75 ಕೆಜಿ ವ್ಯಕ್ತಿ ಮೇಲೆ ಮಲಗಿದ್ದರೆ, ಕಿಸ್ ಮಾಡುವುದನ್ನು ಎಂಜಾಯ್ ಮಾಡೋಕ್ಕಾಗುತ್ತಾ? ಎಂದ ನಟಿ

ಕೆಲವೊಮ್ಮೆ ನಟಿಯರು ರೊಮ್ಯಾಂಟಿಕ್ ಸೀನ್ಸ್, ಕಿಸ್ಸಿಂಗ್ ಸೀನ್ಸ್‌ಗಳಲ್ಲಿ ನಟಿಸೋಕೆ ಒಪ್ಪಲ್ಲ. ಈ ಷರತ್ತಿನ ಮೇಲೆಯೇ ನಟಿಸೋಕೆ ಬರುವ ನಟಿಯರು ಇರುತ್ತಾರೆ. ಆದರೆ ರೊಮ್ಯಾಂಟಿಕ್ ಸೀನ್‌ಗಳಲ್ಲಿ ನಟಿಸೋದು ಅಷ್ಟು ಸುಲಭ ಅಲ್ಲ, ನೀವು ಅಂದುಕೊಂಡಂತೆ ಆ ದೃಶ್ಯಗಳ ಚಿತ್ರೀಕರಣ ಇರಲ್ಲ ಎಂದು ನಟಿಯರು ಹೇಳಿಕೊಂಡಿದ್ದಾರೆ.

ತೆಲುಗಿನಲ್ಲಿ ಇತ್ತೀಚೆಗೆ 'ಮಂಗಳವಾರಂ' ಎನ್ನುವ ಸಿನಿಮಾ ಬಂದು ಪ್ರೇಕ್ಷಕರ ಗಮನ ಸೆಳೆದಿತ್ತು. ಅಜಯ್ ಭೂಪತಿ ನಿರ್ದೇಶನದ ಚಿತ್ರದಲ್ಲಿ ನಂದಿತಾ ಶ್ವೇತಾ, ಪಾಯಲ್ ರಜಪೂತ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಮಾಲಿವುಡ್ ನಟಿ ದಿವ್ಯಾ ಪಿಳ್ಳೈ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದರು. ಜಮೀನ್ದಾರ್ ರಾಜೇಶ್ವರಿ ದೇವಿ ಪಾತ್ರದಲ್ಲಿ ಆಕೆಯ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಆರಂಭದಿಂದ ಕೊನೆಯವರೆಗೆ ಜಮೀನ್ದಾರ್ ಪತ್ನಿ ಆಗಿ ಒಳ್ಳೆ ಪಾತ್ರ ಎನಿಸಿದರೂ ಕ್ಲೈಮ್ಯಾಕ್ಸ್‌ನಲ್ಲಿ ವಿಲನ್ ಆಗಿ ಬದಲಾಗಿಬಿಡುವ ಪಾತ್ರ ಅದು. ಆ ಪಾತ್ರ ದಿವ್ಯಾಗೆ ಒಳ್ಳೆ ಹೆಸರು ತಂದುಕೊಟ್ಟಿದೆ.

Mangalavaram film actress reveals how difficult in acting in Romantic scenes

'ಮಂಗಳವಾರಂ' ಚಿತ್ರದಲ್ಲಿ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಕೂಡ ದಿವ್ಯಾ ಪಿಳ್ಳೈ ನಟಿಸಿದ್ದಾರೆ. ಈ ಹಿಂದೆ ಕೂಡ ಮಲಯಾಳಂ ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಆಕೆ ನಟಿಸಿರುವುದು ಇದೆ. ಶೂಟಿಂಗ್ ಸೆಟ್‌ನಲ್ಲಿ ಎಲ್ಲರ ಮುಂದೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸೋದು ಅಷ್ಟು ಸುಲಭ ಅಲ್ಲ ಎಂದು ದಿವ್ಯಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಈ ಹಿಂದೆ 'ಕಾಲ' ಎನ್ನುವ ಮಲಯಾಳಂ ಚಿತ್ರದಲ್ಲಿ ನಟಿಸಿದ್ದೆ. ಆ ಚಿತ್ರದದಲ್ಲಿ ಟೊವಿನೋ ಥಾಮಸ್ ಜೊತೆ ಬೋಲ್ಡ್ ದೃಶ್ಯಗಳಿತ್ತು. ನಾನು ನಟಿಸೋದೆ ಇಲ್ಲ ಎಂದು ಹೇಳಿದೆ. ಬಳಿಕ ನಿರ್ದೇಶಕರಾದ ರೋಹಿತ್ ನನಗೆ ಆ ಬಗ್ಗೆ ತಿಳಿಸಿ ಹೇಳಿದರು. ರೊಮ್ಯಾಂಟಿಕ್ ದೃಶ್ಯ ತಮ್ಮ ಚಿತ್ರಕ್ಕೆ ಎಷ್ಟು ಮುಖ್ಯ, ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯೇ ಶೃಂಗಾರ ದೃಶ್ಯಗಳು ಕೂಡ ಎಂದು ಹೇಳಿ ಒಪ್ಪಿಸಿದ್ದರು ಎಂದಿದ್ದಾರೆ.

