ರಾಷ್ಟ್ರ ಪ್ರಶಸ್ತಿ ಗೆದ್ದ 'ಮರಕ್ಕರ್' ಬಿಡುಗಡೆ ದಿನಾಂಕ ಪ್ರಕಟ

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯಲ್ಲಿ ತಯಾರಾಗಿರುವ ಮರಕ್ಕರ್ ಸಿನಿಮಾ ಹೊಸ ಬಿಡುಗಡೆ ದಿನಾಂಕ ಪ್ರಕಟ ಮಾಡಿದೆ. ಓಣಮ್ ಹಬ್ಬದ ಪ್ರಯುಕ್ತ ಆಗಸ್ಟ್ 12 ರಂದು ಮರಕ್ಕರ್ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

16ನೇ ಶತಮಾನದ ಐತಿಹಾಸಿಕ ಕಥಾಹಂದರ ಹೊಂದಿರುವ 'ಮರಕ್ಕರ್' ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶನ ಮಾಡಿದ್ದು, ಈ ಮುಂಚೆ ಮಾರ್ಚ್ 26, 2020ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿತ್ತು.

ಎರಡನೇ ಬಾರಿಗೆ ಮೇ 13, 2021 ರಂದು ಮರಕ್ಕರ್ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಕೋವಿಡ್ ಎರಡನೇ ಅಲೆಯ ಪರಿಣಾಮ ಆಗಲೂ ಸಾಧ್ಯವಾಗಿಲಿಲ್ಲ. ಇದೀಗ, ಹೊಸ ದಿನಾಂಕ ಘೋಷಣೆ ಮಾಡಿದ್ದು ಆಗಸ್ಟ್ 12ಕ್ಕೆ ಸಜ್ಜಾಗಿದೆ.

Marakkar Arabikadalinte Simham Will Release on August 12th

ಸ್ವತಃ ಮೋಹನ್ ಲಾಲ್ ಅವರೇ ಟ್ವಿಟ್ಟರ್‌ ಮೂಲಕ ಮರಕ್ಕರ್ ಚಿತ್ರದ ರಿಲೀಸ್ ದಿನಾಂಕ ಪ್ರಕಟಿಸಿದ್ದಾರೆ. ''ಈ ಚಿತ್ರಕ್ಕೆ ಎಲ್ಲರೂ ಬೆಂಬಲಿಸುತ್ತೀರಾ ಎಂಬ ಭರವಸೆ ಇದೆ, ಓಣಮ್ ಹಬ್ಬಕ್ಕೆ ನಾವು ಬರ್ತಿದ್ದೇವೆ'' ಎಂದು ಟ್ವೀಟ್ ಮಾಡಿದ್ದಾರೆ.

ಮೂರು ರಾಷ್ಟ್ರ ಪ್ರಶಸ್ತಿ ಗೆದ್ದ 'ಮರಕ್ಕರ್'

ಅಂದ್ಹಾಗೆ, ಮರಕ್ಕರ್ ಸಿನಿಮಾ 2019ರಲ್ಲಿಯೇ ಪೂರ್ಣಗೊಂಡಿತ್ತು. ಅದೇ ವರ್ಷ ಸೆನ್ಸಾರ್ ಸಹ ಮುಗಿಸಿತ್ತು. ರಾಷ್ಟ್ರ ಪ್ರಶಸ್ತಿಗೂ ನಾಮನಿರ್ದೇಶನವಾಗಿತ್ತು. 67ನೇ ರಾಷ್ಟ್ರ ಪ್ರಶಸ್ತಿ ಸಾಲಿನಲ್ಲಿ ಮರಕ್ಕರ್ ಚಿತ್ರಕ್ಕೆ ಮೂರು ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸ್ಪೆಷಲ್ ಎಫೆಕ್ಸ್ ಹಾಗೂ ಅತ್ಯುತ್ತಮ ವಸ್ತ್ರವಿನ್ಯಾಸಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

Recommended Video

ಒಂದೇ ಮಾರ್ಗದಲ್ಲಿ ನಡೆಯಲು ಮುಂದಾದ ಜೋಡೆತ್ತು | Filmibeat Kannada

ಸುಮಾರು 100 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಮೋಹನ್ ಲಾಲ್ ಜೊತೆಗೆ ಮಂಜು ವಾರಿಯರ್, ಕೀರ್ತಿ ಸುರೇಶ್, ಅರ್ಜುನ್ ಸರ್ಜಾ, ಪ್ರಣವ್ ಮೋಹನ್ ಲಾಲ್, ಸುನೀಲ್ ಶೆಟ್ಟಿ, ಪ್ರಭು, ಸಿದ್ಧಿಕಿ, ನೆಡುಮುಡಿ ವೇಣು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

More from Filmibeat

English summary
Mohan lal starrer and National Award winning Movie marakkar arabikadalinte simham will release on august 12th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X