ಹತ್ತು ವರ್ಷದ ನಂತರ ಸೋಶಿಯಲ್ ಮೀಡಿಯಾ ಮೂಲಕ ಒಂದಾದ ಸ್ಟಾರ್ ನಾಯಕಿ ಮತ್ತು ಮಗಳು..!

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆ ಮಾತು ಇದೆ. ಅದರಲ್ಲೂ ಪ್ರೀತಿಸಿ ಮದುವೆಯಾದವರ ಸಂಸಾರ ಎಂದ ಮೇಲೆ ಇನ್ನಷ್ಟು ಸಂತೋಷದಿಂದ ಇರುತ್ತೆ ಎನ್ನೋ ನಂಬಿಕೆಯೂ ಇದೆ. ಆದರೆ .. ಮಾಲಿವುಡ್ ನಾಯಕಿ ಮಂಜು ವಾರಿಯರ್ ವಿಚಾರದಲ್ಲಿಈ ಗಾದೆ ಮಾತು ಸುಳ್ಳಾಯಿತು. ನಂಬಿಕೆಯ ಪರ್ವತ ಕೂಡ ಕದಲಿತು. ಮಲಯಾಳಂ ಸ್ಟಾರ್ ದಿಲೀಪ್ ಜೊತೆಯ ಲವ್ವು ಮಂಜು ವಾರಿಯರ್‌ಗೆ ನೋವು ಕೊಟ್ಟಿತ್ತು. ಪ್ರೀತಿಸಿ ಮದುವೆಯಾದ ದಿಲೀಪ್ ಮತ್ತು ಮಂಜು ವಾರಿಯರ್ ದಾಂಪತ್ಯ 17 ವರ್ಷದ ನಂತರ ಮುರಿದು ಬಿತ್ತು.

ದಾಂಪತ್ಯ ಬದುಕಿಗೆ ಪೂರ್ಣ ವಿರಾಮವನ್ನು ಹಾಕಿ, ದಿಲೀಪ್ ಮತ್ತು ಮಂಜು ವಾರಿಯರ್ ದೂರವಾದರು. ತಮ್ಮ ತಮ್ಮ ಬದುಕಿನ ಜಂಜಾಟದಲ್ಲಿ ಕಳೆದು ಹೋದರು. 'ಹೌ ಓಲ್ಡ್ ಆರ್ ಯು' ಎಂಬ ಚಿತ್ರದ ಮೂಲಕ ಮಂಜು ವಾರಿಯರ್ ಮತ್ತೆ ಮುಖಕ್ಕೆ ಬಣ್ಣ ಹಚ್ಚಿಕೊಂಡು ಚಿತ್ರರಂಗಕ್ಕೆ ಮರಳಿದರು. ಆ ನಂತರ ನ್ಯಾಶನಲ್ ಫಿಲ್ಮ್ ಅವಾರ್ಡ್, ಕೇರಳ ರಾಜ್ಯ ಪ್ರಶಸ್ತಿ, 7 ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಕೂಡ ಬಾಚಿಕೊಂಡರು.