Mangalavaram film actress reveals how difficult in acting in Romantic scenes

ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣ ವೇಳೆ ಸಾಕಷ್ಟು ಜನ ಮುಂದೆ ಇರುತ್ತಾರೆ. ಕ್ಯಾಮರಾ ಇರುತ್ತದೆ. ಆ ಸಮಯದಲ್ಲಿ ಮುತ್ತು ಕೊಟ್ಟರೆ, ವಾಹ್ ಮುತ್ತು ಎಷ್ಟು ಚೆನ್ನಾಗಿದೆ ಎಂದು ಎಂಜಾಯ್ ಮಾಡುವಂತಹದು ಇರುವುದಿಲ್ಲ ಎಂದು ದಿವ್ಯಾ ಪಿಳ್ಳೆ ಹೇಳಿ ನಕ್ಕಿದ್ದಾರೆ. ಅಂತಹ ಸನ್ನಿವೇಶಗಳಲ್ಲಿ ಸುಮಾರು 75 ಕೆಜಿ ತೂಕದ ವ್ಯಕ್ತಿ ತನ್ನ ಮೇಲೆ ಮಲಗಿದಾಗ, ಕ್ಯಾಮರಾಗೆ ಕಾಣುವಂತೆ ರೊಮ್ಯಾಂಟಿಕ್ ಆಗಿ ಎಕ್ಸ್‌ಪ್ರೆಷನ್ಸ್ ಕೊಡಬೇಕು. ಅದು ಎಷ್ಟು ಕಷ್ಟವಾಗಿರುತ್ತದೆ ಎಂದು ಊಹಿಸಿ ಎಂದಿದ್ದಾರೆ.

ರೊಮ್ಯಾಂಟಿಕ್ ದೃಶ್ಯ ಚಿತ್ರೀಕರಣಕ್ಕೂ ಮುನ್ನ ಆ ದೃಶ್ಯದ ಬಗ್ಗೆ ತುಂಬಾ ವರ್ಕ್ ಔಟ್ ಮಾಡಬೇಕು. ಹೇಗೆ ನಟಿಸಬೇಕು ಎಂಬುದರ ಬಗ್ಗೆ ಸಹ ನಟನ ಜೊತೆ ಚರ್ಚಿಸಬೇಕು. ಆಗ ಮಾತ್ರ ಕ್ಯಾಮರಾ ಮುಂದೆ ನಟಿಸಲು ಸಾಧ್ಯ. ಕಸಿವಿಸಿ ಎನಿಸಿದರೂ ಅದನ್ನು ನಾವು ಕ್ಯಾಮರಾ ಮುಂದೆ ತೋರ್ಪಡಿಸುವಂತೆ ಇರುವುದಿಲ್ಲ ಎಂದು ದಿವ್ಯಾ ವಿವರಿಸಿದ್ದಾರೆ.

ದುಬೈನಲ್ಲಿ ಮಲಯಾಳಿ ಫ್ಯಾಮಿಲಿಯಲ್ಲಿ ಹುಟ್ಟಿಬೆಳೆದ ದಿವ್ಯಾ ಫಿಳ್ಳೈ ಮೊದಲಿಗೆ ಪೈಲೆಟ್ ಆಗಬೇಕು ಎಂದುಕೊಂಡಿದ್ದರು. ಆದರೆ ವಿಮಾನದಲ್ಲಿ ಓಡಾಡುವುದು ಭಯ ಎನ್ನುವ ಕಾರಣಕ್ಕೆ ತಮ್ಮ ಕನಸು ಕೈ ಬಿಟ್ಟಿದ್ದರು. ಇನ್ನು ಫ್ಲೈದುಬೈ ಉದ್ಯೋಗಿ ಆಗಿಯೂ ಕೆಲಸ ಮಾಡಿದ್ದರು. ಬಳಿಕ ಅದನ್ನು ಬಿಟ್ಟು ನಟಿಯಾಗಬೇಕು ಎಂದು ಚಿತ್ರರಂಗಕ್ಕೆ ಬಂದರು. 'ಅಯಲ್ ಜ್ನಾನಲ್ಲಾ' ಎನ್ನುವ ಮಲಯಾಳಂ ಚಿತ್ರದಲ್ಲಿ ಮೊದಲಿಗೆ ನಟಿಸಿದರು.

ಮಲಯಾಳಂ ಮಾತ್ರವಲ್ಲದೇ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡ ದಿವ್ಯಾ ಪಿಳ್ಳೈ ಬಣ್ಣ ಹಚ್ಚಿದ್ದಾರೆ. ಸದ್ಯ 'ಬಾಜೂಕ' ಹಾಗೂ 'ನಡಿಕರ್' ಎನ್ನುವ ಎರಡು ಸಿನಿಮಾಗಳು ಆಕೆಯ ಕೈಯಲ್ಲಿವೆ. ಇನ್ನು ಮಲಯಾಳಂ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಕೂಡ ಆಕೆ ಕಾಣಿಸಿಕೊಂಡಿದ್ದಾರೆ.

More from Filmibeat

English summary
Mangalavaram film actress about Romantic scenes shooting experience;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X