ರಣಗಲ್‌ ಮೀರಿಸುವಂತಿದೆ ವೆಟ್ರಿ ಸ್ವ್ಯಾಗ್; ಅಬ್ಬಬ್ಬಾ, ಮಮ್ಮುಟಿ ಎದುರು ಶೆಟ್ರ ಖದರ್ ನೋಡಿದ್ರಾ?

ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ ರಾಜ್‌ ಬಿ. ಶೆಟ್ಟಿ. ನಿರ್ದೇಶಕರಾಗಿ ಬರಹಗಾರರಾಗಿ ನಟನಾಗಿ ಶೆಟ್ರು ಗೆದ್ದಿದ್ದಾರೆ. ಹಾಸ್ಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ರಾಜ್ ಬಳಿಕ ಮಾಸ್ ಅವತಾರದಲ್ಲಿ ಮ್ಯಾಜಿಕ್ ಮಾಡುತ್ತಾ ಬರ್ತಿದ್ದಾರೆ. ಇದೀಗ ಮಾಲಿವುಡ್ ಪ್ರವೇಶಿಸಿದ್ದು ಮಮ್ಮುಟಿ ಜೊತೆ ಅಬ್ಬರಿಸಿದ್ದಾರೆ.

'ಟರ್ಬೋ' ಎನ್ನುವ ಚಿತ್ರದಲ್ಲಿ ರಾಜ್‌. ಬಿ ಶೆಟ್ಟಿ ನಟಿಸುತ್ತಿದ್ದಾರೆ ಅಂತ ಹೇಳಲಾಗಿತ್ತು. ಇದೀಗ ಆ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇಲ್ಲಿ ರಾಜ್‌ .ಬಿ ಶೆಟ್ಟಿ ಅವರದ್ದು ಸಣ್ಣ ಪಾತ್ರ ಏನಲ್ಲ. ಮಮ್ಮುಟಿಗೆ ಪೈಪೋಟಿ ಕೊಡುವಂತಿದೆ ಶೆಟ್ರ ಆರ್ಭಟ. ಟ್ರೈಲರ್ ನೋಡಿ ಕನ್ನಡ ಸಿನಿರಸಿಕರು ಮೆಚ್ಚಿಕೊಂಡಿದ್ದಾರೆ. ಕನ್ನಡ ನಿರ್ದೇಶಕರು ನಮ್ಮ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Mammootty s turbo trailer out Raj B Shetty looks menacing

ಬ್ಲಾಕ್‌ಬಸ್ಟರ್ 'ಪುಲಿ ಮುರುಗನ್' ಖ್ಯಾತಿಯ ವೈಶಾಖ್ 'ಟರ್ಬೊ' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ.'ಒಂದು ಮೊಟ್ಟೆಯ ಕಥೆ' ಸಿನಿಮಾ ಮೂಲಕ ಕನ್ನಡ ಸಿನಿರಸಿಕರ ಮುಂದೆ ರಾಜ್. ಶೆಟ್ಟಿ ಬಂದಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ 'ಗರುಡಗಮನ ವೃಷಭವಾಹನ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ತಾವೇ ನಿರ್ದೇಶಿಸಿ ನಟಿಸಿದ್ದ ಚಿತ್ರದಲ್ಲಿ ಶಿವ ಆಗಿ ಅಬ್ಬರಿಸಿದ್ದರು.

ಅಲ್ಲಿವರೆಗೂ ಶೆಟ್ರನ್ನ ಹಾಸ್ಯ ಪಾತ್ರಗಳಲ್ಲೇ ನೋಡಿದ್ದವರು ಮಂಗಳಾದೇವಿಯ ಶಿವನನ್ನು ನೋಡಿ ದಂಗಾಗಿದ್ದರು. ಸದ್ಯ 'ಟರ್ಬೋ' ಚಿತ್ರದಲ್ಲೂ ವೆಟ್ರಿವೇಲ್ ಷಣ್ಮುಗಂ ಎನ್ನುವ ಖಡಕ್ ಪಾತ್ರದಲ್ಲಿ ದರ್ಬಾರ್ ನಡೆಸಿದ್ದಾರೆ. ಚಿತ್ರದಲ್ಲಿ 'ಟರ್ಬೋ' ಜೋಸ್ ಮಮ್ಮುಟ್ಟಿಗೆ ಏಟು ಎದಿರೇಟು ಕೊಡುವಂತಹ ಪಾತ್ರ ಅದು. ಕಪ್ಪು ಅಂಗಿ ಬಿಳಿ ಪಂಚೆಯಲ್ಲಿ ಮಮ್ಮುಟಿ ದರ್ಶನ ಕೊಟ್ಟಿದ್ದಾರೆ. ಕಪ್ಪು ಪಂಚೆ ಶರ್ಟ್‌ನಲ್ಲಿ ರಾಜ್ ಎಂಟ್ರಿ ನೋಡಬಹುದು.