manju-warrier-and-her-daughter-meenakshi-share-a-heartwarming-instagram-bond

ಇನ್ನೊಂದು ಕಡೆ ದಿಲೀಪ್, ಕನ್ನಡವೂ ಸೇರಿ ದಕ್ಷಿಣದೆಲ್ಲೆಡೆ ಮಿಂಚಿದ ನಾಯಕಿಯೊಬ್ಬರಿಗೆ ಕೊಡಬಾರದ ಕಾಟವನ್ನೆಲ್ಲ ನೀಡಿ ಜೈಲು ಪಾಲಾದರು. ಇಮೇಜ್ ಡ್ಯಾಮೇಜ್ ಮಾಡಿಕೊಂಡರು. ಆದರೆ ಈ ಸಮಯದಲ್ಲಿ ಗಂಡ-ಹೆಂಡತಿಯ ಈ ಜಗಳದಲ್ಲಿ ಇಬ್ಬರ ಕೂಸು ಅಕ್ಷರಶ : ಬಡವಾಯಿತು. ಅಮ್ಮನ ಪ್ರೀತಿಯಿಂದ ದಿಲೀಪ್ ಮತ್ತು ಮಂಜು ವಾರಿಯರ್ ಮಗಳು ಮೀನಾಕ್ಷಿ ವಂಚಿತರಾದರು. ಮುದ್ದಿನ ಮಗಳ ಬೆಳವಣಿಗೆಯನ್ನೂ ಕಣ್ಣೆದುರು ನೋಡಲು ಸಾಧ್ಯವಾಗದೇ ಮಂಜು ವಾರಿಯರ್ ಕೂಡ ಚಡಪಡಿಸಿದರು. ಯಾಕೆಂದರೆ.. ಮಂಜು ವಾರಿಯರ್ ಅವರಿಂದ ದೂರವಾದ ನಂತರ ತಮ್ಮ ಮಗಳು ಮೀನಾಕ್ಷಿಯನ್ನೂ ದಿಲೀಪ್ ತಮ್ಮ ಜೊತೆ ಕರೆದೊಯ್ದಿದ್ದರು.

ಇನ್ನೂ 2014ರಲ್ಲಿ ಮಂಜು ವಾರಿಯರ್ ಗೆ ಸೋಡಾ ಚೀಟಿಯನ್ನು ನೀಡಿದ ನಂತರ 2016ರಲ್ಲಿ ಕಾವ್ಯಾ ಮಾಧವನ್ ಜೊತೆ ಮದುವೆಯಾದ ದಿಲೀಪ್, ಆ ನಂತರ ಮತ್ತೊಂದು ಮಗುವಿಗೆ ತಂದೆಯೂ ಆದರು. ಆ ನಂತರ ಮೇಲೆ ಹೇಳಿದಂತೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ 2017ರಲ್ಲಿ ಕಂಬಿ ಹಿಂದೆ ಹೋದರು. ದಿಲೀಪ್ ಜೈಲಿಗೆ ತೆರಳಿದ ನಂತರ.. ಮಾಜಿ ಪತ್ನಿ ಮಂಜು ವಾರಿಯರ್ ತಂದೆಯ ಬಳಿ ಮಗಳು ಇರುವುದು ಸೇಫ್ ಅಲ್ಲ. ಆಕೆಯನ್ನು ನನ್ನ ವಶಕ್ಕೆ ಬಿಟ್ಟುಕೊಡಿ ಎಂದು ಕೋರಿ ನ್ಯಾಯಾಲಯದ ಮೆಟ್ಟಿಲನ್ನೂ ಕೂಡ ಏರಿದ್ದರು.

manju-warrier-and-her-daughter-meenakshi-share-a-heartwarming-instagram-bond

ಆದರೆ.. ಮಂಜು ವಾರಿಯರ್ ಮನವಿಗೆ ಮನ್ನಣೆ ಸಿಗಲಿಲ್ಲ. ಹೀಗಾಗಿ ಬೇಸರದಲ್ಲಿದ್ದ ಮಂಜು ವಾರಿಯರ್‌ಗೆ ಇದೇ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆಯುವಂತೆ ಇನ್ನೊಂದು ಸುದ್ದಿ ಬರಸಿಡಿಲಿನಂತೆ ಬಡೆದಿತ್ತು. ತಮ್ಮ ತಂದೆಯ ದಿಲೀಪ್ ಮೇಲೆ ದೂರು ದಾಖಲಾದಾಗ ಅಮ್ಮ ಮಂಜು ವಾರಿಯರ್, ದಿಲೀಪ್ ವಿರುದ್ಧ ದನಿಯೆತ್ತಿದ್ದರು, ಇದು ಇಷ್ಟವಾಗದೆ ಮೀನಾಕ್ಷಿ ತಮ್ಮ ಅಮ್ಮ ಮಂಜು ಮೇಲೆ ಬೇಸರ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಆ ಕಾಲದಲ್ಲಿ ವ್ಯಾಪಕವಾಗಿ ಕೇಳಿ ಬಂದಿತ್ತು. ಸಭೆ ಸಮಾರಂಭಗಳಲ್ಲಿ ತಾಯಿಯನ್ನು ಮೀನಾಕ್ಷಿ ಭೇಟಿಯಾಗದ ಕಾರಣ ಈ ಸುದ್ದಿಗೆ ಇನ್ನಷ್ಟು ರೆಕ್ಕೆ-ಪುಕ್ಕಗಳು ಸೇರಿಕೊಂಡಿದ್ದವು.

