ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಗೆ ಕ್ಯಾನ್ಸರ್ ? ಚಿತ್ರರಂಗದಿಂದ ದೂರವಾಗಿದ್ದೇಕೆ ?
ಬಣ್ಣದ ಲೋಕ ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟುಕೊಳ್ತಾವೆ. ಹೀಗೆ ಹುಟ್ಟುಕೊಳ್ಳುವ ಸುದ್ದಿಯ ಸತ್ಯಾಸತ್ಯತೆ ತಿಳಿದುಕೊಳ್ಳುವಷ್ಟರಲ್ಲಿ ಆ ಸುದ್ದಿ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರಿಗೂ ತಲುಪಿರುತ್ತೆ. ವೈರಲ್ ಆಗಿರುತ್ತೆ. ಇದ್ರಿಂದ ಆ ಸುದ್ದಿಯ ಕೇಂದ್ರಬಿಂದುವಾದ ವ್ಯಕ್ತಿಗೆ ಆಘಾತವಾಗುತ್ತೆ. ಅವರ ಅಭಿಮಾನಿಗಳನ್ನು ಕೂಡ ಆತಂಕಕ್ಕೆ ದೂಡುತ್ತೆ. ಇದಕ್ಕೆ ಮಮ್ಮುಟ್ಟಿ ಅವರ ಕುರಿತು ಹಬ್ಬಿರುವ ಸುದ್ದಿ ಮತ್ತೊಂದು ಉದಾಹರಣೆ.
ಹೌದು, ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮುಟ್ಟಿಗೆ ಈಗ 73ರ ಪ್ರಾಯ. ಈ ವಯಸ್ಸಿನಲ್ಲಿ ಕೂಡ ದಣಿವರಿಯದ ಮಮ್ಮುಟ್ಟಿ ಒಂದಾದ ಮೇಲೊಂದು ಸಿನಿಮಾಗಳನ್ನು ಮಾಡುತ್ತಲೇ ಬಂದಿದ್ದಾರೆ. ಈಗಾಗಲೇ 400ಕ್ಕೂ ಅಧಿಕ ಚಿತ್ರಗಳಲ್ಲಿ ಆಕ್ಟ್ ಮಾಡಿರುವ ಮಮ್ಮುಟಿ ಹಿಂದೊಮ್ಮೆ ಒಂದೇ ವರ್ಷದಲ್ಲಿ 36 ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಎಲ್ಲರನ್ನು ಬೆರಗಾಗಿಸಿದ್ದರು.

ಇಂಥಾ ಮಮ್ಮುಟ್ಟಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಕೆಲವು ಕಿಡಿಗೇಡಿಗಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಹೀಗೆ ಹಬ್ಬಿಸಲಾದ ಸುದ್ದಿಯನ್ನು ಅನೇಕರು ನಿಜಾ ಎಂದೇ ಅಂದುಕೊಂಡಿದ್ದಾರೆ. ಮಮ್ಮುಟ್ಟಿ ಅವರ ಅಸಂಖ್ಯಾತ ಅಗಣಿತ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ವಾಸ್ತವದಲ್ಲಿ ಈ ಸುದ್ದಿ ಸಂಪೂರ್ಣ ಸುಳ್ಳು. ಖುದ್ದು ಮಮ್ಮುಟ್ಟಿ ಅವರ ತಂಡ ಈ ವಿಚಾರವನ್ನು ಈಗ ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಮಮ್ಮುಟ್ಟಿ ಅವರ ತಂಡ ಮಮ್ಮುಟ್ಟಿ ಅವರ ಆರೋಗ್ಯದ ಕುರಿತು ಹಬ್ಬಿರುವ ಸುದ್ದಿಗಳೆಲ್ಲವೂ ಆಧಾರ ರಹಿತವಾಗಿವೆ ಎಂದು ಹೇಳಿದೆ. ಕಮಮ್ಮುಟ್ಟಿಗೆ ಕ್ಯಾನ್ಸರ್ ಇದೆ ಎನ್ನುವುದು ಶುದ್ಧ ಸುಳ್ಳು ಎಂದಿರುವ ಈ ತಂಡ ಮಮ್ಮುಟ್ಟಿ ಅವರು ರಂಜಾನ್ ಉಪವಾಸ ಮಾಡುತ್ತಿದ್ದಾರೆ. ಈ ಹಿನ್ನೆಲೆ ಅವರು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ ಬದಲಿಗೆ ಚೆನ್ನೈನಲ್ಲಿ ತಮ್ಮ ಕುಟುಂಬದ ಜೊತೆ ಅವರು ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿದೆ. ಕೆಲ ದಿನಗಳ ನಂತರ ಅವರು ಚಿತ್ರೀಕರಣಕ್ಕೆ ಮರಳಲಿದ್ದಾರೆ, ಮೋಹನ್ ಲಾಲ್ ಜೊತೆ ನಟಿಸುತ್ತಿರುವ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಅಂದ್ಹಾಗೇ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಹದಿನಾರು ವರ್ಷಗಳ ನಂತರ ಜೊತೆಯಲ್ಲಿ ಅಭಿನಯಿಸುತ್ತಿದ್ದಾರೆ. 