10 ಕೋಟಿಯ ಚಿತ್ರ ದೋಚಿದ್ದು 100 ಕೋಟಿ ; ತಮಿಳುನಾಡಿನಲ್ಲಿ ರಜಿನಿ ಚಿತ್ರವನ್ನ ಹಿಂದಿಕ್ಕಿದ ಮಲಯಾಳಂ ಚಿತ್ರ , ಬೆಂಗಳೂರಿನಲ್ಲಿಯೂ ಜನ

ಕೆಲವೊಮ್ಮೆ ಸಿಕ್ಕಾಪಟ್ಟೆ ಪ್ಲ್ಯಾನ್ ಮಾಡಿ, ಆ ಚಿತ್ರಕ್ಕೆ ಬೇಕಿರುವ ಪ್ರಚಾರಕ್ಕಿಂತ ಹೆಚ್ಚಿನ ಪ್ರಚಾರವನ್ನ ನೀಡಿ ಚಿತ್ರವನ್ನ ಬಿಡುಗಡೆ ಮಾಡಿದರು ಕೂಡ, ಅದೃಷ್ಟ ಕೈ ಕೊಟ್ಟು ಸಿನಿಮಾಗಳು ನೆಲಕಚ್ಚುತ್ತವೆ. ಆದರೆ ಇನ್ನೂ ಕೆಲವೊಮ್ಮೆ ಸಣ್ಣದೊಂದು ಸೂಚನೆಯನ್ನೂ ನೀಡದೆ ದಿಗ್ಗನೆ ಬರುವ ಸಿನಿಮಾಗಳು ಚರಿತ್ರೆಯನ್ನ ಸೃಷ್ಟಿಸಿ ಬಿಡುತ್ತವೆ. ಇದಕ್ಕೆ ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಅತ್ಯುತ್ತಮ ಉದಾಹರಣೆ.

ಹೌದು, ಮಂಜುಮ್ಮೆಲ್ ಬಾಯ್ಸ್.. ಕೇರಳದ ಅಚ್ಚರಿ, ಪವಾಡ. ಕೇವಲ ಹತ್ತು ಕೋಟಿಯಲ್ಲಿ ನಿರ್ಮಾಣವಾದ ಮಂಜುಮ್ಮೆಲ್ ಬಾಯ್ಸ್ ಗಲ್ಲಾಪೆಟ್ಟಿಗೆಯಲ್ಲಿ ಹತ್ತಲ್ಲ..ಇಪ್ಪತ್ತಲ್ಲ.. ನೂರು ಕೋಟಿಯನ್ನ ಗಳಿಸಿದೆ. ಈ ಮೂಲಕ ಹೊಸದೊಂದು ದಾಖಲೆಯನ್ನ ಬರೆದಿದೆ. ಚಿತ್ರಕ್ಕೆ ಕಥೆ ಮುಖ್ಯ ಹೊರತು ಕಾಸು ಅಲ್ಲ ಅನ್ನುವುದನ್ನೂ ಮಂಜುಮ್ಮೆಲ್ ಬಾಯ್ಸ್ ಸಾಬೀತು ಮಾಡಿದೆ.

Manjummel Boys surpass Rajinikanth s Lal Salaam in Tamilnadu

ಇನ್ನೂ ಮಂಜುಮ್ಮೆಲ್ ಬಾಯ್ಸ್ ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ. ತಮಿಳುನಾಡಿನಲ್ಲಿಯೂ ಸದ್ದು ಮಾಡುತ್ತಿದೆ. ಭಾರೀ ಜನಾಭಿಪ್ರಾಯದ ಮೇರೆಗೆ ತಮಿಳಿಗೆ ಡಬ್ ಆಗಿ ಬಿಡುಗಡೆಯಾಗಿ ಅಲ್ಲಿಯೂ ದಾಖಲೆ ಬರೆಯುತ್ತಿದೆ. ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ ತಮಿಳುನಾಡಿನಲ್ಲಿ ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ಗಳಿಕೆಯ ಮುಂದೆ ರಜಿನಿಕಾಂತ್ ವಿಶೇಷ ಪಾತ್ರದಲ್ಲಿ ನಟಿಸಿದ್ದ ಲಾಲ್ ಸಲಾಂ ಚಿತ್ರದ ಗಳಿಕೆ ಏನೆಂದರೆ ಏನೂ ಇಲ್ಲ. ರಜಿನಿಯ ಹೋಮ್ ಪಿಚ್ ನಲ್ಲಿ ನಿರೀಕ್ಷೆಗೂ ಮೀರಿ ಹಣವನ್ನ ಗಳಿಸುತ್ತಿದೆ ಮಂಜುಮ್ಮೆಲ್ ಬಾಯ್ಸ್.

