ಬಜೆಟ್ 19 ಕೋಟಿ, ಕಲೆಕ್ಷನ್ 9 ಕೋಟಿ; ಹೀನಾಯವಾಗಿ ಸೋತ ಸ್ಟಾರ್ ನಟನ ಸಿನಿಮಾ!

ಮಲಯಾಳಂ ಚಿತ್ರರಂಗ ಎಂದ ಕೂಡಲೇ ಎಲ್ಲರ ತಲೆಗೂ ಬರುವುದೇ ವಿಭಿನ್ನ ಕಥಾಹಂದರ ಇರುವ ಸಿನಿಮಾಗಳು, ಪ್ರಯೋಗಾತ್ಮಕ ಸಿನಿಮಾಗಳು ಹಾಗೂ ಸಾಲು ಸಾಲು ಹಿಟ್ ಚಿತ್ರಗಳು. ಹೌದು, ಮಲಯಾಳಂ ಸಿನಿಮಾ‌ ಎಂದ ಕೂಡಲೇ ಚಿತ್ರ ಸೂಪರ್ ಹಿಟ್, ಕಥೆ ಸಖತ್ತಾಗಿರುತ್ತೆ ಎಂಬ ಅಂಶಗಳೇ ತಲೆಗೆ ಬರುತ್ತವೆ.

ಆದರೆ ಯಶಸ್ಸಿಗಿಂತ ಹೆಚ್ಚಾಗಿ ಅಲ್ಲಿನ ಚಿತ್ರಗಳು ಹೀನಾಯವಾಗಿ ಸೋಲುತ್ತವೆ ಹಾಗೂ ಬೇರೆ ಯಾವುದೇ ಚಿತ್ರರಂಗದ ಸ್ಟಾರ್ ನಟರ ಚಿತ್ರಗಳೂ ಸೋಲದ ಹಾಗೆ ಇಲ್ಲಿನ ಸ್ಟಾರ್ ನಟರ ಸಿನಿಮಾಗಳು‌ ಮಕಾಡೆ ಮಲಗುತ್ತವೆ ಎಂಬುದನ್ನು ನೀವು ನಂಬಲೇಬೇಕು.

Mammootty starrer Christopher movie collected just half of its budget at box office

ಹೌದು, ನಿವಿನ್ ಪೌಲಿ, ಮಮ್ಮೂಟ್ಟಿ ಹಾಗೂ ಮೋಹನ್ ಲಾಲ್ ರೀತಿಯ ಮಲಯಾಳಂ‌ ಸ್ಟಾರ್ ನಟರ ಸಿನಿಮಾಗಳೇ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ನಿವಿನ್‌ ಪೌಲಿ‌ ನಟನೆಯ ಮಹಾವೀರ್ಯರ್ ಹಾಗೂ ಮೋಹನ್ ಲಾಲ್ ನಟನೆಯ ಅಲೋನ್ ಚಿತ್ರಗಳು ಊಹಿಸಿರದಂತಹ ಅತಿ‌ಕೆಟ್ಟ ರೀತಿಯಲ್ಲಿ ಸೋಲನ್ನು ‌ಕಂಡಿದ್ದವು.

ಈ ಹೀನಾಯ ಸೋಲಿನ ಸಾಲಿಗೆ ಇದೀಗ ನಟ‌ ಮಮ್ಮೂಟ್ಟಿ ನಟನೆಯ ಮಲಯಾಳಂ ಚಿತ್ರ ಕ್ರಿಸ್ಟೋಫರ್ ಸಹ ಸೇರಿಕೊಂಡಿದೆ. ಹೌದು, ಇದೇ ವರ್ಚದ ಫೆಬ್ರವರಿ 9ರಂದು ಬಿಡುಗಡೆಯಾಗಿತ್ತು.‌ ಮೊದಲ‌ ದಿನ 1.7 ಕೋಟಿ‌ ಕಲೆಕ್ಷನ್ ಮಾಡುವ ಮೂಲಕ ಸಾಧಾರಣಕ್ಕಿಂತ ಕಳಪೆ ಎನ್ನುವಂತಹ ಓಪನಿಂಗ್ ಪಡೆದುಕೊಂಡಿತ್ತು.