2008ರಲ್ಲಿ ತೆರೆಗೆ ಬಂದ '20' ಚಿತ್ರದಲ್ಲಿ ಅಭಿನಯಿಸಿದ್ದ ಇಬ್ಬರು, ಅದಕ್ಕೂ ಮುನ್ನ ಹಲವಾರು ಚಿತ್ರಗಳಲ್ಲಿ ಜೊತೆಯಲ್ಲಿ ಅಭಿನಯಿಸಿದ್ದರು. ಈಗ ಇನ್ನೊಮ್ಮೆ ಜೊತೆಯಾಗಿದ್ದಾರೆ. ಮಲಯಾಳಂ ಚಿತ್ರರಂಗದ ಇಬ್ಬರು ದಿಗ್ಗಜರು ಅಭಿನಯಿಸುತ್ತಿರುವ ಈ ಚಿತ್ರವನ್ನು ಮಹೇಶ್ ನಾರಾಯಣನ್ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ಈ ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ಅಭಿನಯಿಸುತ್ತಿದ್ಧಾರೆ ಎನ್ನುವ ಸುದ್ದಿ ಇದ್ದು ಫಹಾದ್ ಫಾಸಿಲ್ ಕೂಡ ಈ ಚಿತ್ರದಲ್ಲಿದ್ದಾರೆ. ಇವರನ್ನು ಹೊರಯು ಪಡಿಸಿದರೆ ಕುಂಚಕೋ ಬೋಬನ್ ಕೂಡ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 150 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಯಲಿದ್ದು ಶ್ರೀಲಂಕಾ, ಲಂಡನ್, ದುಬೈ, ಥೈಲ್ಯಾಂಡ್, ಹೈದರಾಬಾದ್, ದೆಹಲಿ, ಕೊಚ್ಚಿಯಲ್ಲಿ ಚಿತ್ರದ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆ. ಶ್ರೀಲಂಕಾದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು ಮುಹೂರ್ತ ಸಮಾರಂಭದಲ್ಲಿ ಹಿಂದೆ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಇಬ್ಬರು ಭಾಗಿಯಾಗಿದ್ದರು.
ಇನ್ನುಳಿದಂತೆ ಕೇವಲ ನಾಯಕನ ಪಾತ್ರ ಮಾತ್ರವಲ್ಲದೇ ನಟನೆಗೆ ಅವಕಾಶ ಇರುವ ಪಾತ್ರಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿರುವ ಮಮ್ಮುಟಿ, ಮೂರು ರಾಷ್ಟ್ರಪ್ರಶಸ್ತಿ, 7 ಕೇರಳ ರಾಜ್ಯ ಪ್ರಶಸ್ತಿ, 14 ಫಿಲ್ಮ್‌ಫೇರ್, ಪದ್ಮಶ್ರೀ ಸೇರಿ ಹಲವು ಪ್ರಶಸ್ತಿ ಗೌರವಗಳನ್ನು ಮಮ್ಮುಟಿ ಸ್ವೀಕರಿಸಿದ್ದಾರೆ. ಒಟ್ನಲ್ಲಿ ಒಟ್ನಲ್ಲಿ ಸಿನಿಮಾ ರಂಗದಲ್ಲಿ ಸತ್ಯಕ್ಕಿಂತ ಸುಳ್ಳಿಗೆ ಹೆಚ್ಚು ಬೆಲೆ ಇದೆ. ಹೀಗಾಗಿಯೇ ಸುಖಾ ಸುಮ್ಮನೆ ಹರಿಬಿಡಲಾಗುವ ಸುಳ್ಳು ಸುದ್ದಿಗಳನ್ನ ಅನೇಕರು ನಂಬ್ತಾರೆ.ಹೀಗೆ ತೇಲಿ ಬಿಡಲಾದ ಸುಳ್ಳು ಸುದ್ದಿಯನ್ನು ಮಮ್ಮುಟ್ಟಿ ತಂಡ ಸದ್ಯ ತಳ್ಳಿ ಹಾಕಿದೆ.


Click it and Unblock the Notifications











