ಪ್ರೀತಿಸಿದ್ದ ಒಬ್ಬ ಸತ್ತೋದ, ಮತ್ತೊಬ್ಬ ಎಂಗೇಜ್ಮೆಂಟ್ ಆಗಿದ್ದನ್ನು ಮುಚ್ಚಿಟ್ಟು ಡೇಟಿಂಗ್ ಮಾಡಿದ್ದ- 'ಗೂಳಿ' ನಟಿ

ಮಲಯಾಳಂ ನಟಿ ಮಮತಾ ಮೋಹನ್ ದಾಸ್ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿ ಮೋಡಿ ಮಾಡಿದ್ದಾರೆ. ಗಾಯಕಿಯಾಗಿ ಸೂಪರ್ ಹಿಟ್ ಹಾಡುಗಳಿಗೆ ದನಿಯಾಗಿದ್ದಾರೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲಿದ್ದ ನಟಿ ಅದರ ವಿರುದ್ಧ ಹೋರಾಡಿ ಗೆದ್ದಿದ್ದರು. ಪ್ರಜಿತ್ ಪದ್ಮನಾಭನ್ ಎಂಬುವವರ ಜೊತೆ ಮದುವೆಯಾಗಿ ಒಂದೇ ವರ್ಷದಲ್ಲಿ ಡಿವೋರ್ಸ್ ಪಡೆದು ದೂರಾಗಿದ್ದರು.

ಕನ್ನಡದ 'ಗೂಳಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿ ಮಮತಾ ಮೋಹನ್ ದಾಸ್ ನಟಿಸಿದ್ದರು. ಜಾಯ್ ಅಲುಕ್ಕಾಸ್ ಸಂದರ್ಶನದಲ್ಲಿ ಮಮತಾ ಮೋಹನ್ ದಾಸ್ ಭಾಗಿ ಆಗಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಂದಿಬ್ಬರ ಜೊತೆ ಡೇಟಿಂಗ್ ಮಾಡಿದ್ದ ವಿಚಾರವನ್ನು ತಿಳಿಸಿದ್ದಾರೆ. ಅದಾಗಲೇ ಎಂಗೇಜ್ಮೆಂಟ್ ಆಗಿದ್ದ ವ್ಯಕ್ತಿ ಜೊತೆ ಡೇಟಿಂಗ್ ಮಾಡಿದ್ದ ಸಂಗತಿಯನ್ನು ನೆನಪಿಸಿಕೊಂಡಿದ್ದಾರೆ.

Mamta Mohandas Opens Up About Dating an Engaged Man and Her Short-Lived Marriage After Cancer Battle

"ಕ್ಯಾನ್ಸರ್ ಸಮಸ್ಯೆಯಿಂದ ಗುಣಮುಖಳಾಗಿ ಚೇತರಿಸಿಕೊಂಡ ಬಳಿಕ ಚಿತ್ರರಂಗಕ್ಕೆ ಸಂಬಂಧಿಸಿ ವ್ಯಕ್ತಿ ಜೊತೆ ಡೇಟಿಂಗ್ ಮಾಡಿದೆ. ನಾನು ತುಂಬಾ ಸಂತೋಷವಾಗಿದ್ದೆ. ಅವನಿಗೆ ಅದಾಗಲೇ ಎಂಗೇಜ್ಮೆಂಟ್ ಆಗಿತ್ತು ಎನ್ನುವುದು ಬಳಿಕ ಗೊತ್ತಾಯಿತು. ಒಂದು ತಿಂಗಳ ಬಳಿಕ ಖುದ್ದು ಅವನ ಸಹೋದರನೇ ಈ ವಿಷಯ ಹೇಳಿದ್ದ. ಯಾಕೆ ಸುಳ್ಳು ಹೇಳ್ದೆ ಎಂದು ಅವನನ್ನು ಕೇಳಿದ್ದೆ. ಆ ಪ್ರೀತಿಯಲ್ಲಿ ಪ್ರಾಮಾಣಿಕತೆ ಇರಲಿಲ್ಲ. ಇನ್ನು ನಮ್ಮ ಅಮ್ಮನ ಅನುಮತಿ ಪಡೆದು ನಾನು ಅವನೊಟ್ಟಿಗೆ ಡೇಟಿಂಗ್ ಮಾಡಲು ಹೋಗಿದ್ದೆ" ಎಂದು ಮಮತಾ ಮೋಹನ್ ದಾಸ್ ವಿವರಿಸಿದ್ದಾರೆ.