Mammootty starrer Christopher movie collected just half of its budget at box office

ಇದೇ ಮಮ್ಮೂಟ್ಟಿ ನಟನೆಯ ಕಳೆದ ಸಿನಿಮಾ ರೋಶ್ಚಾಕ್ ಒಳ್ಳೆಯ ಗಳಿಕೆಯನ್ನೇ ಮಾಡಿತ್ತು. ಆದರೆ ಈ‌ ಸಿನಿಮಾ ತನ್ನ ಓಟವನ್ನು ‌ಸಂಪೂರ್ಣವಾಗಿ ಮುಗಿಸುವ ಹೊತ್ತಿಗೆ ವಿಶ್ವದಾದ್ಯಂತ ಕೇವಲ‌ 9.9 ಕೋಟಿ ಗಳಿಸಿದೆ. 18.7 ಕೋಟಿ ಬಜೆಟ್ ‌ವೆಚ್ಚದಲ್ಲಿ ತಯಾರಾಗಿದ್ದ ಈ ಸಿನಿಮಾ ಕೇರಳದಲ್ಲಿ 5.5 ಕೋಟಿ, ಕೇರಳ ಹೊರತುಪಡಿಸಿ ದೇಶದ ಉಳಿದೆಡೆ ಕೇವಲ 55 ಲಕ್ಷ ಹಾಗೂ ವಿದೇಶಿ‌ ನೆಲದಲ್ಲಿ 3.8 ಕೋಟಿ ಗಳಿಸಿದೆ.

ಈ ಮೂಲಕ ಕ್ರಿಸ್ಟೋಫರ್ ಸಿನಿಮಾ ಹೀನಾಯವಾಗಿ ಸೋತು ಡಿಸಾಸ್ಟರ್ ಎನಿಸಿಕೊಂಡಿದೆ. ಸದ್ಯ ಈ ಚಿತ್ರ ಇಂದಿನಿಂದ ( ಮಾರ್ಚ್ 9 ಮೆಜಾನ್ ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾಗ್ತಿದೆ.

ಇನ್ನು ಮಲಯಾಳಂ ಚಿತ್ರರಂಗದ ದೊಡ್ಡ ಸ್ಟಾರ್ ಎಂದೇ ಖ್ಯಾತಿಯನ್ನು ಗಳಿಸಿರುವ ನಟ ಮೋಹನ್ ಲಾನ್ ನಟನೆಯ ಅಲೋನ್ ಎಂಬ ಚಿತ್ರ ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರಮಂದಿರಗಳ ಅಂಗಳಕ್ಕೆ ಬಂದಿತ್ತು. ಇನ್ನು ವಾರ ಮುಗಿಯುವುದರೊಳಗೆ ತನ್ನ ಓಟವನ್ನು ಮುಗಿಸಿದ ಅಲೋನ್ ಚಿತ್ರ ಕೇರಳದಲ್ಲಿ 75 ಲಕ್ಷ ಕಲೆಕ್ಷನ್ ಮಾಡಿತು ಹಾಗೂ ಕೇರಳ ಹೊರತುಪಡಿಸಿ ಉಳಿದೆಡೆ 25 ಲಕ್ಷ ಗಳಿಸಿತು. ಈ ಮೂಲಕ ಒಟ್ಟು 1 ಕೋಟಿ ರೂಪಾಯಿ ಕಲೆಕ್ಷನ್ ಅನ್ನು ಚಿತ್ರ ಮಾಡಿತು.

ಚಿತ್ರಕ್ಕೆ 2.5 ಕೋಟಿ ರೂಪಾಯಿ ಖರ್ಚಾಗಿದ್ದು, ಬಜೆಟ್‌ನಷ್ಟನ್ನೂ ಸಹ ಮಾಡಲಾಗದೇ ಈ ಚಿತ್ರ ಮಕಾಡೆ ಮಲಗಿದೆ. ವಿವಿಧ ಹಕ್ಕುಗಳಿಂದ ಹಾಕಿದ್ದ ಬಂಡವಾಳಕ್ಕಿಂತ ಹೆಚ್ಚು ಹಣ ನಿರ್ಮಾಪಕರ ಕೈಸೇರಿದೆ. ಆದರೆ ಮೋಹನ್ ಲಾನ್ ಸಿನಿ ಕೆರಿಯರ್‌ನ ಕೆಟ್ಟ ಚಿತ್ರ ಎಂಬ ಹಣೆಪಟ್ಟಿ ಮಾತ್ರ ಅಂಟಿಕೊಂಡಿದೆ, ವಿತರಕರು ಕೈಸುಟ್ಟುಕೊಂಡಿದ್ದಾರೆ.

More from Filmibeat

English summary
Mammootty starrer Christopher movie collected just half of it's budget at box office. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X