ಅಂದ್ಹಾಗೇ ಮಂಜುಮ್ಮೆಲ್ ಬಾಯ್ಸ್ ಚಿತ್ರದ ಕಥೆ ಸುತ್ತುವುದು ಕಮಲ್ ಹಾಸನ್ ಅವರ ಅಭಿಮಾನಿಗಳ ಸುತ್ತ ಮುತ್ತ. ಕಮಲ್ ಹಾಸನ್​ರ ಅಭಿಮಾನಿಗಳಾದ ಯುವಕರು ಅವರ ನಟನೆಯ 'ಗುಣ' ಸಿನಿಮಾದ ಚಿತ್ರೀಕರಣ ಮಾಡಲಾದ 'ಗುಣಾ ಕೇವ್ಸ್' ಗೆ ಹೋದಾಗ ಗುಂಪಿನ ಒಬ್ಬ ಸದಸ್ಯ ಅಲ್ಲಿನ ಡೆವಿಲ್ಸ್ ಕಿಚನ್ ಎಂಬ ಅತ್ಯಂತ ದುರ್ಗಮ ಪ್ರತಾಪಕ್ಕೆ ಬಿದ್ದು ಬಿಡುತ್ತಾನೆ. ಆಗ ಉಳಿದ ಸದಸ್ಯರು ತಮ್ಮ ಗೆಳೆಯನನ್ನು ಹೇಗೆ ರಕ್ಷಿಸಿಕೊಳ್ಳುತ್ತಾರೆ ಎಂಬುದೇ 'ಮಂಜ್ಞುಮೆಲ್ ಬಾಯ್ಸ' ಸಿನಿಮಾದ ಕತೆ. ವಿಶೇಷ ಅಂದರೆ ತಮಿಳಿಗೆ ಡಬ್ ಆದ ಈ ಚಿತ್ರವನ್ನ ಕಮಲ್ ಹಾಸನ್ ವೀಕ್ಷಿಸಿದ್ದಾರೆ. ಚಿದಂಬರಂ ನಿರ್ದೇಶನ ಹಾಗೂ ಚಿತ್ರದ ಕಥೆಯನ್ನ ಮೆಚ್ಚಿ ಮನಸಾರೆ ಹೊಗಳಿದ್ದಾರೆ.

ಗುಣ ಚಿತ್ರದ ಮರು ಬಿಡುಗಡೆಗೆ ಒತ್ತಾಯ..!

ಮಂಜುಮ್ಮೆಲ್ ಬಾಯ್ಸ್ ನಲ್ಲಿ ಕಮಲ್ ಹಾಸನ್ ಅಭಿನಯದ ಗುಣ ಚಿತ್ರದ ರೆಫೆರೆನ್ಸ್ ನೋಡಿದ್ದೇ ತಡ, ಸಕಲಕಲಾವಲ್ಲಭ ಕಮಲ್ ಹಾಸನ್ ಅವರ ಅಭಿಮಾನಿಗಳು ಗುಣ ಚಿತ್ರವನ್ನ ಮರು ಬಿಡುಗಡೆ ಮಾಡಿ ಎಂದು ಕಮಲ್ ಹಾಸನ್ ಅವರ ದುಂಬಾಲು ಬಿದ್ದಿದ್ದಾರೆ. ಅಭಿಯಾನವನ್ನೂ ಮಾಡುತ್ತಿದ್ದಾರೆ

Manjummel Boys surpass Rajinikanth s Lal Salaam in Tamilnadu

ಮಂಜುಮ್ಮೆಲ್ ಬಾಯ್ಸ್ ನೋಡಲು ಬೆಂಗಳೂರಿನಲ್ಲಿ ನೂಕುನುಗ್ಗಲು..!

