಅವರು 'ಪಾದಯಾತ್ರ' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಅಭಿಮಾನಿಗಳು ಈಗ 'ಪೇಟ್ರಿಯಾಟ್' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಮಹೇಶ್ ನಾರಾಯಣನ್ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್ ಲಾಲ್ ಕೂಡ ನಟಿಸುತ್ತಿದ್ದು, ಏಪ್ರಿಲ್ 23, 2026 ರಂದು ತೆರೆಗೆ ಬರಲಿದೆ.

Mammootty s 2026 Lineup Mega Projects Sequels and Pan-India Collaborations

ಇಷ್ಟೇ ಅಲ್ಲದೆ, 2026ರ ಸಾಲಿನಲ್ಲಿ ಮಮ್ಮುಟ್ಟಿ ಅವರ ಐದು ಪ್ರಮುಖ ಸಿನಿಮಾಗಳು ಚಿತ್ರೀಕರಣ ಆರಂಭಿಸಲಿವೆ. ಗ್ಯಾಂಗ್‌ಸ್ಟರ್‌ ಡ್ರಾಮಾದಿಂದ ಹಿಡಿದು ಫ್ರಾಂಚೈಸಿ ಸಿನಿಮಾಗಳವರೆಗೆ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಕಾದಿದೆ. ಆ ಚಿತ್ರಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ ನೋಡಿ.

ಧನುಷ್ ಜೊತೆ ಮಮ್ಮುಟ್ಟಿ

ತಮಿಳು ನಟ ಧನುಷ್ ಅವರ 55ನೇ ಸಿನಿಮಾದಲ್ಲಿ ಮಮ್ಮುಟ್ಟಿ ಪ್ರಮುಖ ಪಾತ್ರವೊಂದನ್ನು ಪೋಷಿಸುತ್ತಿದ್ದಾರೆ. ರಾಜ್‌ಕುಮಾಮಾರ್ ಪೆರಿಯಸಾಮಿ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಮೇಲೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿಯಾಗಿದೆ. ಈ ಚಿತ್ರದಲ್ಲಿ ಶ್ರೀಲೀಲಾ ಮತ್ತು ಸಾಯಿ ಪಲ್ಲವಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಮ್ಮುಟ್ಟಿ ಈಗಾಗಲೇ ಈ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದು, ಮೇ 2026ರ ವೇಳೆಗೆ ತಮ್ಮ ಭಾಗದ ಚಿತ್ರೀಕರಣ ಮುಗಿಸಲಿದ್ದಾರೆ.

ನಿತೀಶ್ ಸಹದೇವ್ ಹೊಸ ಪ್ರಯೋಗ...

'ಫ್ಯಾಮಿಲಿ' ಸಿನಿಮಾ ಖ್ಯಾತಿಯ ನಿರ್ದೇಶಕ ನಿತೀಶ್ ಸಹದೇವ್ ಜೊತೆ ಮಮ್ಮುಟ್ಟಿ ಕೈಜೋಡಿಸಿದ್ದಾರೆ. ಈ ಪ್ರಾಜೆಕ್ಟ್ ಜೂನ್ 2026 ರಲ್ಲಿ ಸೆಟ್ಟೇರಲಿದ್ದು, ಸತತ 100 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾದ ಕಥೆಯು ಒಬ್ಬ ಯುವತಿಯ ಸುತ್ತ ಸುತ್ತುತ್ತದೆ ಎನ್ನಲಾಗಿದ್ದು, ಮಮ್ಮುಟ್ಟಿ ಅವರ ಪಾತ್ರ ಬಹಳ ವಿಭಿನ್ನವಾಗಿರಲಿದೆ ಎಂದು ಕೇಳಿಬರುತ್ತಿದೆ.

ಅಂಡರ್ವಲ್ಡ್ ಕಥೆ 'ಮಟ್ಟಂಚೇರಿ ಮಾಫಿಯಾ'...

