twitter
    For Quick Alerts
    ALLOW NOTIFICATIONS  
    For Daily Alerts

    ನಿರೀಕ್ಷೆ ಹುಸಿ ಗೊಳಿಸಿದ ಮೋಹನ್‌ಲಾಲ್ ನಟನೆಯ 'ಮರಕ್ಕರ್'!

    |

    ಮೋಹನ್‌ಲಾಲ್ ನಟನೆಯ 'ಮರಕ್ಕರ್' ಸಿನಿಮಾದ 2019ರಲ್ಲಿಯೇ ಸೆನ್ಸಾರ್ ಆಗಿ ಬಿಡುಗಡೆಗೆ ತಯಾರಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳ ಬಳಿಕ ಡಿಸೆಂಬರ್ 02 ರಂದು ಬಿಡುಗಡೆ ಆಯ್ತು.

    ಸಿನಿಮಾ ಬಿಡುಗಡೆ ಮುನ್ನ ಈ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿತ್ತು. ಮಲಯಾಳಂನ ಮೊದಲ 100 ಕೋಟಿ ಬಜೆಟ್ ಸಿನಿಮಾ, ದೊಡ್ಡ ಸ್ಟಾರ್ ನಟರು ಇರುವ ದೊಡ್ಡ ನಿರ್ದೇಶಕ ಪ್ರಿಯದರ್ಶನ್, ಸ್ಟಾರ್ ನಟ ಮೋಹನ್‌ಲಾಲ್ ಒಟ್ಟಿಗೆ ಸೇರಿರುವ ಸಿನಿಮಾ ಇತರೆ-ಇತರೆ ಅಂಶಗಳೆಲ್ಲ ಸೇರಿ ಸಿನಿಮಾದ ಬಗ್ಗೆ ನಿರೀಕ್ಷೆ ನೂರ್ಮಡಿ ಆಗಿತ್ತು.

    ಅದಕ್ಕೆ ತಕ್ಕಂತೆ ಅದ್ಧೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡಲಾಯ್ತು. 'ಮರಕ್ಕರ್' ಸಿನಿಮಾ ಮೊದಲ ದಿನವೇ 3000 ಶೋಗಳನ್ನು ಕೇರಳ ಒಂದರಲ್ಲೇ ಕಂಡಿತು. ಕೇರಳದ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿಯೂ 'ಮರಕ್ಕರ್' ಒಂದನ್ನೇ ಪ್ರದರ್ಶಿಸಲಾಯಿತು. ಸಿನಿಮಾ ಬಿಡುಗಡೆಗೆ ಸರ್ಕಾರವೇ ಮಧ್ಯಸ್ಥಿಕೆ ವಹಿಸಿತ್ತು. ಇಷ್ಟೆಲ್ಲಾ ಆದ ಬಳಿಕ ಸಿನಿಮಾ ಬಿಡುಗಡೆ ಆಯ್ತು, ಆದರೆ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ರಂಜಿಸಲು ವಿಫಲವಾಗಿದೆ.

    'ಮರಕ್ಕರ್' ಸಿನಿಮಾದ ಎರಡು ದಿನದ ಕಲೆಕ್ಷನ್ 20 ಕೋಟಿ ರೂಪಾಯಿ ಆಗಿತ್ತು. ಇದು ದೊಡ್ಡ ಕಲೆಕ್ಷನ್ ಏನೂ ಅಲ್ಲ ಎನ್ನಲಾಗುತ್ತಿದೆ. ಅದರಲ್ಲಿಯೂ ಸಿನಿಮಾಕ್ಕೆ ಹಾಕಿರುವ ಬಂಡವಾಳ, ಸಿನಿಮಾ ಹುಟ್ಟಿಸಿದ್ದ ನಿರೀಕ್ಷೆಯನ್ನು ಗಣನೆಗೆ ತೆಗೆದುಕೊಂಡರೆ ಈ ಮೊತ್ತ ಬಹಳ ಕಡಿಮೆ ಎಂಬುದೇ ಸಿನಿಮಾ ಮಾರುಕಟ್ಟೆ ವಿಶ್ಲೇಷಕರ ಮಾತು.

    'ಮರಕ್ಕರ್' ಕಲೆಕ್ಷನ್ ಎಷ್ಟು ಕೋಟಿ?

    'ಮರಕ್ಕರ್' ಕಲೆಕ್ಷನ್ ಎಷ್ಟು ಕೋಟಿ?

    'ಮರಕ್ಕರ್' ಸಿನಿಮಾ ಮೂರನೇ ದಿನಕ್ಕೆ 30 ಕೋಟಿ ರುಪಾಯಿ ಗಳಿಕೆಯ ಸಮೀಪಕ್ಕೆ ಬಂದಿದೆ. ಕೇರಳ ರಾಜ್ಯದಲ್ಲಿ ಮೊದಲ ದಿನ ಚೆನ್ನಾಗಿ ಪ್ರದರ್ಶನ ಕಂಡಿದ್ದ ಸಿನಿಮಾ ಆ ನಂತರ ಕುಂಟುತ್ತಿರುವುದು ಸಿನಿಮಾ ನಿರ್ಮಾಪಕರಿಗೆ ಆತಂಕ ತಂದಿದೆ. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ಮೋಹನ್‌ಲಾಲ್ ನಟನೆಯ 'ಲುಸಿಫರ್' ಸಿನಿಮಾದ ಓಪನಿಂಗ್ ಡೇ ಕಲೆಕ್ಷನ್ ದಾಖಲೆಯನ್ನು ಸಹ ಮುರಿಯಲು ಸಾಧ್ಯವಾಗಿಲ್ಲ.