ಆ ಬಳಿಕ ಅವನೊಟ್ಟಿಗೆ ಬ್ರೇಕಪ್ ಆಗಿತ್ತು. ಮತ್ತೊಬ್ಬನ ಜೊತೆ ಡೇಟಿಂಗ್ ಮಾಡಲು ಮುಂದಾಗಿದ್ದೆ. "ಅವನು ನಾಲ್ಕೈದು ದಿನಕ್ಕೆ ಒಮ್ಮೆ ಕರೆ ಮಾಡ್ತಿದ್ದ. ನಾನು ಸುಖಾ ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೇನೆ ಎನ್ನುವುದು ಗೊತ್ತಾಯಿತು. ಅದೇ ಸಮಯದಲ್ಲಿ ನಮ್ಮ ತಂಗಿ ಮದುವೆಯಲ್ಲಿ ನಾನು ಮದುವೆ ಆಗಿದ್ದ ಪ್ರಜೀತ್ ಭೇಟಿ ಮಾಡಿದ್ದೆ. ನಮ್ಮಿಬ್ಬರ ಅಭಿರುಚಿ ಒಂದೇ ಆಗಿತ್ತು. ನಾವಿಬ್ಬರು ಇಷ್ಟಪಡುತ್ತಿದ್ದೇವೆ ಎನ್ನುವುದು ಗೊತ್ತಾಯಿತು. ಸಹೋದರಿ ಮದುವೆ ಬಳಿಕ ನಾವು ಮದುವೆ ಆಗೋಣ ಎಂದು ಕೇಳಿದ್ದ. ಜೀವನಪೂರ್ತಿ ಜೊತೆಗಿರುತ್ತೇವೆ ಎಂದುಕೊಂಡಿದ್ದೆ. ಆದರೆ ಮದುವೆಯಾಗಿ 6 ತಿಂಗಳಿಗೂ ಇಬ್ಬರೂ ದೂರಾದೆವು" ಎಂದು ಮಮತಾ ಮೆಲುಕು ಹಾಕಿದ್ದಾರೆ.

Mamta Mohandas Opens Up About Dating an Engaged Man and Her Short-Lived Marriage After Cancer Battle

ನನ್ನ ರಿಲೇಷನ್‌ಶಿಪ್ ಐಡಿಯಾಗಳೆಲ್ಲಾ ಸಿನಿಮಾದಿಂದ ಬಂದು ಮಮತಾ ಹೇಳಿದ್ದಾರೆ. "ರಿಲೇಷನ್‌ಶಿಪ್ ಒಂದು ಕ್ಷಣದಲ್ಲಿ ಸಂಭವಿಸುತ್ತವೆ ಎಂದು ನಾನು ನಂಬಿದ್ದೆ. ಆದರೆ ವಾಸ್ತವ ಆ ರೀತಿ ಇರಲ್ಲ. ಮದುವೆಗೆ ಮೊದಲು, ನಾನು ಕೆಲ ವ್ಯಕ್ತಿಗಳನ್ನು ಭೇಟಿಯಾಗಿದ್ದೆ. ನಾನು ಕಾಲೇಜಿನಲ್ಲಿ ಒಬ್ಬರೊಂದಿಗೆ ಡೇಟಿಂಗ್ ಮಾಡಿದ್ದೆ. ಅದನ್ನು ಪೂರ್ಣ ಪ್ರಮಾಣದ ರಿಲೇಷನ್‌ಶಿಪ್ ಎನ್ನಲು ಸಾಧ್ಯವಿಲ್ಲ. ದುರದೃಷ್ಟವಶಾತ್, ಆ ವ್ಯಕ್ತಿ ನಿಧನರಾದರು. ನಮ್ಮೆಲ್ಲ ಸ್ನೇಹಿತರಿಗೆ ಇದು ದೊಡ್ಡ ಆಘಾತವಾಗಿತ್ತು. ಆಗ ನನ್ನ ಕರಿಯರ್ ವೇಗವಾಗಿ ಬೆಳೆಯುತ್ತಿತ್ತು. 24 ವರ್ಷ ವಯಸ್ಸಾಗಿತ್ತು. ಸರಿಯಾದ ರಿಲೇಷನ್‌ಶಿಪ್ ಹುಟ್ಟುವ ಮುನ್ನ ನನಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತು. ಕ್ಯಾನ್ಸರ್ ಚಿಕಿತ್ಸೆಯನ್ನು ಪ್ರಾರಂಭಿಸಿದ ಒಂದು ವರ್ಷದ ನಂತರ ನಾನು ಮದುವೆಯಾದೆ" ಎಂದು ಹೇಳಿದ್ದಾರೆ.

ಬಹ್ರೇನ್‌ನಲ್ಲಿ ಹುಟ್ಟಿ ಬೆಳೆದಿದ್ದ ಮಮತಾ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಮಾಡೆಲ್ ಆಗಿ ಬಣ್ಣದಲೋಕ ಪ್ರವೇಶಿಸಿದ್ದ ಚೆಲುವೆ 2005ರಲ್ಲಿ 'ಮಯೂಕಂ' ಎಂಬ ಮಲಯಾಳಂ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚುವ ಅವಕಾಶ ಸಿಕ್ಕಿತ್ತು. ಸೂಪರ್ ಹಿಟ್ 'ಅರುಂಧತಿ' ಚಿತ್ರಕ್ಕೂ ಮಮತಾ ಮೊದಲ ಆಯ್ಕೆ ಆಗಿದ್ದರು. ಆದರೆ ಕಾರಣಾಂತರಗಳಿಂದ ಆ ಅವಕಾಶ ಅನುಷ್ಕಾ ಶೆಟ್ಟಿ ಪಾಲಾಗಿತ್ತು.

More from Filmibeat

Read more about: mamta mohandas mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X