ಖಾಲಿದ್ ರೆಹಮಾನ್ ನಿರ್ದೇಶನದ 'ಮಟ್ಟಂಚೇರಿ ಮಾಫಿಯಾ' ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ. ಇದು ಪಕ್ಕಾ ಗ್ಯಾಂಗ್‌ಸ್ಟರ್ ಡ್ರಾಮಾ ಆಗಿದ್ದು, ನಸ್ಲೆನ್ ಮತ್ತು ಆಸಿಫ್ ಅಲಿ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸೆಪ್ಟೆಂಬರ್ 2026 ರಲ್ಲಿ ಈ ಸಿನಿಮಾದ ಕೆಲಸಗಳು ಅಧಿಕೃತವಾಗಿ ಶುರುವಾಗಲಿವೆ. ಮಮ್ಮುಟ್ಟಿ ಅವರನ್ನು ಗ್ಯಾಂಗ್‌ಸ್ಟರ್ ಅವತಾರದಲ್ಲಿ ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ.

ಹಿಟ್ ಫ್ರಾಂಚೈಸಿಗಳ ಸೀಕ್ವೆಲ್

ಮಮ್ಮುಟ್ಟಿ ಅಭಿನಯದ ಸೂಪರ್ ಹಿಟ್ ಸಿನಿಮಾಗಳ ಸೀಕ್ವೆಲ್ ಬಗ್ಗೆಯೂ ಚರ್ಚೆ ಜೋರಾಗಿದೆ. ಮೂಲಗಳ ಪ್ರಕಾರ, 'ಕಣ್ಣೂರು ಸ್ಕ್ವಾಡ್ 2' ಅಥವಾ 'ಸಿಬಿಐ' ಸರಣಿಯ ಆರನೇ ಭಾಗದ ಕೆಲಸಗಳು 2026ರಲ್ಲಿ ಆರಂಭವಾಗಬಹುದು. ವಿಶೇಷವೆಂದರೆ, ಈ ಬಾರಿ ಸಿಬಿಐ ಚಿತ್ರಕ್ಕೆ ಹೊಸ ತಂಡ ಚಿತ್ರಕಥೆ ಬರೆಯಲಿದ್ದು, ಹೊಸ ನಿರ್ದೇಶಕರು ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ.

ಕ್ಯೂಬ್ಸ್ ಎಂಟರ್ಟೈನ್ಮೆಂಟ್ ಜೊತೆ ಚಿತ್ರ

ಆರಂಭದಲ್ಲಿ ಕ್ಯೂಬ್ಸ್ ಎಂಟರ್ಟೈನ್ಮೆಂಟ್ ನಿರ್ಮಾಣ ಮಾಡಬೇಕಿದ್ದ ಚಿತ್ರದಿಂದ ನಿರ್ಮಾಪಕರು ಹೊರನಡೆದಿದ್ದಾರೆ. ಆದರೂ, ಮಮ್ಮುಟ್ಟಿ ಮತ್ತು ಖಾಲಿದ್ ರೆಹಮಾನ್ ಕಾಂಬಿನೇಷನ್ನ ಈ ಪ್ರಾಜೆಕ್ಟ್ ಕೈಬಿಟ್ಟಿಲ್ಲ. ಈ ಸಿನಿಮಾದ ಶೂಟಿಂಗ್ ಕೂಡ ಶೀಘ್ರದಲ್ಲೇ ಶುರುವಾಗಲಿದ್ದು, ಉಳಿದ ತಾಂತ್ರಿಕ ವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.

ಒಟ್ಟಿನಲ್ಲಿ 2026ರಲ್ಲಿ ಮಮ್ಮುಟ್ಟಿ ಅವರ ಅಬ್ಬರ ಜೋರಾಗಿರಲಿದೆ. ವಯಸ್ಸು 70 ಆಗಿದ್ದರೂ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಎರಡ್ಮೂರು ವರ್ಷಕ್ಕೆ ಒಂದು ಚಿತ್ರದಲ್ಲಿ ನಟಿಸೋ ಸ್ಟಾರ್ ನಟರು ಮಮ್ಮುಟ್ಟಿ ಅವರನ್ನು ನೋಡಿ ಕಲಿಯುವುದು ಜಾಸ್ತಿಯಿದೆ.

More from Filmibeat

Read more about: mammootty mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X