    ವಿದೇಶಗಳಲ್ಲಿ ಫ್ಲಾಪ್‌ ಆದ ಸಿನಿಮಾ

    ವಿದೇಶಗಳಲ್ಲಿ ಫ್ಲಾಪ್‌ ಆದ ಸಿನಿಮಾ

    'ಮರಕ್ಕರ್' ಸಿನಿಮಾವನ್ನು ಅರಬ್ ಹಾಗೂ ಗಲ್ಫ್ ದೇಶಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಿದ್ದರು. ಆ ಭಾಗದಲ್ಲಿ ಮೋಹನ್‌ಲಾಲ್‌ಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ. ಜೊತೆಗೆ ಆಸ್ಟ್ರೇಲಿಯ, ಅಮೆರಿಕ ಸೇರಿದಂತೆ ಇನ್ನೂ ಕೆಲವು ಕಡೆ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಅರಬ್ ಹಾಗೂ ಅಮೆರಿಕದಲ್ಲಿ 'ಮರಕ್ಕರ್' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ ಎನ್ನಲಾಗುತ್ತಿದೆ. ಅಮೆರಿಕದಲ್ಲಿಯಂತೂ ಸಿನಿಮಾ ನಷ್ಟ ಅನುಭವಿಸಿದೆ. ಆದರೆ ಕೇರಳದಲ್ಲಿ ದಿನಗಳೆದಂತೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಚಿತ್ರತಂಡ ಹೇಳಿದ್ದು ಇದು ಧನಾತ್ಮಕ ಬೆಳವಣಿಗೆ ಆಗಿದೆ. ದೊಡ್ಡ ಬಜೆಟ್‌ನ ಈ ಸಿನಿಮಾ ಇನ್ನಷ್ಟು ಹಣ ಗಳಿಸುವ, ಆ ಮೂಲಕ ನಿರ್ಮಾಪಕರ ಜೇಬು ತುಂಬಿಸುವ ನಿರೀಕ್ಷೆ ಹುಟ್ಟಿಸಿದೆ.

    ಒಟಿಟಿಗೆ ಮಾರಾಟ ಮಾಡಿದ್ದ ನಿರ್ಮಾಪಕ

    ಒಟಿಟಿಗೆ ಮಾರಾಟ ಮಾಡಿದ್ದ ನಿರ್ಮಾಪಕ

    'ಮರಕ್ಕರ್' ಸಿನಿಮಾವನ್ನು ನಿರ್ಮಾಪಕ ಆಂಟೊನಿ ಪೆರುಂಬವೂರ್ ಒಟಿಟಿಗೆ ಮಾರಾಟ ಮಾಡಿಬಿಟ್ಟಿದ್ದರು. ಆದರೆ ಈ ನಿರ್ಧಾರಕ್ಕೆ ಕೇರಳ ಚಿತ್ರಪ್ರದರ್ಶಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಕೊನೆಗೆ ಕೇರಳದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರು ಮಧ್ಯ ಪ್ರವೇಶಸಿ ಸಂಧಾನ ನಡೆಸಿ ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗುವಂತೆ ಮಾಡಿದರು. ಇದಕ್ಕಾಗಿ ಚಿತ್ರಮಂದಿರಗಳಿಂದ ದೊಡ್ಡ ಮೊತ್ತವನ್ನು ಅಡ್ವಾನ್ಸ್ ಆಗಿ ಪಡೆಯಲಾಗಿತ್ತು.

    ಪ್ರಿಯದರ್ಶನ್ ನಿರ್ದೇಶಿಸಿರುವ ಸಿನಿಮಾ

    ಪ್ರಿಯದರ್ಶನ್ ನಿರ್ದೇಶಿಸಿರುವ ಸಿನಿಮಾ

    'ಮರಕ್ಕರ್' ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ಪ್ರಿಯದರ್ಶನ್ ನಿರ್ದೇಶನ ಮಾಡಿದ್ದು, ಸಿನಿಮಾವು ಐತಿಹಾಸಿಕ ಯೋಧ ಕುಂಜಳಿ ಮರಕ್ಕರ್ ಕುರಿತಾದದ್ದಾಗಿದೆ. ಸಿನಿಮಾದಲ್ಲಿ ಮೋಹನ್‌ಲಾಲ್ ಎದುರು ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಜೊತೆಗೆ ಬಾಲಿವುಡ್‌ನ ಸುನಿಲ್ ಶೆಟ್ಟಿ, ಅರ್ಜುನ್ ಸರ್ಜಾ, ತಮಿಳಿನ ಪ್ರಭು, ಸುಹಾಸಿನಿ ಅವರುಗಳು ನಟಿಸಿದ್ದಾರೆ. ಸಿನಿಮಾಕ್ಕೆ ಈಗಾಗಲೇ ರಾಷ್ಟ್ರಪ್ರಶಸ್ತಿ ಸಹ ಲಭಿಸಿದೆ.

    English summary
    Mahonlal's most anticipated movie Marakkar failed to beat 2019 Mohanlal's movie Lucifer in box office collection. Marakkar is one of the big budget movie of Malayalam movie industry.
    Monday, December 6, 2021, 17:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X