ಇನ್ನು ಶೆಟ್ರ ಎಂಟ್ರಿ ಆರ್ಭಟ ಎಲ್ಲವೂ 'ಮಫ್ತಿ' ಚಿತ್ರದ ಭೈರತಿ ರಣಗಲ್ ಪಾತ್ರವನ್ನು ನೆನಪಿಸುವಂತಿದೆ. ಪರ್ಫಾರ್ಮೆನ್ಸ್ ವಿಚಾರದಲ್ಲೂ ಶಿವಣ್ಣನಿಗೆ ರಾಜ್ ಕಾಂಪಿಟೇಷನ್ ಕಾಣುತ್ತಿದೆ. 'ಟರ್ಬೋ' ಟ್ರೈಲರ್‌ನಲ್ಲಿ ವೆಟ್ರಿ ಝಲಕ್ ಕಟ್ ಮಾಡಿ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. ರಾಜ್ ಜೊತೆಗೆ ಉಗ್ರಂ ಮಂಜು ಕೂಡ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದೊಂದು ಆಕ್ಷನ್ ಕಾಮಿಡಿ ಎಂಟರ್‌ಟೈನರ್ ಆಗಿದ್ದು ಮೇ 23ಕ್ಕೆ ತೆರೆಗೆ ಬರಲಿದೆ. ಆಟೋ ಬಿಲ್ಲ ಆಗಿ ತೆಲುಗು ನಟ ಸುನೀಲ್ ಕೂಡ ಕಾಣಿಸಿಕೊಂಡಿದ್ದಾರೆ. ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕಿ ಸೇರಿದಂತೆ ದೊಡ್ಡ ತಾರಾಗಣ 'ಟರ್ಬೋ' ಚಿತ್ರದಲ್ಲಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿರುವುದು ಟ್ರೈಲರ್‌ನಲ್ಲಿ ಗೊತ್ತಾಗುತ್ತದೆ.

Mammootty s turbo trailer out Raj B Shetty looks menacing

ಕ್ಯಾಬ್ ಡ್ರೈವರ್ 'ಟರ್ಬೊ' ಜೋಸ್ ಪಾತ್ರ ಪರಿಚಯದೊಂದಿಗೆ 133 ಸೆಕೆಂಡ್ ಟ್ರೈಲರ್ ಆರಂಭವಾಗುತ್ತದೆ. ಮಮ್ಮುಟಿ ಜಬರ್ದಸ್ತ್ ಆಕ್ಷನ್ ಜೊತೆಗೆ ಮುಂದುವರೆಯುತ್ತದೆ. ಬಳಿಕ ವೆಟ್ರಿ ಎಂಟ್ರಿ ಆಗುತ್ತದೆ. ಅಲ್ಲಿಂದ ಮುಂದೆ ಟ್ರೈಲರ್ ಮತ್ತೊಂದು ಹಂತಕ್ಕೆ ಹೋಗುತ್ತದೆ. ನಡು ನಡುವೆ ಕಾಮೆಡಿ ಸೀನ್ಸ್ ಬಂದು ಹೋಗುತ್ತವೆ.

ವಿಷ್ಣು ಶರ್ಮಾ ಛಾಯಾಗ್ರಹಣ, ಕ್ರಿಸ್ಟೋ ಕ್ಸೇವಿಯರ್ ಸಂಗೀತ ಚಿತ್ರಕ್ಕಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಘೋಷಣೆ ಆಗಿದ್ದ ಸಿನಿಮಾ 3 ತಿಂಗಳಲ್ಲಿ ಚಿತ್ರೀಕರಣ ಮುಗಿಸಿ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಾಲಿವುಡ್ ಅಂಗಳದಲ್ಲಿ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

More from Filmibeat

English summary
Fans hail screen Presence of Raj b shetty in turbo trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X