ಮಂಜುಮ್ಮೆಲ್ ಬಾಯ್ಸ್ ತೆರೆಗೆ ಬಂದಿದ್ದು ಫೆಬ್ರವರಿ 22ರಂದು. ಆದರೆ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ವಿಶೇಷವಾಗಿ ಬೆಂಗಳೂರಿನಲ್ಲಿ. ಇವತ್ತು ಕೂಡ ಬೆಂಗಳೂರಿನ ಅನೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ಮಂಜುಮ್ಮೆಲ್ ಬಾಯ್ಸ್ ಚಿತ್ರದ ಟಿಕೆಟ್ ಬಿಸಿ ಬಿಸಿ ಬೋಡಾದಂತೆ ಬಿಕರಿಯಾಗ್ತಿವೆ. ಸಿನಿಪೊಲಿಸ್, ಗ್ಲೋಬಲ್ ಮಾಲ್, ಓರಾಯನ್ ಮಾಲ್ ಹೀಗೆ ಬಹುತೇಕ ಕಡೆ ಹೌಸ್ ಫುಲ್ ಬೋರ್ಡ್ ಇವತ್ತು ಬಿದ್ದಿದೆ.

ಮಂಜುಮ್ಮೆಲ್ ಬಾಯ್ಸ್ ನಲ್ಲಿ ಯಾರೆಲ್ಲ ಇದ್ದಾರೆ..?

ತಮಿಳುನಾಡಿನ ಕೊಡೈಕೆನಲ್​ನ 'ಗುಣಾ ಕೇವ್ಸ್​'ಗೆ ಪ್ರವಾಸ ಹೋಗುವ ಯುವಕರ ಕತೆಯನ್ನೊಂದಿರುವ ಮಂಜುಮ್ಮೆಲ್ ಬಾಯ್ಸ್ ನಲ್ಲಿ ಶ್ರೀನಾಥ್ ಬಸ್ಸಿ, ಬಾಲು, ಲಾಲ್​ ಜಿ, ದೀಪಕ್ ಅಭಿರಾಮ್ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಪಾತ್ರವನ್ನ ನಿರ್ವಹಿಸಿರುವ ಸೋಬಿನ್ ಚಿತ್ರಕ್ಕೆ ಇನ್ನೂ ಇಬ್ಬರ ಜೊತೆ ಸೇರಿ ಬಂಡವಾಳವನ್ನೂ ಹೂಡಿದ್ದಾರೆ

Manjummel Boys surpass Rajinikanth s Lal Salaam in Tamilnadu

ಒಟ್ಟಿನಲ್ಲಿ ಸದ್ಯಕ್ಕೆ ಮಂಜುಮ್ಮೆಲ್ ಬಾಯ್ಸ್ ಮಾಲಿವುಡ್ ನಲ್ಲಿ ಹೊಸದೊಂದು ಅಲೆಯನ್ನ ಎಬ್ಬಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ಅಷ್ಟೇ ಅಲ್ಲ, ತಮಿಳುನಾಡಿನಲ್ಲಿಯೂ ಸಂಚಲನ ಸೃಷ್ಟಿಸಿದೆ. ಬೆಂಗಳೂರಿನಲ್ಲಿಯೂ ಮಲಯಾಳಂ ಸಿನಿಮಾ ನೋಡಲು ಜನಸಾಗರ ಹರಿದು ಬರ್ತಿದೆ.

More from Filmibeat

English summary
Manjummel Boys, Malayalam Survival Thriller Inches Close To Rs 100 crore. The Film Also surpass Rajinikanth's 'Lal Salaam' in Tamilnadu.!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X