ಆದರೆ ಈಗ ತಮ್ಮ ತಾಯಿ ಮಂಜು ವಾರಿಯರ್ ಮೇಲೆ ಮೀನಾಕ್ಷಿಗೆ ಇದ್ದ ಕೋಪ ಶಮನವಾದಂತೆ ಇದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ತಾಯಿ ಮತ್ತು ಮಗಳು ಇನ್ಸ್‌ಟಾಗ್ರಾಂನಲ್ಲಿ ಪರಸ್ಪರ ಫಾಲೋ ಮಾಡಲು ಶುರುಮಾಡಿದ್ದಾರೆ. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಮಂಜು ವಾರಿಯರ್ ಸುದ್ದಿಯಲ್ಲಿದ್ದಾರೆ. ಅಂತೂ-ಇಂತೂ ಹತ್ತು ವರ್ಷದ ನಂತರವಾದರೂ ಅಮ್ಮ-ಮಗಳು ಒಂದಾದರಲ್ಲ ಎಂದು ಅಭಿಮಾನಿಗಳು ಕೂಡ ಈಗ ಖುಷಿಯಾಗಿದ್ಧಾರೆ. ಆದಷ್ಟು ಬೇಗ ಮುಖಾಮುಖಿಯಾಗಿ ಸಂಭ್ರಮದ ಆ ಕ್ಷಣಗಳನ್ನೂ ನಮ್ಮ ಜೊತೆ ಹಂಚಿಕೊಳ್ಳಿ ಎಂಬ ಮನವಿಯನ್ನೂ ಮಂಜು ವಾರಿಯರ್ ಅವರ ಅಭಿಮಾನಿಗಳು ಇಬ್ಬರ ಬಳಿ ಮಾಡುತ್ತಿದ್ದಾರೆ.

manju-warrier-and-her-daughter-meenakshi-share-a-heartwarming-instagram-bond

ಅಂದ್ಹಾಗೇ ಮಂಜುವಾರಿಯರ್ ಮತ್ತು ದಿಲೀಪ್ ಮಗಳು ಮೀನಾಕ್ಷಿ ಇತ್ತೀಚೆಗಷ್ಟೇ ಎಂ.ಬಿ.ಬಿ.ಎಸ್ ಪದವಿ ಮುಗಿಸಿದ್ಧಾರೆ. ಹೀಗಾಗಿ ಮಗಳು ಕೊನೆಗೂ ಡಾಕ್ಟರ್ ಆದಳು ಎಂದು ತಮ್ಮ ಖುಷಿಯನ್ನೂ ಹಂಚಿಕೊಂಡಿದ್ದರು. ಆಗ ಮಂಜು ವಾರಿಯರ್ ಕೂಡ ತಮ್ಮ ಸಂತಸ ಹಂಚಿಕೊಳ್ಳಬಹುದು ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಗಿತ್ತು. ಆದರೆ ಈಗ ಹಾಗೂ ಹೀಗೂ ಅಮ್ಮ ಮತ್ತು ಮಗಳು ಒಂದಾಗಿದ್ಧಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಕೂಡ ಸಂಭ್ರಮ ಪಡುತ್ತಿದ್ದಾರೆ ಅನ್ನುವುದು ಸದ್ಯದ ಸಮಾಚಾರ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X